• Home
  • »
  • News
  • »
  • kalburgi
  • »
  • Kalaburgi: 8 ಸಾವಿರ ಸಂಬಳ; ಆದ್ರೆ ಇವರೇ ಕಲಬುರಗಿಯ ಅನ್ನದಾಸೋಹಿ!

Kalaburgi: 8 ಸಾವಿರ ಸಂಬಳ; ಆದ್ರೆ ಇವರೇ ಕಲಬುರಗಿಯ ಅನ್ನದಾಸೋಹಿ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇವರಿಗೆ ಬರೋದೇ ತಿಂಗಳಿಗೆ 8 ಸಾವಿರ ಸಂಬಳ. ಆದರೂ ಅದರಲ್ಲೂ ಬಡ ನಿರ್ಗತಿಕರ ಹಸಿವು ತಣಿಸುವ ಮಹಾತ್ಕಾರ್ಯ ಮಾಡುತ್ತಾರೆ. ಯಾರಿವರು ಅಂತೀರಾ? ಇವರೇ ನೋಡಿ..

  • Share this:

    ಕಲಬುರಗಿ: ಹಸಿವು ಅಂತಿದ್ದವರಿಗೆ ಇಲ್ಲಿ ಊಟ ನೀಡ್ತಾರೆ. ಅದೆಲ್ಲೋ ಬಸ್ ಸ್ಟ್ಯಾಂಡ್​ನಲ್ಲಿದ್ದವರಿಗೂ ತಲುಪಿಸ್ತಾರೆ ಅನ್ನ ಆಹಾರ. ಯಾರೇ ಹಸಿವಿನಿಂದ ಬಳಲುತ್ತಿದ್ರೂ ಕೈ ಹಿಡಿದು ಉಪಚರಿಸೋ ಇವರು ಕಲಬುರಗಿಯ ಆಪತ್ಬಾಂಧವರು. ಹೀಗೆ ಹುಡುಕಿ ಹುಡುಕಿ ನಿರ್ಗತಿಕರ ಪಾಲಿಗೆ ಅನ್ನ ಆಹಾರವನ್ನ ನೀಡ್ತಿರೋ ಇವರು ಕಲಬುರಗಿಯ (Kalaburagi) ಕೇದಾರನಾಥ ಕುಲಕರ್ಣಿ. ಹುಟ್ಟು ವಿಶೇಷಚೇತನರಾದರೂ, ಅಪ್ಪನ ಅಭಿಲಾಷೆಯಂತೆ ನಡೆದುಕೊಳ್ಳುತ್ತಿದ್ದಾರೆ.‌


    ಸ್ನೇಹಿತರ ಜೊತೆಗೂಡಿ ಸೇವೆ
    ದಿನಂಪ್ರತಿ ಬೆಳಿಗ್ಗೆ ಎದ್ದವರೇ ನಿರ್ಗತಿಕರನ್ನ ಹುಡುಕಿ ಅವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಾತ್ರವಲ್ಲದೇ, ಕುಲಕರ್ಣಿ ಸ್ನೇಹಿತರು ಕೂಡಾ ಇವ್ರ ಈ ಮಹತ್ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.


    ಸೇವೆಗೆ ತಂದೆಯೇ ಕಾರಣ!
    ಕೇದಾರನಾಥ ಕುಲಕರ್ಣಿ ಅವರು ಈ ರೀತಿಯ ಸೇವೆಯಲ್ಲಿ ತೊಡಗಿಕೊಳ್ಳುವುದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಕುಲಕರ್ಣಿ ಅವರ ತಂದೆ ಅವರು ಹಲವು ವರ್ಷಗಳ ಹಿಂದೆ ಕಲಬುರಗಿಗೆ ಬಂದಿದ್ದಾಗ ತುತ್ತು ಅನ್ನಕ್ಕಾಗಿ ಪರದಾಡಿದ್ದರು. ದಾಸೋಹದಲ್ಲಿ ಸಿಗೋ ಅನ್ನ ತಿಂದು ಹಸಿವು ನೀಗಿಸಿದ್ದರು. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಅನ್ನೋದೆ ಅವರ ಅಭಿಲಾಷೆಯಾಗಿತ್ತು.


    ಇದನ್ನೂ ಓದಿ: Vaishno Devi Temple: ಕರ್ನಾಟಕದಲ್ಲೇ ಇದೆ ವೈಷ್ಣೋದೇವಿ‌ ದೇಗುಲ!


    ಈ ಮಾತನ್ನು ಅವರ ಮಗನಾದ ಕುಲಕರ್ಣಿಗೂ ಹೇಳಿದ್ದರು. ಹೀಗಾಗಿ ₹8 ಸಾವಿರ ಆದಾಯವಿರುವ ಕೇದಾರನಾಥ್ ಅವರು ಕುಟುಂಬಿಕರ, ಸ್ನೇಹಿತರ ಸಹಕಾರದಿಂದ ಬಡವರ, ನಿರ್ಗತಿಕರ, ಭಿಕ್ಷುಕರ ಹಸಿವು ನೀಗಿಸುವ ಕೆಲಸದಲ್ಲಿ ತೊಡಗಿದ್ದಾರೆ.


    ಇದನ್ನೂ ಓದಿ: Kalaburagi Snake Prashanth: ಕಲಬುರಗಿಯ ಈ ಆಟೋ ಡ್ರೈವರ್​ಗೆ ಹಾವೆಂದರೆ ಹೂವು!


    ಕೇದಾರನಾಥ ಕುಲಕರ್ಣಿ ಅವರ ಸಂಪರ್ಕ ಸಂಖ್ಯೆ: +91 96118 11573


    ಹಸಿವು ನೀಗಿಸೋ ಹೃದಯವಂತ
    ಬಸ್ ಸ್ಟ್ಯಾಂಡ್, ದೇವಸ್ಥಾನ, ರೈಲ್ವೇ ನಿಲ್ದಾಣದಲ್ಲಿ ಮಲಗಿರುವವರನ್ನು ಕಂಡು ಅವರಿಗೆ ಅನ್ನ ನೀಡೋ ಮೂಲಕ ಕೇದಾರನಾಥ ಕುಲಕರ್ಣಿ ಅವರು ಕಲಬುರಗಿಯ ಅನ್ನ ದಾಸೋಹಿಯಾಗಿದ್ದಾರೆ.ಕೋಟ್ಯಾಧೀಶ್ವರನಲ್ಲದಿದ್ದರೂ ಹಸಿವು ನೀಗಿಸೋ ಇವರ ಹೃದಯವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: