• Home
 • »
 • News
 • »
 • kalburgi
 • »
 • Kalaburagi Blood Donor: ಎಮರ್ಜೆನ್ಸಿ ರಕ್ತ ಬೇಕಿದ್ರೆ ಇವ್ರಿಗೆ ಫೋನ್ ಮಾಡಿ ಸಾಕು!

Kalaburagi Blood Donor: ಎಮರ್ಜೆನ್ಸಿ ರಕ್ತ ಬೇಕಿದ್ರೆ ಇವ್ರಿಗೆ ಫೋನ್ ಮಾಡಿ ಸಾಕು!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಆ ಒಂದು ಕಹಿ ಘಟನೆ ಈ ಯುವಕನನ್ನು ಬದಲಾವಣೆಗೆ ಮುನ್ನುಡಿ ಬರೆಯುವಂತೆ ಮಾಡಿತು. ಅಂದಿನಿಂದ ಶುರುವಾಯಿತು ನೋಡಿ ಇವರ ರಕ್ತದಾನದ ಈ ನಿಸ್ವಾರ್ಥ ಸೇವೆ.

 • Share this:

  ಕಲಬುರಗಿ: ರಕ್ತದಾನ ಮಹಾದಾನ, ಜೀವದಾನ ಅಂತೀವಿ. ಹನಿ ರಕ್ತದ ಬೆಲೆ ಗೊತ್ತಿದವನಿಗಷ್ಟೇ (Blood Donation Importance) ಇದ್ರ ಮಹತ್ವ ತಿಳಿದೀತು. ಸೂಕ್ತ ಸಮಯದಲ್ಲಿ ರಕ್ತ ಸಿಗ್ದೇ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದೂ ಇದೆ. ಅಂತೆಯೇ ಕಲಬುರಗಿಯ (Kalaburagi) ಮೊಹಮ್ಮದ್ ಯೂಸುಫ್ ಪಟೇಲ್ ಅವ್ರದ್ದೇ ಅದೇ ಅನುಭವ. ಆದ್ರೆ ಆ ಅನುಭವದಿಂದ ಸಮಾಜಕ್ಕೆ ಮಾದರಿಯಾಗೋ ಯುವಕನಾಗಿ ಬದಲಾದ ಅವ್ರು, ಇಂದು ಅದೆಷ್ಟೋ ಜನರ ಪ್ರಾಣ (Life Saver) ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ‌.


  ಅಂದು ನಡೆದಿತ್ತು ಕಹಿ ಘಟನೆ!
  ಯೂಸುಫ್ ಪಟೇಲ್ ಕಲಬುರಗಿಯ ಸಂತ್ರಸವಾಡಿ ಬಡಾವಣೆ ನಿವಾಸಿ. 13 ವರ್ಷಗಳ ಹಿಂದೆ ಇವ್ರು ತಮ್ಮ ಸೊಸೆಯನ್ನು ಅನಾರೋಗ್ಯ ಕಾರಣ ಆಸ್ಪತ್ರೆಗೆ ಕರೆದೊಯ್ದಿದ್ದರು. ತೀವ್ರ ರಕ್ತಸ್ರಾವ ಆಗಿದ್ರಿಂದ ವೈದ್ಯರು ಬ್ಲಡ್ ಬೇಕು ಅಂದಿದ್ರು. ಎಷ್ಟೇ ಕಾಡಿ ಬೇಡಿದ್ರೂ ಸರಿಯಾದ ಸಮಯಕ್ಕೆ ಬ್ಲಡ್ ಸಿಗ್ಲೇ ಇಲ್ಲ. ಅತ್ತ ಸೊಸೆಯನ್ನ ಉಳಿಸಿಕೊಳ್ಳಲೂ ಆಗಿಲ್ಲ. ಇದ್ರಿಂದ ಎಚ್ಚೆತ್ತುಕೊಂಡ ಯೂಸುಫ್ ತನ್ನ‌ ಸೊಸೆಗೆ ಬಂದ ಸಾವು ಇನ್ಯಾರಿಗೂ ಬಾರದಿರಲಿ ಅಂತಾ ದೃಢ ನಿರ್ಧಾರ ತಳೆದರು. ಅಂದಿನಿಂದಲೇ ರಕ್ತದ ಅವಶ್ಯಕತೆ ಇರೋರಿಗೆ ತಾನೇ ವೈಯಕ್ತಿಕವಾಗಿ ಬ್ಲಡ್ ನೀಡಲು ಆರಂಭಿಸಿದರು‌.


  NGO ಕಟ್ಟಿಕೊಂಡ ಯೂಸುಫ್
  ಅಲ್ಲಿಂದ ಶುರುವಾದ ಇವ್ರ ರಕ್ತದಾನದ ಸೇವೆ ಮುಂದೆ ಗುಲಬರ್ಗಾ ಯೂಥ್ ಕ್ಲಬ್ ಅನ್ನೋ ಎನ್ ಜಿಓ ಹುಟ್ಟು ಹಾಕಲು ಸಾಧ್ಯವಾಯಿತು. ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ರಕ್ತದಾನಗಳ ಕ್ಯಾಂಪ್ ಮಾಡಿ ರಕ್ತ ಸಂಗ್ರಹ ಮಾಡಿ ಈಗ ಫ್ರೀ ಆಗಿ ರೋಗಿಗಳಿಗೆ ರಕ್ತ ನೀಡ್ತಿದ್ದಾರೆ. ಬ್ಲಡ್ ಕೊರತೆ ಎಲ್ಲಿದೆಯೋ ಅಲ್ಲೇ ಬ್ಲಡ್ ಅರೇಂಜ್ ಮಾಡಲಾಗುತ್ತದೆ.


  ಇದನ್ನೂ ಓದಿ: Kalaburagi: ಬರೋಬ್ಬರಿ 60 ಕಲೆಗಳಲ್ಲಿ ಪ್ರವೀಣೆ 18 ವರ್ಷದ ಈ ಸಕಲಕಲಾವಲ್ಲಭೆ!


  ನೆರೆ ರಾಜ್ಯದಲ್ಲೂ ಬ್ಲಡ್ ಡೊನೇಶನ್
  ಕೇವಲ ಬೆರಳೆಣಿಕೆಯಷ್ಟು ಯುವಕರಿಂದ ಪ್ರಾರಂಭವಾದ ಯೂಥ್ ಕ್ಲಬ್ ನಲ್ಲಿ ಈಗ ಸಾವಿರಾರು ಜನ ಯುವಕರು ಕೆಲಸ ಮಾಡ್ತಿದ್ದಾರೆ. ಕೇವಲ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಇದರ ಕಾರ್ಯಚಟುವಟಿಕೆ ಇಲ್ಲ. ಮಹಾರಾಷ್ಟ್ರ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಗುಲಬರ್ಗಾ ಯೂಥ್ ಕ್ಲಬ್ ಸದಸ್ಯರಿದ್ದಾರೆ. ಈ ತಂಡವು ಕರ್ನಾಟಕ, ಮಹಾರಾಷ್ಟ್ರ, ಹೈದ್ರಾಬಾದ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಸುತ್ತಿ ಅಲ್ಲಲ್ಲಿ ರಕ್ತದಾನ ಶಿಬಿರ ನಡೆಸುತ್ತಾರೆ.


  ಇದನ್ನೂ ಓದಿ: Kalaburgi Students: ಒಂದಲ್ಲ, ಎರಡೂ ಕೈಯಲ್ಲಿ ಬರೀತಾರೆ ಇಲ್ಲಿನ ಸ್ಟೂಡೆಂಟ್ಸ್!


  ಬದಲಾವಣೆಗೆ ಮುನ್ನುಡಿ
  ಒಟ್ಟಿನಲ್ಲಿ ಹದಿಮೂರು ವರ್ಷಗಳ ಹಿಂದೆ ತಮ್ಮ ಮನೆಯ ಸದಸ್ಯೆಯನ್ನ ಕಳೆದುಕೊಂಡ ನೋವಿನಿಂದ ವ್ಯವಸ್ಥೆಯನ್ನ ದೂಷಿಸುತ್ತಾ ಕೂರದೇ, ಬದಲಾವಣೆಗೆ ನಾಂದಿ ಹಾಡಿದ ಯೂಸುಫ್ ಪಟೇಲ್ ಯಶೋಗಾಥೆಗೆ ವಂಡರ್ ಫುಲ್ ಅನ್ನಲೇಬೇಕು.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: