ಕಲಬುರಗಿ: ನೋಡಿದಲ್ಲೆಲ್ಲಾ ಕೆಂಬಣ್ಣದ ಗುಲಾಬಿ ಬೆಳೆ. ಮಹಿಳೆಯರು, ಮಕ್ಕಳೆನ್ನದೆ ಕಟಾವು ನಡೆಸುತ್ತಿರೋ ರೈತ ಕುಟುಂಬ. ಇಲ್ಲಿ ಬೆಳೆಯೋ ಕೆಂಪು ಗುಲಾಬಿಗೆ (Kalaburagi Rose) ಎಲ್ಲಿಲ್ಲದ ಡಿಮ್ಯಾಂಡ್. ಇದುವೇ ನೋಡಿ ಬಿಸಿಲನಗರಿಯಲ್ಲಿ ಗುಲಾಬಿ ಅರಳಿಸಿದ ಬೆಳೆಗಾರನ (Success Story) ಸಕ್ಸಸ್ ಸ್ಟೋರಿ. ಸುಡುತ್ತಿರುವ ಬಿಸಿಲ ನಡುವೆಯೂ ಗುಲಾಬಿ ಕಟಾವು (Rose Farming) ನಡೆಸುತ್ತಿರೋದು ಕಲಬುರಗಿ ತಾಲೂಕಿನ (Kalaburagi News) ಆಜಾದ್ಪುರದ ರೈತ ಮೋಹನರಾವ್ ಮಾನೆ ಕುಟುಂಬಸ್ಥರು. ಮಾನೆ ಕುಟುಂಬದ ಪ್ರತಿದಿನ ದಿನಚರಿಯೇ ಹೀಗೆ.
ಜಮೀನಿಗೆ ಆಗಮಿಸೋ ಇವ್ರೆಲ್ಲ ಬೆಳೆದು ನಿಂತ ಗುಲಾಬಿ ಹೂವನ್ನ ಒಂದೊಂದಾಗಿ ಕೀಳುತ್ತಾ ಜೋಳಿಗೆ ತುಂಬಿಸ್ತಾರೆ. ಪ್ರತಿದಿನ ಮಾನೆ ಕುಟುಂಬ ಸುಮಾರು 30 ಕೆಜಿಯಷ್ಟು ಗುಲಾಬಿ ಹೂವನ್ನ ಕಟಾವು ಮಾಡ್ತಿದೆ.
ರೈತ ಮೋಹನರಾವ್ ಮಾನೆ ತಮ್ಮ ಮೂರು ಎಕರೆ ಎರಡು ಗುಂಟೆಯ ತೋಟದಲ್ಲಿ ಗುಲಾಬಿ ಹೂಗಳ ತಳಿಗಳಾದ ಶಿರಡಿ, ಬುಲೇಟ್, ಪನೀರ್ ತಳಿಗಳನ್ನ ಬೆಳೆದಿದ್ದಾರೆ.
ಇದನ್ನೂ ಓದಿ: Kalaburagi: ಈ ಪುರಾತನ ದೇಗುಲ ದರ್ಶನದಿಂದಲೇ ಶುಭವಾಗುತ್ತಂತೆ!
ಸಾಮಾನ್ಯವಾಗಿ ಗುಲಾಬಿ ಹೂಗಳ ಯಾವುದೇ ತಳಿ ನಾಟಿ ಮಾಡಿದಾಗ ಹೂವು ಕೈಗೆ ಬರಬೇಕಾದ್ರೆ ಕನಿಷ್ಟ 8 ತಿಂಗಳು ಬೇಕು. ಆದರೆ ಮಾನೆ ಅವರು ಕೇವಲ ಮೂರು ತಿಂಗಳ ಹಿಂದೆ ನಾಟಿ ಮಾಡಿ ಕೆಜಿಗೆ 80 ರೂಪಾಯಿಯಂತೆ ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ. ಇನ್ನು ಬುಲೆಟ್ ಹಾಗೂ ಪನೀರ್ ತಳಿಯನ್ನು ನಾಟಿ ಮಾಡಿ ಭರಪೂರ ಸಂಪಾದನೆ ಮಾಡ್ತಿದ್ದಾರೆ.
ಇದನ್ನೂ ಓದಿ: Susla Recipe: ಮಸ್ತ್ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ
ಬೆಂಗಳೂರು, ಪುಣೆಯಿಂದ ಗುಲಾಬಿ ಸಸಿ ತಂದು ನಾಟಿ ಮಾಡಿರುವ ಮಾನೆ ಅವರಿಗೆ ಈಗ ಪ್ರತಿನಿತ್ಯ ಆದಾಯ. ತಿಂಗಳಿಗೆ ಏನಿಲ್ಲ ಅಂದ್ರೂ 45 ಸಾವಿರ ರೂಪಾಯಿ ಆದಾಯ ಗಳಿಸ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಿ ಹಲವು ರೈತರಿಗೆ ಮಾದರಿ ಆಗಿದ್ದಾರೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ