• Home
 • »
 • News
 • »
 • kalburgi
 • »
 • Kalaburagi Artist: ಕಲಬುರಗಿಯ ಈ ಕಲಾವಿದ ಅಮೆರಿಕಾದಲ್ಲೂ ಫೇಮಸ್!

Kalaburagi Artist: ಕಲಬುರಗಿಯ ಈ ಕಲಾವಿದ ಅಮೆರಿಕಾದಲ್ಲೂ ಫೇಮಸ್!

ಇವರೇ ನೋಡಿ ಆ ಕಲಾವಿದ!

"ಇವರೇ ನೋಡಿ ಆ ಕಲಾವಿದ!"

ಕಲಬುರಗಿ ಜಿಲ್ಲೆಯ ಓರ್ವ ಯುವ ಕಲಾವಿದ ಅಮೆರಿಕಾದಲ್ಲೂ ಮನ್ನಣೆ ಪಡೆದಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ ಮೂಡಿಸಿದೆ.

 • Share this:

  ಕಲಬುರಗಿ: ಚಿತ್ರವೊಂದು ಸಾವಿರ ಪದಗಳಿಗೆ ಸಮ ಅಂತಾರೆ, ಈ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ. ಇಲ್ಲಿರೋ ಚಿತ್ರಗಳನ್ನ ನೋಡ್ತಿದ್ರೆ ಅಬ್ಬಾ! ಅನಿಸುತ್ತೆ. ನಮ್ ಕಲಬುರಗಿಯ (Kalaburagi) ಈ ಚಿತ್ರಗಳ ಸೌಂದರ್ಯಕ್ಕೆ ಅಮೆರಿಕನ್ನರೇ ಸಲಾಂ ಅಂದಿದ್ದಾರೆ!ಹೌದು, ಕಲಬುರಗಿಯ ಚಿತ್ರ ಕಲಾವಿದ (Kalaburagi Artist) ಡಾ. ಶಾಹಿದ್ ಪಾಶಾ ಅವರ ಕೌಶಲ್ಯವೇ ಹೀಗೆ ಮೋಡಿ ಮಾಡ್ತಿರೋದು. ಫೈನ್ ಆರ್ಟ್ ಲೆಕ್ಚರರ್ ಕೂಡಾ ಆಗಿರುವ ಡಾ. ಶಾಹಿದ್ ಪಾಶಾ ಅವರಿಗೆ ಚಿತ್ರಕಲೆ ಅಂದ್ರೆ ಪಂಚಪ್ರಾಣ.


  ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


  ಹಾಗೇ ಒಂದಿನ ರಾಮಾಯಣ, ಮಹಾಭಾರತದ ಮೌಲ್ಯಗಳನ್ನ ಚಿತ್ರರೂಪದಲ್ಲಿ ಬಿಡಿಸಿದ್ರಂತೆ. ಇದೇ ಚಿತ್ರ ಅಮೆರಿಕಾದ ನ್ಯೂಯಾರ್ಕ್​ನಲ್ಲಿ ನಡೆದ 36ನೇ ಚೆಲ್ಸಿ ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಅವಾರ್ಡ್​ನ್ನೂ ಗಳಿಸಿದೆ.


  ಇದನ್ನೂ ಓದಿ: Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!


  ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯ ಓರ್ವ ಯುವ ಕಲಾವಿದ ಅಮೆರಿಕಾದಲ್ಲೂ ಮನ್ನಣೆ ಪಡೆದಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ ಮೂಡಿಸಿದೆ. ಇವ್ರು ಇನ್ನಷ್ಟು ಮತ್ತಷ್ಟು ಸಾಧನೆ ಮಾಡ್ಲಿ ಅಂತ ಕಲಬುರಗಿಗೆ ಕಲಬುರಗಿಯೇ ಹರಸಿ ಹಾರೈಸ್ತಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: