• Home
  • »
  • News
  • »
  • kalburgi
  • »
  • Kalaburagi: ಬಾಟಲಿಯಲ್ಲಿ ಪ್ರಪಂಚವನ್ನೇ ಸೃಷ್ಟಿಸುವ ಕಲಬುರಗಿಯ ತಾತ!

Kalaburagi: ಬಾಟಲಿಯಲ್ಲಿ ಪ್ರಪಂಚವನ್ನೇ ಸೃಷ್ಟಿಸುವ ಕಲಬುರಗಿಯ ತಾತ!

ಇಲ್ಲಿದೆ ನೋಡಿ ತಾತ ಸೃಷ್ಟಿಸಿದ ಜಗತ್ತು!

"ಇಲ್ಲಿದೆ ನೋಡಿ ತಾತ ಸೃಷ್ಟಿಸಿದ ಜಗತ್ತು!"

ದೇವೇಂದ್ರ ಕಂಬಾರ್ ಓದಿದ್ದು ಕೇವಲ 3 ನೇ ತರಗತಿ. 40 ವರ್ಷಗಳಿಂದ ರೈತರ ಒಕ್ಕಲುತನ ಸಾಮಾಗ್ರಿ ತಯಾರಿಸಿ ಅನ್ನದಾತರಿಗೆ ಆಧಾರಸ್ಥಂಭವಾಗಿದ್ದಾರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕೆತ್ತನೆಯಲ್ಲಿ ಮಗ್ನನಾಗಿರೋ ತಾತ. ಬಾಟಲಿಯೊಳಗಿಂದ ಕೈ ಬೀಸಿ ಕರೆಯೋ ಅಂದ ಚೆಂದದ ಕಲಾಕೃತಿಗಳು. ಮರದ ಕಟ್ಟಿಗೆ ಸಿಕ್ಕರೆ ಸಾಕು ಇಲ್ಲಿ ಹೊಸ ಪ್ರಪಂಚವೇ ಸೃಷ್ಟಿಯಾಗುತ್ತೆ! ಇದುವೇ ನೋಡಿ, ಕಲಬುರಗಿಯ (Kalaburagi) ರಾಮನಗರದ ದೇವೇಂದ್ರ ಕಂಬಾರ್ ಅವರ ಕಲಾಗಾರ. ಹೌದು, ವಯಸ್ಸು 65 ಮೀರಿದ್ರೂ ಅಪರೂಪದಲ್ಲಿ ಅಪರೂಪವೆನಿಸಿಕೊಳ್ಳೋ ಕಲೆಗೆ ಈ ದೇವೇಂದ್ರ ಕಂಬಾರ್ (Kalaburagi Artist) ಫೇಮಸ್.  ಸಣ್ಣ ಮರದ ಕಟ್ಟಿಗೆ ಕೈಗೆ ಸಿಕ್ಕರೆ ಸಾಕು ಅದ್ರಲ್ಲೇ ವಿವಿಧ ರೂಪಗಳಿಗೆ ಜನ್ಮ ನೀಡಬಲ್ಲರು.


    ಇಲ್ಲೇ ನೋಡಿ, ಇವರ ಕಲಾಕುಂಚದಲ್ಲಿ ಅರಳಿದ ನೇಗಿಲು, ಕುಂಟಿ, ದಿಂಡು, ಫುಟ್ಬಾಲ್ ಸೇರಿದಂತೆ ಅನೇಕ ಕಲಾಕೃತಿಗಳನ್ನ ಗಾಜಿನ ಬಾಟಲಿಯೊಳಗೆ ಇರಿಸಲಾಗಿದೆ. ಇವರ ತಾಳ್ಮೆ, ಕಲೆ ಮೇಲಿನ ಪ್ರೀತಿ ಅದಕ್ಕೂ ಜಾಸ್ತಿದ ಬತ್ತದ ಉತ್ಸಾಹ ಇದೆಲ್ಲವೂ ಅವರನ್ನ ಇನ್ನಷ್ಟು ಎತ್ತರಕ್ಕೇರಿಸಿದೆ.


    ಓದಿದ್ದು ಮೂರನೇ ತರಗತಿ ಮಾತ್ರ
    ದೇವೇಂದ್ರ ಕಂಬಾರ್ ಓದಿದ್ದು ಕೇವಲ 3 ನೇ ತರಗತಿ. 40 ವರ್ಷಗಳಿಂದ ರೈತರ ಒಕ್ಕಲುತನ ಸಾಮಾಗ್ರಿ ತಯಾರಿಸಿ ಅನ್ನದಾತರಿಗೆ ಆಧಾರಸ್ಥಂಭವಾಗಿದ್ದಾರೆ. ದೇವೇಂದ್ರ ಕಂಬಾರರು ಗಾಜಿನ ಬಾಟಲಿಯೊಳಗೆ ನೇಗಿಲು, ಕುಂಟೆ, ಫುಟ್ಬಾಲ್, ದಿಂಡು ಸೇರಿದಂತೆ ಅನೇಕ ಕಲಾಕೃತಿಗಳು ಸುಂದರವಾಗಿ ಅರಳಿ ನಿಲ್ಲುವಂತೆ ಮಾಡಿದ್ದಾರೆ. ಬಾಟಲಿಯೊಳಗಿನ ಈ ಸುಂದರ ಕಲಾಕೃತಿಗಳ ಕೆತ್ತನೆಯಂತೂ ಅದ್ಭುತವೇ ಸರಿ.


    ಈ ಕಲೆ ಒಲಿದದ್ದು ಹೇಗೆ?
    ಮೊದಮೊದಲು ಮನೆ ಬಾಗಿಲು, ಕಿಟಕಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನ ಕಂಬಾರ್ ಅವ್ರು ಮಾಡುತ್ತಿದ್ದರು. ಆದರೆ ಇವರಲ್ಲಿ ಗಾಜಿನೊಳಗೆ ಕಟ್ಟಿಗೆಯ ನೇಗಿಲು, ಕುಂಟೆ, ದಿಂಡು, ಫುಟ್ಬಾಲ್ ತಯಾರಿಸುವ ಆಸಕ್ತಿ ಶುರುವಾಗಿದ್ದೆ ಬಲು ರೋಚಕ. ಅಷ್ಟಕ್ಕೂ ಐದಾರು ವರ್ಷಗಳ ಕಾಲ ಗಾಜಿನ ಬಾಟಲಿಯೊಳಗೆ ಕಟ್ಟಿಗೆ ತುಂಡುಗಳನ್ನ ಇರಿಸಿ ಪ್ರಾಕ್ಟಿಸ್ ಮಾಡ್ತಾ, ಈ ಕಲೆ ಅವರಿಗೆ ಒಲಿದು ಬಂದಿದೆ.


    ಇದನ್ನೂ ಓದಿ: Kalaburagi: ಈ ಪುರಾತನ ದೇಗುಲ ದರ್ಶನದಿಂದಲೇ ಶುಭವಾಗುತ್ತಂತೆ!


    ಸದ್ಯ ದೇವೇಂದ್ರ ಅವರ ಕೈಚಳಕದಲ್ಲಿ ಮೂಡಿರೋ ಸುಂದರ ಕಲಾಕೃತಿಗಳಗೆ ಬಹಳಷ್ಟು ಬೇಡಿಕೆಯಿದೆ. ಈಗಾಗ್ಲೇ ಮುಗುಳಖೋಡದ ಜಿಡಗಾ ಮಠ, ಬೇಲಿಮಠ ಸೇರಿದಂತೆ ಅನೇಕ ಮಠ ಮಂದಿರಗಳಲ್ಲಿ ಕಟ್ಟಿಗೆಯಲ್ಲಿ ಕೆತ್ತಿದ ಅನೇಕ ಕಲಾಕೃತಿಗಳನ್ನ ನೀಡಿದ್ದಾರೆ.


    ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


    ಒಟ್ಟಿನಲ್ಲಿ ಇಳಿವಯಸ್ಸಲ್ಲೂ ಕಲಾ ಮಾತೆಯ ಸೇವೆ ಮಾಡುತ್ತಾ, ಕಟ್ಟಿಗೆಯಿಂದ ಗಾಜಿನ ಬಾಟಲಿಯೊಳಗೆ ಅದ್ಭುತ ಕಲಾಕೃತಿಗಳನ್ನ ಕೆತ್ತನೆ ಮಾಡುವ ದೇವೇಂದ್ರರ ಕಾರ್ಯಕ್ಕೆ ನಮ್ಮದೊಂದು ಸಲಾಂ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: