Kalaburagi: ಮೂರನೇ ಕ್ಲಾಸ್ ಕಲಿತ ಇವರೇ ಕಲಬುರಗಿಯ ವಿಶ್ವೇಶ್ವರಯ್ಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಕಲಾವಿದ ವಿಶ್ವೇಶ್ವರಯ್ಯ ಅವರ ಕಲಾ ಕೇಂದ್ರ ಪ್ರವೇಶ ಮಾಡಿದರೆ ಸಾಕು. ಎಂಥವರೂ ಮೈಮರೆಯಲೇಬೇಕು. ಅಂತಹ ಅಪರೂಪದ ಕಲೆಗಳನ್ನು ಇವರು ನಿರ್ಮಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಬುದ್ದ, ಬಸವಣ್ಣ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಹೀಗೆ ಲೋಹದ ರೂಪದಲ್ಲಿ ಕಂಗೊಳಿಸೋ ನಾಯಕರು ಒಂದೆಡೆಯಾದರೆ, ಘರ್ಜಿಸೋ ಸಿಂಹ, ಹುಲಿ ಇನ್ನೊಂದೆಡೆಹೀಗೆ ನೋಡುತ್ತಾ ಹೋದರೆ ಲೋಹದ ಅಂದ ಚೆಂದದ ಶಿಲ್ಪಗಳ ಲೋಕವಿಲ್ಲಿ ತೆರೆದುಕೊಳ್ಳುತ್ತೆ. ಕಲಾವಿದನ ಚಾಕಚಕ್ಯತೆ ಸುವರ್ಣ ಸೌಧದ ಮೇಲೂ ರಾರಾಜಿಸುತ್ತಿದೆ. ಅಸಲಿಗೆ ಮೂರನೇ ಕ್ಲಾಸ್ ಕಲಿತ  ಅದ್ಭುತ ಕಲಾವಿದನಾದ್ರೂ ಯಾರು ಅಂತೀರ? ಹೇಳ್ತೀವಿ ನೋಡಿ.


    ಲೋಹ ಶಿಲ್ಪಿ ವಿಶ್ವೇಶ್ವರಯ್ಯ
    ಯೆಸ್, ಹೀಗೆ ಲೋಹದ ಶಿಲ್ಪಗಳಿಗೆ ಅಂದದ ರೂಪು ಕೊಡುತ್ತಿರುವ ಕಲಾವಿದನ ಹೆಸರು ವಿಶ್ವೇಶ್ವರಯ್ಯ ಅಂತ. ಕಲಬುರಗಿ ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ವಿ.ಟಿ.ಎನ್ ಕಲಾಕೇಂದ್ರದ ಮುಖ್ಯಸ್ಥ. ಕಲಾವಿದ ವಿಶ್ವೇಶ್ವರಯ್ಯ ಅವರ ಕಲಾ ಕೇಂದ್ರ ಪ್ರವೇಶ ಮಾಡಿದರೆ ಸಾಕು. ಎಂಥವರೂ ಮೈಮರೆಯಲೇಬೇಕು. ಅಂತಹ ಅಪರೂಪದ ಕಲೆಗಳನ್ನು ಇವರು ನಿರ್ಮಿಸಿದ್ದಾರೆ.


    ಮೂರನೇ ಕ್ಲಾಸು ಫೇಲು
    ಅಸಲಿಗೆ ಕಲಾವಿದ ವಿಶ್ವೇಶ್ವರಯ್ಯ ಅವರು ಓದಿದ್ದು ಮೂರನೇ ತರಗತಿ ಮಾತ್ರ. ಮೂರನೇ ತರಗತಿಯಲ್ಲಿಯೂ ಫೇಲ್ ಆದವರು ಇವರು. ಹೀಗಾಗಿ ಕಲೆಯಲ್ಲಿ ತನ್ಮಯತೆಯಿಂದ ತೊಡಗಿಕೊಂಡಿದ್ದಾರೆ.


    ಸುವರ್ಣ ಸೌಧದ ರಾಷ್ಟ್ರ ಲಾಂಛನ
    ಬೆಳಗಾವಿ ಸುವರ್ಣ ಸೌಧದ ಎದುರಿನ ರಾಷ್ಟ್ರಲಾಂಛನವನ್ನು ನಿರ್ಮಿಸಿಕೊಟ್ಟಿರುವುದು ಇದೇ ವಿಶ್ವೇಶ್ವರಯ್ಯ! ಸುವರ್ಣ ಸೌಧದ ಮುಂಭಾಗ ಕಾಣುವ ರಾಷ್ಟ್ರ ಲಾಂಛನವನ್ನು 65 ಟನ್ ತೂಕದ ಪೂರ್ಣ ಕಂಚಿನಲ್ಲಿ ನಿರ್ಮಿಸಿ ಕೊಟ್ಟಿರುವುದು ಇವರ ಕಲಾ ಚತುರತೆಗೆ ಸಾಕ್ಷಿಯಾಗಿದೆ.


    ಲೋಹದ ಶಿಲ್ಪಕ್ಕೆ ಬೇಡಿಕೆ
    ಕಲಾವಿದ ವಿಶ್ವೇಶ್ವರಯ್ಯ ಅವರಿಗೆ ಅಜ್ಜನಿಂದ ಕಲಾಕೃತಿ ರಚನೆ ಬಳುವಳಿಯಾಗಿ ಬಂದಿದೆ. ಇವರ ಕೈಯಲ್ಲಿ ಅರಳಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ, ಬುದ್ಧನ ಪ್ರತಿಮೆ, ಸ್ವಾಮಿ ವಿವೇಕಾನಂದರ ಪ್ರತಿಮೆಗಳು ಪ್ರಮುಖ ನಗರಗಳ ವೃತ್ತಗಳಲ್ಲಿ ಸ್ಥಾಪನೆಗೊಂಡಿವೆ. ಕಲಬುರಗಿಯ ರಾಜೀವಗಾಂಧಿ ಸ್ಮಾರಕ ಉದ್ಯಾನಕ್ಕೆ ಹಲವು ಪ್ರಾಣಿಗಳ ಪ್ರತಿಕೃತಿಗಳನ್ನು ನಿರ್ಮಿಸಿಕೊಡುವಲ್ಲಿ ಕಲಾವಿದ ವಿಶ್ವೇಶ್ವರಯ್ಯ ತೊಡಗಿಕೊಂಡಿದ್ದಾರೆ. ಇವರ ಕಲೆ ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.




    ಇದನ್ನೂ ಓದಿ: Kalaburagi: ಕೆರೆ ಹೂಳೆತ್ತಲು ರೈತರಿಂದ ಲಕ್ಷ ಲಕ್ಷ ಹಣ ಸಂಗ್ರಹ!

    ಉದಯೋನ್ಮುಖ ಕಲಾವಿದರಿಗೆ ತರಬೇತಿ
    ಕಲ್ಯಾಣ ಕರ್ನಾಟಕ ಭಾಗದಲ್ಲಿ ಸದ್ದಿಲ್ಲದೆ ಲೋಹಶಿಲ್ಪ, ಮಣ್ಣಿನ ಕಲಾಕೃತಿಗಳು, ಮರದ ಕೆತ್ತನೆ ಸೇರಿದಂತೆ ವಿಭಿನ್ನ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿರುವ ವಿಶ್ವೇಶ್ವರಯ್ಯ ಅವರು ಪ್ರತಿವರ್ಷ 20 ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಶ್ವೇಶ್ವರಯ್ಯ ಅವರು ಇತ್ತೀಚಿಗೆ ಪ್ರಧಾನಿ ಮೋದಿ ಅವರ ಪ್ರತಿಮೆಗಳನ್ನು ತಯಾರಿಸಿ ದೇಶವ್ಯಾಪ್ತಿ ಸುದ್ದಿಯಾಗಿದ್ದರು.


    ಇದನ್ನೂ ಓದಿ: Kalaburagi Viral News: 12 ವರ್ಷಗಳ ಬಳಿಕ ಮನೆಗೆ ಮರಳಿದ ವ್ಯಕ್ತಿ! ಇಷ್ಟು ದಿನ ಎಲ್ಲಿದ್ರು ಗೊತ್ತಾ?

    ಏನೇ ಇರಲಿ, ಬಾಲ್ಯದಲ್ಲಿ ಶಿಕ್ಷಣ ತಲೆಗೆ ಹತ್ತದೇ ಹೋದರೂ ಕಲಾವಿದನಾಗಿ ವಿಶ್ವೇಶ್ವರಯ್ಯನವರು ಭಾರೀ ಹೆಸರನ್ನೇ ಪಡೆದಿದ್ಧಾರೆ. ಸರ್ ಎಂ. ವಿಶ್ವೇಶ್ವರಯ್ಯರಂತೆಯೇ ವಿಶ್ವೇಶ್ವರಯ್ಯ ಕೂಡಾ ತಮ್ಮ ಬುದ್ಧಿಮತ್ತೆ ಮೂಲಕ ಸುದ್ದಿಯಾಗುತ್ತಿದ್ದಾರೆ. 


    ವರದಿಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: