Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೋಣೆಯೊಳಗೊಂದು ಕೋಣೆ, ಬಾಗಿಲು ತೆರೆಯುತ್ತಾ ಹೋದಂತೆ ಹೆಚ್ಚುತ್ತಾ ಹೋಗುವ ಬಾಗಿಲು. ಇಂತಹ ಅದ್ಭುತ ರಚನೆಯ ಈ ಮನೆ ಇರೋದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದಲ್ಲಿ.

  • Share this:

    ಕಲಬುರಗಿ: ಮನೆಯೊಂದು ಮೂರು ಬಾಗಿಲು (Door's) ಅನ್ನೋ ಆಡು ಮಾತಿದೆ. ಆದ್ರೆ ಇಲ್ಲೊಂದು ಮನೆಗೆ ಮೂರು, ಆರೂ ಅಲ್ಲ ಬರೋಬ್ಬರಿ 101 ಬಾಗಿಲುಗಳು. ಒಂದು ಕೋಣೆಯಿಂದ ಒಳಗಡೆ ಹೋದ್ರೆ ಇನ್ನೊಂದು ಕೋಣೆಯಲ್ಲಿ ಹೊರಬರ್ತೀರಿ. ಇನ್ನೇನಾದ್ರೂ ಕೋಣೆ ಒಳಗಡೆ ಹೋಗ್ತಾ ಮೈ ಮರೆತ್ರೆ ಹೊರ ಬರೋದಕ್ಕೆ ಸಾಹಸ ಮಾಡ್ಬೇಕಾದೀತು. ಅಷ್ಟಕ್ಕೂ ಈ ಸ್ಪೆಷಲ್ ಮನೆ (Special Home) ಇರೋದು ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ.


    ಕೋಣೆಯೊಳಗೊಂದು ಕೋಣೆ, ಬಾಗಿಲು ತೆರೆಯುತ್ತಾ ಹೋದಂತೆ ಹೆಚ್ಚುತ್ತಾ ಹೋಗುವ ಬಾಗಿಲು. ಇಂತಹ ಅದ್ಭುತ ರಚನೆಯ ಈ ಮನೆ ಇರೋದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದಲ್ಲಿ.


    40 ವರ್ಷಗಳ ಹಿಂದೆ ಕಟ್ಟಿದ ಮನೆ
    40 ವರ್ಷಗಳ ಹಿಂದೆ ಮಲ್ಲಣಗೌಡ ಇಟಗಿ ಎಂಬವರು ಕಟ್ಟಿಸಿದ ಈ ಮನೆ ಅದ್ಭುತ ರಚನೆಯನ್ನೂ ಹೊಂದಿದೆ. ಸುಮಾರು 3 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಮೂಲತಃ ಕೃಷಿಕರಾಗಿರುವ ಮಲ್ಲಣಗೌಡ ಇಟಗಿ ಕೃಷಿಗೆ ಅನುಕೂಲ ಆಗುವ ರೀತಿಯಲ್ಲಿ ಮನೆಯನ್ನ ಕಟ್ಟಿಸಿದ್ದಾರೆ. ಹೀಗೆ ಕಟ್ಟಿಸಿರುವ ಈ ಮನೆಗೆ ಬರೋಬ್ಬರಿ 101 ಬಾಗಿಲುಗಳನ್ನು ಅಳವಡಿಸಿದ್ದಾರೆ.


    ಹಿಂದೆ ಇಷ್ಟೊಂದು ಜನ ವಾಸವಿದ್ರು!
    ಒಂದು ಕಾಲಕ್ಕೆ ಈ ಮನೆಯಲ್ಲಿ ಮಲ್ಲಣಗೌಡರ ಇಬ್ಬರು ಮಕ್ಕಳು, ಮೊಮ್ಮಕ್ಕಳು ಇರ್ತಿದ್ರು. ಇದಲ್ಲದೇ 50 ಕ್ಕೂ ಹೆಚ್ಚು ಆಳುಗಳು ಕೆಲಸ ಮಾಡುತ್ತಿದ್ದರು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನ್ಯಾಯ ಪಂಚಾಯಿತಿ ಕೂಡ ಇಲ್ಲೇ ನಡೆಯುತ್ತಿತ್ತು. ಊರವರ, ಕಷ್ಟ ಎಂದು ಬಂದವರ ಪಾಲಿಗೆ ಧರ್ಮ ಛತ್ರನೂ ಆಗಿತ್ತು. ಆದ್ರೆ ಇಂದು ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ಹಾಗೂ ಇನ್ನಿತರ ಕಾರಣಗಳಿಗಾಗಿ ಮಲ್ಲಣಗೌಡರ ಮಕ್ಕಳು, ಮೊಮ್ಮಕ್ಕಳು, ಸಹೋದರರೆಲ್ಲರೂ ಕಲಬುರಗಿ ನಗರ, ಬೆಂಗಳೂರು ಅರಸಿ ಹೋಗಿದ್ದಾರೆ.




    ಆಳುಗಳೇ ನೋಡ್ಕೊಳ್ತಿದ್ದಾರೆ!
    ಸದ್ಯ ಮನೆಯನ್ನ ಆಳುಗಳಷ್ಟೇ ನೋಡಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ 101 ಬಾಗಿಲಿನ ಮನೆಯಾದ್ರೂ ಇದಕ್ಕೆ ಬೀಗ ಹಾಕುವ ಕ್ರಮವೂ ಇಲ್ಲ. ಒಂದು ಕಾಲದಲ್ಲಿ ಭವ್ಯ ಬಂಗಲೆಯಂತಿದ್ದ ಮನೆ ಈಗ ಅವನತಿಯತ್ತ ಸಾಗಿರುವುದೂ ಕಂಡುಬರ್ತಿವೆ.


    ಬೃಹತ್ ಒಲೆಗಳ ಸಂಗ್ರಹ
    ಈ 101 ಬಾಗಿಲುಗಳ ಮನೆಯ ಕಲಾಕೃತಿಯ ಕೆತ್ತನೆ ಬಲು ಸುಂದರವಾಗಿದೆ. ಅತ್ಯಂತ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಮನೆಯ ಅಡುಗೆ ಮನೆಯಲ್ಲಿ ಬೃಹತ್ ಆಕಾರದ ಮೂರ್ನಾಲ್ಕು ಒಲೆಗಳಿವೆ. ಆದ್ರೆ ಇಂದು ಭವ್ಯವಾದ ಬಂಗಲೆಯಲ್ಲಿ ಮನೆಯ ಯಜಮಾನನೇ ನೋಡಲು ಸಿಗೋದಿಲ್ಲ. ಮಲ್ಲಣಗೌಡ ತಮ್ಮ ಸುಂದರ ಮನೆಯನ್ನು ಬಿಟ್ಟು ಅಗಲಿದ್ದಾರೆ. ಆದ್ರೂ ಅಲ್ಲಿನ ಜನರು ಇಂದಿಗೂ ಕೂಡ ಆ ಮನೆಯನ್ನ ಅಷ್ಟೇ ಗೌರವದಿಂದ ಕಾಣುತ್ತಾರೆ.


    ಇದನ್ನೂ ಓದಿ: Kalaburagi: ಕಲಬುರಗಿಯ ಈ ಹಳ್ಳಿಯ ಪ್ರತಿ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್!


    ಒಂದು ಕಾಲಕ್ಕೆ 700 ಎಕ್ರೆ ಆಸ್ತಿ ಹೊಂದಿದ ಯಜಮಾನನ ಮನೆಯೂ ಇದಾಗಿತ್ತು. ಪೊಲೀಸ್ ಠಾಣೆ ಮೆಟ್ಟಿಲೇರದೇ ಇದೇ ಮನೆ ಅಂಗಣದಲ್ಲಿ ಸಮಸ್ಯೆಗಳು ಬಗೆಹರಿಯುತ್ತಿದ್ದ ದಿನಗಳಿದ್ದವು. ಆದ್ರೀಗ ಹಳ್ಳಿ ಜನರ ಗೌರವದಿಂದಷ್ಟೇ ಎರಡು ಅಂತಸ್ತಿನ ಈ ಮನೆ ಸ್ವಲ್ಪ ಮಟ್ಟಿಗಿದೆ ಸ್ಥಿರವಾಗಿ ನಿಂತಿದೆ.


    ಇದನ್ನೂ ಓದಿ: Kalaburagi Goshala: 200 ಕ್ಕೂ ಹೆಚ್ಚು ಗೋವುಗಳಿಗೆ 'ಪುಣ್ಯಕೋಟಿ'ಯ ಆಶ್ರಯ, ಕೃಷಿಕರಿಗೂ ಲಾಭ!


    ಮುಂದಿನ ತಲೆಮಾರಿಗೆ ಇಂತಹ ಮನೆಯನ್ನ ಉಳಿಸಬೇಕಾದ ಅನಿವಾರ್ಯತೆ ಇದೆ ಅನ್ನೋದನ್ನ ಸಂಬಂಧಪಟ್ಟವರು ಕಂಡುಕೊಂಡಲ್ಲಿ ಈ ಮನೆ ಉಳಿಯಬಹುದು ಅನ್ನೋ ಮಾತು ಬಿರಾಳ ಗ್ರಾಮಸ್ಥರದ್ದಾಗಿದೆ.


    ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: