Kalaburgi Success Story: ನಿರುಪಯುಕ್ತ ವಸ್ತುಗಳಿಗೆ ಬಂತು ಜೀವ! ಕಲಬುರಗಿಯಲ್ಲಿ ನಡೀತು ಮ್ಯಾಜಿಕ್!

ನಿರುಪಯುಕ್ತ ವಸ್ತುಗಳನ್ನು ವಿಲೆವಾರಿ ಮಾಡುವುದೇ ಸವಾಲು. ಆದರೆ, ನಿರುಪಯುಕ್ತ ವಸ್ತುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ ಅನ್ನೋದನ್ನ ಇಲ್ಲೋರ್ವ ಕಲಾವಿದ ತೋರಿಸಿಕೊಟ್ಟಿದ್ದಾರೆ. ನೀವೇ ಈ ವಿಡಿಯೋ ನೋಡಿ.

ಕಲಾವಿದ ಮಹೇಶ್ ಕಡೆಚೂರ

"ಕಲಾವಿದ ಮಹೇಶ್ ಕಡೆಚೂರ"

  • Share this:
    ಕಲಬುರಗಿ: ಡಿಸೈನ್ ಡಿಸೈನ್ ಅಲಂಕಾರಿಕ ವಸ್ತುಗಳು, ಹೂ ಕುಂಡಲಿಗಳು ಇನ್ನೂ ಏನೇನೋ. ಇದೆಲ್ಲವೂ ಸಾಧ್ಯವಾಗಿದ್ದು ನಾವ್ ನೀವ್ ಯೂಸ್ ಮಾಡಿ ಯಾವುದು ವೇಸ್ಟ್  (Waste Management) ಎಂದು ಭಾವಿಸ್ತೀವೋ ಅಂತಹದ್ದೇ ವೇಸ್ಟೇಜ್​ಗಳಿಂದ. ನಿಜ, ಇಲ್ಲಿ ಕಾಣ್ತಿರೋ ಪ್ರತಿಯೊಂದು ಅಲಂಕಾರಿಕ ವಸ್ತುಗಳು ಕೂಡಾ ನಿರುಪಯುಕ್ತ ವಸ್ತುಗಳೇ. ಆದರೆ ಅದನ್ನ ಉಪಯುಕ್ತ ವಸ್ತುವನ್ನಾಗಿಸಿ ಅಲಂಕಾರ ನೀಡುವಲ್ಲಿ ಯಶಸ್ವಿಯಾಗಿದ್ದು ಓರ್ವ ಹವ್ಯಾಸಿ ಕಲಾವಿದ. ಕಲಬುರಗಿಯ (Kalaburagi) ಜಗತ್ ಬಡಾವಣೆಯ ನಿವಾಸಿ, ಹವ್ಯಾಸಿ ಕಲಾವಿದರಾದ ಮಹೇಶ ಕಡೆಚೂರ ಅವರೇ ಇದರ ಹಿಂದಿರೋ ಮಾಂತ್ರಿಕ! ಹಾಗಾದರೆ ಅವರ ಕಲೆಯ ವೈಶಿಷ್ಟ್ಯತೆಯೇನು? ಇಲ್ಲಿದೆ ನೋಡಿ ಕಲಬುರಗಿ ಕಲಾವಿದರೋರ್ವ ಪಾಸಿಟಿವ್ ಸ್ಟೋರಿ.

    ಲಾಕ್ಡೌನ್ ಟೈಮ್ ನೋ ‘ವೇಸ್ಟ್‘
    ತೆಂಗಿನಕಾಯಿ ಗೊರಟೆ, ಬಿದ್ದು ಹೋದ ಮರ, ಎಸೆದ ಬಾಟಲಿ, ಇನ್ಯಾವುದಕ್ಕೂ ಉಪಯೋಗಕ್ಕೆ ಬಾರದ ಫ್ಯಾನ್ ಇವುಗಳೆಲ್ಲವೂ ಇಲ್ಲಿ ಡಿಸೈನ್ ಪಡೆದು ರಾಜನ ಸ್ಥಾನ ಪಡೆದಿದೆ. ಅಂದಹಾಗೆ ಮಹೇಶ ಕಡೆಚೂರ ಅವ್ರಿಗೆ ಇದೆಲ್ಲವೂ ಸಾಧ್ಯವಾಗಿದ್ದು ಕೊರೊನಾ ಲಾಕ್​ಡೌನ್​ನಲ್ಲಿ. ವೃತ್ತಿಯಲ್ಲಿ ಉದ್ಯಮಿಯಾಗಿರೋ ಇವ್ರು ಪ್ರವೃತ್ತಿಯಲ್ಲಿ ಹವ್ಯಾಸಿ ಕಲಾವಿದ.



    ಪ್ರಾಣಿ, ಪಕ್ಷಿಗಳ ಮೇಲೂ ಪ್ರೀತಿ
    ಕೊರೊನಾ ಲಾಕ್​ಡೌನ್​ ಟೈಮ್​ನಲ್ಲಿ ಸಿಕ್ಕ ಟೈಮ್ ಇದ್ಕಾಗಿ ಯೂಸ್ ಮಾಡಿದ್ದಾರೆ. ತ್ಯಾಜ್ಯ ವಸ್ತು ಎಂದು ಎಸೆಯುವ ವಸ್ತುಗಳಿಂದ ಅನೇಕ ಬಗೆಯ ಅಲಂಕಾರಿಕ ವಸ್ತುಗಳಿಗೆ ಜೀವ ತುಂಬಿದ್ದಾರೆ. ಪರಿಸರದ ಜೊತೆಗೆ ಪ್ರಾಣಿ, ಪಕ್ಷಿಗಳ ಮೇಲೂ ಪ್ರೀತಿ ಹೊಂದಿರುವ ಮಹೇಶ್ ಅವ್ರು ಅದ್ಕಾಗಿಯೇ ನೀರು, ಆಹಾರ ಇಡಬಲ್ಲ ಮಾದರಿಯನ್ನೂ ರಚಿಸಿದ್ದಾರೆ.

    ಮಹೇಶ ಕಡೆಚೂರ ಅವರ ಸಂಪರ್ಕ ಸಂಖ್ಯೆ: 8088481516

    ಇದನ್ನೂ ಓದಿ: Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ! 

    ಮಹೇಶ ಕಡೆಚೂರ ಅವ್ರ ಕಲಾ ಚಾತುರ್ಯಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಭೇಷ್ ಎಂದಿದ್ದಾರೆ. ಅಷ್ಟೆ ಅಲ್ಲ ಅವರು ತಯಾರಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟು ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಸಹ ಮೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಕಲಬುರಗಿ ಜನತೆ ಕೂಡಾ ಕಡೆಚೂರ ಅವ್ರ ಈ ಒಳ್ಳೆ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.



    ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

    ನಾವ್ ನೀವ್ ಬಳಸಿ ಎಸೆಯೋ ವಸ್ತುಗಳು ಇಲ್ಲಿ ಅಲಂಕಾರ ಪಡೆದಿದೆ. ಈ ಮೂಲಕ ಪರಿಸರದ ಮೇಲಾಗುವ ವ್ಯತಿರಿಕ್ತ ಪರಿಣಾಮವನ್ನ ಸ್ವಲ್ಪ ಮಟ್ಟಿಗಾದ್ರೂ ತಡೆಯಬಹುದು. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಿದಾಗ ಪರಿಸರದ ರಕ್ಷಣೆಯೂ ಸಾಧ್ಯ ಅನ್ನೋದ್ರಲ್ಲಿ ಸಂಶಯವಿಲ್ಲ.

    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
    Published by:guruganesh bhat
    First published: