ಕಲಬುರಗಿ: ಗೋಡೆ ತುಂಬಾ ಕಲರ್ಫುಲ್ ಕಾರ್ಟೂನು.. ಯೂನಿಫಾರಂ ತೊಟ್ಟ ಪುಟ್ಟಪುಟ್ಟ ಮಕ್ಕಳು. ಇದ್ಯಾವುದೋ ಕಾನ್ವೆಂಟ್ ಸ್ಕೂಲ್ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಇದು ಪಕ್ಕಾ ಸರ್ಕಾರಿ ಅಂಗನವಾಡಿ. ಅದ್ಯಾವ ಖಾಸಗಿ ನರ್ಸರಿಗೂ (Private Nursery) ಕಡಿಮೆಯಿಲ್ಲ ಈ ಬಾಲವಾಡಿಯ ಚಿತ್ತಾರ. ಮುದ್ದು ಮುದ್ದು ಮಕ್ಕಳಿಗಂತೂ ಮನೆಗಿಂತಲೂ ಈ ಅಂಗನವಾಡಿಯೇ ಹೆಚ್ಚು ಅಚ್ಚುಮೆಚ್ಚು. ಕಲಬುರಗಿಯ ನಂದಿಕೂರ್ ಗ್ರಾಮದ ಅಂಗನವಾಡಿಯೇ (Best Anganwadi In Kalaburagi) ಈ ಮಟ್ಟಿಗೆ ಕಲರ್ ಫುಲ್ ಆಗಿ ಕಂಗೊಳಿಸುತ್ತಿರೋದು. ಯಾವುದೇ ಖಾಸಗಿ ಕಾನ್ವೆಂಟ್ಗಿಂತಲೂ ಕಡಿಮೆಯಿಲ್ಲ ಅನ್ನೋದನ್ನ ತೋರಿಸ್ತಿದೆ.
ಈ ಅಂಗನವಾಡಿಯ ಹೊರಾಂಗಣ, ಒಳಾಂಗಣಗಳೆಲ್ಲವೂ ಅದ್ಭುತವೆನಿಸುವ ಪೇಂಟಿಂಗ್ನಿಂದ ಗಮನ ಸೆಳೆಯುತ್ತಿದೆ. ಗೋಡೆಯಲ್ಲಂತೂ ಮಕ್ಕಳ ಇಷ್ಟದ ಛೋಟಾ ಭೀಮ್ ಸಹಿತ ಹಲವು ಕಾರ್ಟೂನುಗಳು, ಪ್ರಾಣಿ ಪಕ್ಷಿಗಳ ಚಿತ್ರಗಳು ಹಾಗೂ ಆಟಿಕೆಗಳು ಮಕ್ಕಳ ಖುಷಿ ಹೆಚ್ಚಿಸುತ್ತಿವೆ.
ಹೇಗೆ ಇಷ್ಟು ಅದ್ಭುತವಾಯ್ತು?
ಸಾಮಾನ್ಯ ಅಂಗನವಾಡಿಯೊಂದು ಈ ಮಟ್ಟಿಗೆ ಬದಲಾದ ಹಿಂದೆ ಇರೋದು ಇಲ್ಲಿನ ಎಸಿಡಿಪಿಓ ಆಗಿದ್ದ ವಿಜಯಲಕ್ಮಿ ಹೇರೂರ್. ಇವರು ಸಿಡಿಪಿಓ ಆಗಿ ಇಲ್ಲಿಂದ ಪ್ರಮೋಷನ್ ಪಡೆದು ಹೋಗುವಾಗ ಮಕ್ಕಳ ಆಸಕ್ತಿ ಕಂಡು, ಮಕ್ಕಳ ಕಲಿಕೆಗೆ ಏನಾದ್ರು ಮಾಡಬೇಕು ಎಂಬ ಆಸೆಯಿಂದ ತಮ್ಮ ಸ್ವಂತ ಹಣದಿಂದ ಮಕ್ಕಳಿಗೆ ಯೂನಿಫಾರಂ, ಪುಸ್ತಕ, ಐಡಿಕಾಡ್೯, ಆಟಿಕೆ ಸಾಮಗ್ರಿಗಳನ್ನು ನೀಡಿದರು.
ಇದನ್ನೂ ಓದಿ: Kalaburagi: 111 ದಿನ ಉಪವಾಸ, ಮೌನವ್ರತ ಮಾಡಿದ ಕಲಬುರಗಿಯ ಸ್ವಾಮೀಜಿ!
ಅಷ್ಟೇ ಅಲ್ಲದೇ ಮಕ್ಕಳನ್ನು ಆಕರ್ಷಿಸುವ ಪೇಂಟಿಂಗ್ ಕೂಡಾ ಮಾಡಿಸಿದರು. ಅಂದಿನಿಂದ ಈ ಅಂಗನವಾಡಿಯ ಲುಕ್ ಚೇಂಜ್ ಆಗಿದ್ದು, ಮುದ್ದು ಮಕ್ಕಳ ಲಕ್ ಎಂಬಂತಾಗಿದೆ.
ಸಮಯ ಕಳೆದದ್ದೇ ಗೊತ್ತಾಗಲ್ಲ!
ಸದ್ಯ ಈ ಅಂಗನವಾಡಿಗೆ ಬಂದ ಮಕ್ಕಳು ಮತ್ತೆ ಮನೆಗೆ ಹೋಗೋಕೆ ಹಿಂದೇಟು ಹಾಕ್ತಾರೆ. ಸಹಪಾಠಿಗಳ ಜೊತೆ ಆಟವಾಡ್ತಾ ಸಮಯ ಕಳೆಯುವ ಮುದ್ದು ಮಕ್ಕಳು, ಬೇಗನೇ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ತಾರೆ. ಈ ಚಿತ್ರ ಚಿತ್ತಾರದ ಅಂಗನವಾಡಿ ಮಕ್ಕಳು ಮಾತ್ರವಲ್ಲದೇ ಅವರ ಪೋಷಕರ ಖುಷಿಯನ್ನೂ ಹೆಚ್ಚಿಸುತ್ತಿದೆ.
ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ
ಈ ಅಂಗನವಾಡಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಖಾಸಗಿ ಶಾಲೆ ಹಿಂದಿಕ್ಕುತ್ತೆ ನೋಡಿ
ಒಟ್ಟಿನಲ್ಲಿ ಸಾಮಾನ್ಯ ಸರ್ಕಾರಿ ಅಂಗನವಾಡಿಯೊಂದು ಮಾದರಿ ಬದಲಾವಣೆ ಕಂಡಿದೆ. ಪ್ರತಿಯೊಂದು ಸರ್ಕಾರಿ ಶಾಲೆಗಳೂ ಇಂತದ್ದೇ ದಾರಿಯಲ್ಲಿ ಸಾಗಿದರೆ ಖಾಸಗಿ ಶಾಲೆಗಳನ್ನ ಹಿಂದಿಕ್ಕೋದ್ರಲ್ಲಿ ಸಂಶಯವಿಲ್ಲ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ