ಪಟ ಪಟ ಅಂತಾ ಅರಳು ಹುರಿದಂತೆ ಈತನ ಮಾತು. ಇಂಗ್ಲೀಷ್ ನಲ್ಲಿ ಯಾವುದೇ ವರ್ಡ್ ಕೇಳಿದ್ರೂ ಅದ್ಕಿಂತ್ಲೂ ಸ್ಪೀಡಾಗಿ ಹೇಳ್ತಾನೆ ಸ್ಪೆಲ್ಲಿಂಗ್. ಅಬ್ಬಬ್ಬ! ಅದೇನ್ ಟ್ಯಾಲೆಂಟ್ ಗುರು (Children Talent) ಅಂತಾ ನಿಬ್ಬೆರಗಾಗ್ ಬಿಡ್ತೀರ. ಈ ಪೋರನ ಸ್ಪೀಡ್ ನೋಡಿದ್ರೆ ಸುಸ್ತಾಗ್ ಬಿಡ್ತೀರ. ಹೀಗೆ ಐದು ನಿಮಿಷದಲ್ಲಿ ಈತ ಹೇಳೋ ಆ ಪದಗಳ ಸಂಖ್ಯೆ ಎಷ್ಟು ಗೊತ್ತಾ? ನೀವೇ ನೋಡ್ಬಿಡಿ. ಅಂದಹಾಗೆ ಈ ಪೋರನ ಹೆಸರು ಧೃವಂತ್ ರಾಜೀವ್ ಆಲೂರ್ ಅಂತ. ಕಲಬುರಗಿ ನಗರದ (Kalaburagi News) ಬ್ಯಾಂಕ್ ಕಾಲೋನಿಯ ರಾಜೀವ್ ಹಾಗೂ ಕವಿತಾ ದಂಪತಿಗಳ ಎರಡನೆ ಪುತ್ರ. ಸದ್ಯ ಧೃವಂತ್ ಒಂದನೆ ಕ್ಲಾಸ್ ಹುಡುಗ. ಆದ್ರೆ ಈತನ ಟ್ಯಾಲೆಂಟ್ ಮಾತ್ರ ಕಡಿಮೆಯದ್ದಲ್ಲ.
ಈತ ಇಂಗ್ಲಿಷ್ನಲ್ಲಿ ಅರಳು ಹುರಿದಷ್ಟೇ ಈಸಿಯಾಗಿ ಇಂಗ್ಲಿಷ್ ಪದಗಳನ್ನು ಹೇಳ್ತಾನೆ. ಐದು ವರ್ಷದ ಧೃವಂತ್ ತಂದೆ ತಾಯಿಯಿಂದ ಬಳುವಳಿಯಾಗಿ ಪಡೆದ ವಿದ್ಯೆಯಿಂದ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಪಾತ್ರರಾಗಿದ್ದಾನೆ.
ಇದನ್ನೂ ಓದಿ: Good News: ಪ್ರಯಾಣಿಕರೇ ಗಮನಿಸಿ, ಕಲಬುರಗಿಯಿಂದ ದಾದರ್ಗೆ ವಿಶೇಷ ರೈಲು
ಐದು ನಿಮಿಷಗಳಲ್ಲಿ 310 ಇಂಗ್ಲಿಷ್ ಪದ
ದೃವಂತ್ ತಂದೆ ಶಿಕ್ಷಕರಾಗಿದ್ದು ಮಗನಲ್ಲಿರುವ ಆಸಕ್ತಿ ಗಮನಿಸಿ ಇಂಗ್ಲಿಷ್ ಪದಗಳನ್ನ ಉಚ್ಛರಿಸಲು ಕಲಿಸಲಾರಂಭಿಸಿದ್ದರು. ಹೀಗೆ ಮಗನ ಕಲಿಕೆಯ ಸ್ಪೀಡ್ ಕಂಡು ಇದನ್ನ ಯಾಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳಿಸಲು ಮುಂದಾದ್ರು. ಈ ಮೂಲಕ ದೃವಂತ್ ಕೇವಲ ಐದು ನಿಮಿಷಗಳಲ್ಲಿ 310 ಇಂಗ್ಲಿಷ್ ಪದಗಳನ್ನು ಚಾಚೂ ತಪ್ಪದೇ ಉಚ್ಛರಿಸಿ ಈ ಹಿಂದೆ ಅಂಡಮಾನ್ ನಿಕೋಬಾರ್ನ ಐದು ವರ್ಷದ ಶಿವಯೋಗಿತಾ ಎಂಬ ಬಾಲಕಿ ಹೆಸರಲ್ಲಿದ್ದ ದಾಖಲೆಯನ್ನು ಉಡೀಸ್ ಮಾಡ್ತಾನೆ. ಇಂಡಿಯಾ ಬುಕ್ ಅಫ್ ರೆಕಾರ್ಡ್ ನ ಪದಕವನ್ನು ಮುಡಿಗೇರಿಸಿಕೊಳ್ತಾನೆ.
ಇದನ್ನೂ ಓದಿ: Kalaburagi: 111 ದಿನ ಉಪವಾಸ, ಮೌನವ್ರತ ಮಾಡಿದ ಕಲಬುರಗಿಯ ಸ್ವಾಮೀಜಿ!
ಅರಳು ಹುರಿದಷ್ಟೇ ಸುಲಭ!
ಹೀಗೆ ಐದರ ಹರೆಯದ ದೃವಂತ್ ಇಂಗ್ಲೀಷ್ ಪದಗಳ ಅಕ್ಷರಗಳನ್ನು ಅರಳು ಹುರಿದಷ್ಟು ಸ್ಪೀಡಲ್ಲಿ ಹೇಳುವ ಮೂಲಕ ಜನರನ್ನು ನಿಬ್ಬೆರಗಾಗುವಂತೆ ಮಾಡ್ತಿದ್ದಾನೆ. ಕರುನಾಡ ಈ ಬಾಲ ಪ್ರತಿಭೆಗೆ ನಮ್ ಕಡೆಯಿಂದಲೂ ಹ್ಯಾಟ್ಸಾಪ್ ಹೇಳೋಣ ಅಲ್ವಾ!
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ