ಕಲಬುರಗಿ: ಬಿಡುವಿಲ್ಲದೆ ಸೂಸಲಾ ತಯಾರಿಸುತ್ತಿರುವ ವ್ಯಕ್ತಿ, ಅದನ್ನು ತಿನ್ನಲು ಕಾದು ನಿಂತಿರುವ ಜನ ಈ ಎಲ್ಲಾ ದೃಶ್ಯಗಳು ಕಂಡದ್ದು ಕಲಬುರಗಿ ಜಿಲ್ಲೆಯ (Kalaburagi) ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ಗೇಟ್ ಬಳಿ. ವೃತ್ತಿಯಲ್ಲಿ ಚಾಲಕನಾದ್ರೂ ಹೋಟೆಲ್ ಉದ್ಯಮಕ್ಕೆ ಇಳಿದು ಕೈತುಂಬಾ ಸಂಪಾದನೆ ಮಾಡ್ತಾ ಸಖತ್ ಫೇಮಸ್ ಆಗ್ತಿರೋ ವ್ಯಕ್ತಿ ಇವ್ರು. ಹೆಸರು ನಾಗರಾಜ್ ಅಂತ. ಇವರ ಭುವನ್ ಹೋಟೆಲ್ ಸೂಸಲಾ (Susla Recipe) ಕಲಬುರಗಿಲೇ ವರ್ಡ್ ಫೇಮಸ್ ಆಗಿದೆ!
ಇವರು ತಯಾರಿಸೋ ಚುರುಮುರಿ ಸೂಸಲಾ ಈ ಭಾಗದ ಜನರಿಗೆ ಅತ್ಯಂತ ಅಚ್ಚುಮೆಚ್ಚು. ಎಷ್ಟು ಫೇಮಸ್ ಅಂದ್ರೆ ಐದಾರು ಗಂಟೆಯಲ್ಲಿ ಬರೋಬ್ಬರಿ 20 ಕ್ಕೂ ಅಧಿಕ ಚುರುಮುರಿ ಚೀಲ ಖಾಲಿಯಾಗಿಬಿಡುತ್ತವೆ. ಇವರ ಸ್ಪೆಷಲ್ ಸೂಸಲಾಕ್ಕೆ ಸರ್ಕಾರಿ ನೌಕರರು, ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವ ಜನ ಫಿದಾ ಆಗಿದ್ದಾರೆ. ಅಷ್ಟೇ ಏಕೆ ಇವರ ಸೂಸಲಾ ತಿನ್ನಲು ಜನ ಗಂಟೆಗಟ್ಟಲೆ ಕಾದು ನಿಲ್ತಾರೆ.
ಒಂದು ಪ್ಲೇಟ್ಗೆ 20 ರೂ ಮಾತ್ರ!
ನಾಗರಾಜ್ ಅವರು ತಯಾರಿಸುವ ಸೂಸಲಾವನ್ನ ಇದೇ ರೋಡಲ್ಲಿ ಪ್ರತಿನಿತ್ಯ ಕೆಲಸಕ್ಕೆ ಹೋಗುವ ಕಲಬುರಗಿ, ಯಾದಗಿರಿ, ರಾಯಚೂರು ಜನ ಬಸ್ ಇಳಿದು ಪಾರ್ಸಲ್ ತೆಗೆದುಕೊಂಡು ಸಹ ಹೋಗ್ತಾರೆ. ಸೂಸಲಾದ ಒಂದು ಪ್ಲೇಟ್ಗೆ ಕೇವಲ 20 ರೂ. ಮಾತ್ರ. ತಯಾರಿಸೋದೇ ತಡ ಖಾಲಿ ಆಗ್ಬಿಡುತ್ತೆ ನಾಗರಾಜ್ ಅವ್ರ ಭುವನ್ ಹೋಟೆಲ್ ಸೂಸಲ.
ರೆಸಿಪಿ ಇಲ್ಲಿದೆ!
ಇವರು ತಯಾರಿಸುವ ಚುರುಮುರಿ ಸೂಸಲಾ ತುಂಬಾ ಡಿಫರೆಂಟ್. ಒಂದು ಚೀಲ ಚುರುಮುರಿಗೆ ಅತಿ ಹೆಚ್ಚು ಪುಟಾಣಿ ಪುಡಿ ಬಳಕೆಮಾಡುತ್ತಾರೆ. ಟೊಮ್ಯಾಟೋ, ಮೆಣಸಿನಕಾಯಿ, ಉಳ್ಳಾಗಡ್ಡಿ ಕರಿಬೇವು, ಅಡುಗೆ ಎಣ್ಣೆ, ಸ್ಪೆಷಲ್ ಮಸಾಲೆ ಪೌಡರ್ ಬಳಕೆ ಮಾಡಿ ಸೂಸಲಾ ತಯಾರಿಸ್ತಾರೆ. ಒಮ್ಮೆ ಇವರ ಸೂಸಲಾ ಸವಿದವರಿಗೆ ಮತ್ತೆ ಇಲ್ಲಿಗೇ ಬರ್ಬೇಕು ಅನ್ನೋ ಆಸೆ ಹುಟ್ಬಿಡುತ್ತೆ!
ಇದನ್ನೂ ಓದಿ: Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!
20 ಚುರುಮುರಿ ಚೀಲ ಖಾಲಿ
ಇವರ ದಿನಪೂರ್ತಿ ಸೂಸಲಾ ತಯಾರಿಸುವುದಿಲ್ಲ. ಬೆಳಗ್ಗೆ ಮೂರ್ನಾಲ್ಕು ಗಂಟೆ ಮತ್ತು ಸಾಯಂಕಾಲ ಮೂರ್ನಾಲ್ಕು ಗಂಟೆ ಮಾತ್ರ ಸೂಸಲಾ ರೆಡಿ ಮಾಡ್ತಾರೆ. ಇಷ್ಟೇ ಇಷ್ಟು ಹೊತ್ತಲ್ಲಿ 6 ಕೆಜಿ ತೂಗೋ 20 ಚುರುಮುರಿ ಚೀಲ ಖಾಲಿ ಆಗ್ಬಿಡುತ್ತೆ! ಅಲ್ಲದೇ ಇದರ ಜೊತೆಗೆ ಪೂರಿ ಆಲುಬಾತ್ ಇಡ್ಲಿ-ವಡಾ ಸಹ ಇಲ್ಲಿ ಸವಿಯಲು ಸಿಗುತ್ತೆ.
ಇದನ್ನೂ ಓದಿ: Kalaburagi: ಈ ಊರಲ್ಲಿ 2 ಅಂತಸ್ತಿನ ಮನೆ ಕಟ್ಟೋದೇ ಇಲ್ಲ!
ಚಾಲಕನಾಗಿದ್ರೂ ಹೋಟೆಲ್ ಉದ್ಯಮಕ್ಕೆ ಕೈ ಹಾಕಿ ಕಲಬುಗಿ ಜನರಿಗೆ ರುಚಿರುಚಿ ಸೂಸಲಾ ಉಣಬಡಿಸುತ್ತಿರೋ ಈ ನಳ ಮಹಾರಾಜನ ಸೂಸಲಾ ಸವಿಯೋಕೆ ನಾವೂ ಒಮ್ಮೆ ಹೋಗೋಣ ಅಲ್ವಾ?
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ