ಕಲಬುರಗಿ: ಮಣ್ಣಿನ ಹೂಜಿ, ಮಣ್ಣಿನ ಲೋಟ, ವಿವಿಧ ಮಣ್ಣಿನ ಪಾತ್ರೆ ಪಗಡೆಗಳು. ಹೀಗೆ ಬಿಸಿಲ ನಾಡಿನಲ್ಲಿ ಮಣ್ಣಿನ ಮಡಕೆಗಳದ್ದೇ ಹವಾ. ಬೇಸಿಗೆ ಬಿಸಿಯನ್ನ ತಂಪು ಮಾಡೋ ಈ ದೇಸಿ ರೆಫ್ರಿಜರೇಟರ್ಗೆ ಈಗ ಎಲ್ಲಿಲ್ಲದ ಬೇಡಿಕೆ. ವಿವಿಧ ಆಕಾರ, ಗಾತ್ರಗಳಲ್ಲಿ ಸಿಗೋ ಈ ಮಣ್ಣಿನ ಮಡಕೆಯೇ (Clay Pot) ಈಗ ಕಲಬುರಗಿ ಜನರ ಪಾಲಿಗೆ ಬೇಸಿಗೆಯ (Summer) ಆಪತ್ಬಾಂಧವ.
ರೆಫ್ರಿಜರೇಟರ್ ಜಾಗದಲ್ಲಿ ಪಾಟ್!
ಯೆಸ್, ಕಲಬುರಗಿ ಜಿಲ್ಲೆಯಾದ್ಯಂತ ಬಿಸಿಲು ಜನರನ್ನು ಹೈರಾಣ ಮಾಡಿದೆ. ಬಿರು ಬಿಸಿಲಿಗೆ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದೇ ಸವಾಲು. ಅದ್ರಲ್ಲೂ ವಾತಾವರಣದ ಜೊತೆಗೆ ನೀರು, ಗಾಳಿ ಎಲ್ಲವೂ ಬಿಸಿ ಎನ್ನುವಂತಾಗಿದೆ. ಅಂತಹ ಜಾಗದಲ್ಲಿ ಸ್ಥಿತಿವಂತರು ರೆಫ್ರಿಜರೇಟರ್ಗಳನ್ನ ಬಳಸಿದ್ರೆ, ಮಧ್ಯಮ ಮತ್ತು ಬಡ ವರ್ಗದವರು ಮೊರೆ ಹೋಗುವುದೇ ಈ ಮಣ್ಣಿನ ಮಡಿಕೆಗಳಿಗಾಗಿ.
ಆರೋಗ್ಯದ ದೃಷ್ಟಿಯಿಂದ ಫ್ರಿಡ್ಜ್ಗಿಂತ ಮಣ್ಣಿನ ಮಡಿಕೆಯ ನೀರೇ ತಂಪು. ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿಯ ಬಿಸಿಲ ಬೇಗೆ ಜನರ ನೆತ್ತಿ ಸುಡುತ್ತಿದೆ. ಹಾಗಾಗಿ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ತಣ್ಣನೆಯ ನೀರಿಗಾಗಿ ಮಡಿಕೆ
ಕಲಬುರಗಿ ಹೇಳಿಕೇಳಿ ಬಿಸಿಲ ನಾಡು, ಇಲ್ಲಿ ವರ್ಷದ ಹತ್ತು ತಿಂಗಳು ರಣ ಬಿಸಿಲು ಇರುತ್ತವೆ. ಇಂತಹ ಸಮಯದಲ್ಲೇ ಜನರು ಮಣ್ಣಿನ ಪಾತ್ರೆಗಳ ಮೊರೆ ಹೋಗುತ್ತಾರೆ. ಅದ್ರಲ್ಲೂ ನಗರದ ಶರಣಬಸವೇಶ್ವರ ದೇವಸ್ಥಾನದ ಎದುರಿಗೆ ಮಾರಾಟಕ್ಕೆ ಇಡಲಾದ ಮಡಿಕೆಗಳ ವ್ಯಾಪಾರ ಭರದಿಂದ ಸಾಗಿದೆ.
ಇದನ್ನೂ ಓದಿ: Kalaburagi Dargah: ಇಲ್ಲಿ ಬೀಗ ಹಾಕಿದ್ರೆ ಸಾಕು ನೀವು ಬೇಡಿದ್ದು ಈಡೇರುತ್ತಂತೆ! ಇದು ಖಲೀಫತ್ ರೆಹಮನ್ ದರ್ಗಾದ ವಿಶೇಷ
24 ಗಂಟೆಗಳ ತಣ್ಣನೆಯ ನೀರು ಸಿಗುವ ಈ ಮಣ್ಣಿನ ಮಡಿಕೆಗೆ ಹೆಚ್ಚು ಡಿಮ್ಯಾಂಡ್. ಆರೋಗ್ಯದ ಕಾಳಜಿಯಿಂದಾಗಿ ಈಗ ಬಡವರು ಶ್ರೀಮಂತರು ಎನ್ನುವ ಬೇಧವಿಲ್ಲದೆ ಹೆಚ್ಚಿನ ಜನ ಮಡಿಕೆಗೆ ಮಾರು ಹೋಗುತ್ತಿದ್ದಾರೆ.
ಡಿಮ್ಯಾಂಡಪ್ಪೋ ಡಿಮ್ಯಾಂಡ್
ಬೇಡಿಕೆ ಜೊತೆಗೆ ಮಣ್ಣಿನ ಮಡಿಕೆಗಳ ಬೆಲೆಯೂ ತುಸು ಹೆಚ್ಚಾಗಿದೆ. ಈ ಹಿಂದೆ ಒಂದು ಮಣ್ಣಿನ ಮಡಿಕೆಯ ಬೆಲೆ 50 ರಿಂದ 100 ಇತ್ತು. ಆದರೆ ಈಗ 100 ರಿಂದ 200 ರೂಪಾಯಿವರೆಗೆ ಮುಂದುವರೆದಿದೆ.
ಇದನ್ನೂ ಓದಿ: District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು
ಇನ್ನು ವಿವಿಧ ಆಕಾರಗಳಲ್ಲಿ ಮಡಿಕೆಗಳು ಇದ್ದು, ಗ್ರಾಹಕರ ಆಯ್ಕೆಗೆ ಸೂಕ್ತವಾಗಿದೆ. ಒಟ್ಟಿನಲ್ಲಿ ಬಿಸಿಲನಾಡಿನ ಬೇಸಿಗೆ ಧಗೆ ಜನರನ್ನು ಮಣ್ಣಿನ ಮಡಿಕೆಯತ್ತ ಮುಖ ಮಾಡುವಂತೆ ಮಾಡಿದೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ