Lemon Juice Business: ನಿಂಬು ಜ್ಯೂಸ್​ನಿಂದ ಭರ್ಜರಿ ಲಾಭ, ಪ್ರತಿದಿನ ಜೇಬು ಸೇರುತ್ತೆ ಸಾವಿರಾರು ರೂಪಾಯಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೇವಲ 15 ರೂ. ಗೆ ಒಂದು ಲೋಟ ಶರಬತ್ ಇಲ್ಲಿ ಸಿಗುತ್ತಿದ್ದು, ಹೀಗೆ ಶಾಹಿದ್ ಅಲಿ ಅವರು ಪ್ರತಿದಿನ 500-600 ಲೋಟ ಜ್ಯೂಸ್ ಮಾರಿ ಉತ್ತಮ ಆದಾಯ ಗಳಿಸುತ್ತಾರೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಪಟ್ ಪಟಾಂತ ರೆಡಿಯಾಗೋ ನಿಂಬು ಶರಬತ್. ಕುಡಿದು ಆಯಾಸ ನಿವಾರಿಸಿಕೊಳ್ಳೋಕೆ ಕ್ಯೂ ನಿಂತಿರೋ ಜನರು. ಅಷ್ಟಕ್ಕೂ ಇದು ನಾರ್ಮಲ್ ಶರಬತ್ ಅಲ್ಲ, ಬದಲಿಗೆ ಸಖತ್ ಟೇಸ್ಟಿ ನಿಂಬು ಜ್ಯೂಸ್. ಬೇಸಿಗೆಯಲ್ಲಿ (Summer Business Ideas) ನಿಂಬು ಜ್ಯೂಸ್ ಮಾರಾಟ (Lemon Juice Business) ಮಾಡಿಯೇ ಸಖತ್ ಆದಾಯ ಗಳಿಸುತ್ತಿದ್ದಾರೆ ಶಾಹಿದ್ ಅಲಿ ಎಂಬ ಈ ವ್ಯಕ್ತಿ!


    ಹೇಳಿ ಕೇಳಿ ಈಗ ಬೇಸಿಗೆ ಬೇರೆ. ತಲೆ ಮೇಲೆ ಸೂರ್ಯನ ಬಿಸಿಲು ಸುಡುತ್ತಿದ್ದರೆ, ದಣಿವರಿಸಿಕೊಳ್ಳಲು ಕಲಬುರಗಿ ಮಂದಿಗೆ ಈ ಸ್ಪೆಷಲ್ ಶರಬತ್ ಜ್ಯೂಸ್ ಸೆಂಟರ್​ ನೆಚ್ಚಿನ ತಾಣ! ಯೆಸ್, ಕಲಬುರಗಿ ನಗರದ ಕೋರ್ಟ್ ರಸ್ತೆಯಲ್ಲಿರೋ ಅರಣ್ಯ ಇಲಾಖೆಯ ಗೋಡೆಗೆ ತಾಗಿಕೊಂಡೇ ಈ ಸ್ಪೆಷಲ್ ಲೈಮ್ ಶರಬತ್​ ಅಂಗಡಿಯಿದೆ. ಇಲ್ಲಿ ರೆಡಿಯಾಗೋ ನಿಂಬು ಶರಬತ್ ಒಂದು ಗ್ಲಾಸ್ ಕುಡಿದವ್ರು ಮತ್ತೊಂದು ಗ್ಲಾಸ್​ಗೆ ಕೈಯೊಡ್ಡುತ್ತಾರೆ. ಅಷ್ಟೊಂದು ಟೇಸ್ಟಿ, ವೆರೈಟಿ ಆಗಿವೆ ಈ ಲೈಮ್ ಜ್ಯೂಸ್.




    ಎರಡೇ ವೆರೈಟಿಯಾದ್ರೂ ಜನರು ಕ್ಯೂ ನಿಲ್ತಾರೆ!
    ಎಷ್ಟೇ ಜನ ಬರ್ಲಿ, ಯಾವುದೇ‌ ಮೆಷಿನ್ ಬಳಸದೇ ತಾನೇ ಸ್ವತಃ ಕೈಯ್ಯಾರೆ ನಿಂಬು ಹಿಂಡಿ ಜ್ಯೂಸ್ ಮಾಡೋದು ಇಲ್ಲಿನ ವಿಶೇಷ. ಕಲಬುರಗಿಯ ನಿವಾಸಿಯಾಗಿರುವ ಮಹ್ಮದ್ ಶಾಹೀದ್ ಅಲಿ ಅವರ ಈ ಜ್ಯೂಸ್ ಸ್ಟಾಲ್ ಹಾಗಾಗಿ ಬಲು ಫೇಮಸ್. ಇಲ್ಲಿ ನಿಂಬು ಶರಬತ್ ಬಿಟ್ರೆ, ಮಸಾಲ ಶರಬತ್ ಹೀಗೆ ಎರಡೇ ವೆರೈಟಿ. ಆದ್ರೆ ದಿನವಿಡೀ ಜನ ಕ್ಯೂ ನಿಂತು ಶಾಹಿದ್ ಅಲಿಯವರ ಕೈ ರುಚಿಯ ನಿಂಬು ಶರಬತ್ ಸವಿಯುತ್ತಾರೆ.


    ಸಾಂದರ್ಭಿಕ ಚಿತ್ರ


    ಕಡಿಮೆ ಖರ್ಚಲ್ಲಿ ಭರ್ಜರಿ ಲಾಭ
    ಕೇವಲ 15 ರೂ. ಗೆ ಒಂದು ಲೋಟ ಶರಬತ್ ಇಲ್ಲಿ ಸಿಗುತ್ತಿದ್ದು, ಹೀಗೆ ಶಾಹಿದ್ ಅಲಿ ಅವರು ಪ್ರತಿದಿನ 500-600 ಲೋಟ ಜ್ಯೂಸ್ ಮಾರಿ ಉತ್ತಮ ಆದಾಯ ಗಳಿಸುತ್ತಾರೆ. ನಿಂಬು, ಸಕ್ಕರೆ ಬಿಟ್ಟರೆ ಬೇರೇನೂ ಖರ್ಚಿಲ್ಲ, ಎಲ್ಲಾ ಲಾಭವೇ ಎನ್ನೋದು ಇವರ ಮಾತು. 


    ಇದನ್ನೂ ಓದಿ: Kalaburagi: ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ, ಜಾತಿ-ಧರ್ಮದ ಹಂಗಿಲ್ಲದೇ ಅನಾಥ ಶವಗಳಿಗೆ ಮುಕ್ತಿ ಕೊಡುವ ಯುವಕರು!



    ಇಲ್ಲಿನ ಶರಬತ್ತು ಸ್ಪೆಷಲ್ ಏನು ಅಂತ ಮಹ್ಮದ್ ಶಾಹೀದ್ ಅಲಿ‌ ಅವರನ್ನು ಕೇಳಿದ್ರೆ, ಎಲ್ಲವೂ ರುಚಿಗೆ ತಕ್ಕಂತೆ ಬಳಸುತ್ತೇನೆ. ಹೆಚ್ಚು ಕಮ್ಮಿ ಮಾಡಲ್ಲ. ಅಲ್ಲದೇ ಯಾವುದೇ ಮೆಷಿನ್ ಬಳಸೋದಿಲ್ಲ. ಎಷ್ಟೇ ಜನರು ಬಂದ್ರೂ ಕೈಯಿಂದಲೇ ನಿಂಬು ಹಿಂಡಿ ಶರಬತ್ತ ಮಾಡಿಕೊಡ್ತೇನೆ ಎನ್ನುತ್ತಾರೆ. ನಿಜ, ರುಚಿಗೆ ತಕ್ಕಂತೆ ನಿಂಬು, ಸಕ್ಕರೆ, ಐಸ್ ತುಂಡು ಹಾಕಿ ಸಖತ್ ಟೇಸ್ಟಿ ಬರುವಂತೆ ನೋಡಿಕೊಳ್ಳುವುದೇ ಇಲ್ಲಿನ ಲೈಮ್ ಶರಬತ್ ವಿಶೇಷ .


    ಇದನ್ನೂ ಓದಿ: Kalaburagi: ಪಿಯುಸಿ ಮಾತ್ರ ಓದಿರೋ ಈ ಮಹಿಳೆ ಭಾರತದ ಮೊದಲ ಮಹಿಳಾ ಸೂಪರ್ ಬಜಾರ್ ಆರಂಭಿಸಿದ್ರು!


    ಒಟ್ಟಾರೆಯಾಗಿ ಬೇಸಿಗೆ ಬಂದ್ರೆ ಸಾಕು ಸಾಕಷ್ಟು ಜ್ಯೂಸ್ ಅಂಗಡಿಗಳು ಪ್ರಾರಂಭವಾಗುತ್ತೆ. ಆದ್ರೆ, ಮಹ್ಮದ್ ಶಾಹೀದ್ ಅಲಿ ಕೈಟೇಸ್ಟ್ ಎಲ್ಲಿಯೂ ಸಿಗೋದಿಲ್ಲ. ಇಲ್ಲಿ ಕುಡಿದ್ರೆ ತೃಪ್ತಿ ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಮಹ್ಮದ್ ಶಾಹೀದ್ ಅಲಿ ಅವರ ಕೈ ರುಚಿ ನೋಡ್ಬೇಕಾದ್ರೆ ನೀವು ಒಮ್ಮೆ ಕಲಬುರಗಿ ಜಿಲ್ಲೆಗೆ ಬನ್ನಿ.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: