Kalaburagi: ಪಕ್ಷಿಗಳ ದಾಹ ಇಂಗಿಸಲು ಕಲಬುರಗಿ ಯುವಕರ ಹೊಸ ಉಪಾಯ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬೇಸಿಗೆಯ ಸುಡು ಬಿಸಿಲು ಮನುಷ್ಯನನ್ನೇ ಸುಡುತ್ತಿದೆ. ಇನ್ನು ಪ್ರಾಣಿ ಪಕ್ಷಿಗಳು ಕೂಡಾ ನೀರಿಗಾಗಿ ಹಾಹಾಕಾರ ಎದುರಿಸುವ ಪರಿಸ್ಥಿತಿ. ಇದನ್ನ ಮನಗಂಡ ಕಲಬುರಗಿಯ ಕಾಯಕ ಯೋಗಿ ಟ್ರಸ್ಟ್ ಸದಸ್ಯರು ವಿಶೇಷವಾಗಿ ಪಕ್ಷಿಗಳ ನೀರಿನ ದಾಹ ನೀಗಿಸುವ ಕಾಯಕದಲ್ಲಿ ತೊಡಗಿದ್ದಾರೆ.

  • News18 Kannada
  • 2-MIN READ
  • Last Updated :
  • Gulbarga, India
  • Share this:

ಕಲಬುರಗಿ: ಬಿಸಿಲನಗರಿಯಲ್ಲಿ ಎಲ್ಲೆಂದೆರಲ್ಲಿ ಪ್ಲಾಸ್ಟಿಕ್ ಬುಟ್ಟಿಗಳನ್ನ ನೇತು ಹಾಕ್ತಿರೋ ಯುವಕರು, ನೀರು ಹಾಕುತ್ತಾ ಪ್ರಾಣಿ ಪಕ್ಷಿಗಳ ದಾಹ ನೀಗಿಸೋ ಉತ್ಸಾಹ. ಬಿಸಿಲಿನ ಧಗೆಯಲ್ಲಿ (Summer 2023) ಜೀವ ಸಂಕುಲಕ್ಕೆ ನೆರವಾಗೋ ಇವರ ಸೇವೆ ಅಮೋಘ.


ಕಾಯಕಯೋಗಿಗಳ ಸೇವೆ
ಯೆಸ್, ಬೇಸಿಗೆಯ ಸುಡು ಬಿಸಿಲು ಮನುಷ್ಯನನ್ನೇ ಸುಡುತ್ತಿದೆ. ಇನ್ನು ಪ್ರಾಣಿ ಪಕ್ಷಿಗಳು ಕೂಡಾ ನೀರಿಗಾಗಿ ಹಾಹಾಕಾರ ಎದುರಿಸುವ ಪರಿಸ್ಥಿತಿ. ಇದನ್ನ ಮನಗಂಡ ಕಲಬುರಗಿಯ ಕಾಯಕ ಯೋಗಿ ಟ್ರಸ್ಟ್ ಸದಸ್ಯರು ವಿಶೇಷವಾಗಿ ಪಕ್ಷಿಗಳ ನೀರಿನ ದಾಹ ನೀಗಿಸುವ ಕಾಯಕದಲ್ಲಿ ತೊಡಗಿದ್ದಾರೆ.




ಎಲ್ಲೆಲ್ಲಿ ನೀರಿನ ವ್ಯವಸ್ಥೆ?
ಕಲಬುರಗಿಯ ನಗರದ ಐವಾನ್ ಶಾಹಿ ಅತಿಥಿಗೃಹ, ಸಾರ್ವಜನಿಕ ಉದ್ಯಾನವನ, ಕೋರಂಟಿ ಹನುಮಾನ್ ದೇವಸ್ಥಾನ ಸೇರಿದಂತೆ ಹಲವೆಡೆ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆಲಸ ಆರಂಭಿಸಿದ್ದಾರೆ. ಬೇಸಿಗೆಯ ನಾಲ್ಕು ತಿಂಗಳು ಪಕ್ಷಿಗಳಿಗೆ ನೀರುಣಿಸುವಂತಹ ಕೆಲಸಕ್ಕೆ ಕಾಯಕ ಯೋಗಿ ತಂಡ ಮುಂದಾಗಿದೆ.




ಮರಗಿಡಗಳಿಗೆ ಪ್ಲಾಸ್ಟಿಕ್ ಬುಟ್ಟಿ
ಈ ತಂಡದ ಮುಖ್ಯಸ್ಥ ಕೇದಾರನಾಥ ಎಸ್ ಕುಲಕರ್ಣಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇದೀಗ ನಗರದ ವಿವಿಧೆಡೆ ಮರಗಿಡಗಳಿಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ಕಟ್ಟಿ ಪಕ್ಷಿಗಳಿಗಾಗಿ ಆಹಾರ ಹಾಗೂ ನೀರು ಹಾಕಿ ಮರ ಗಿಡಗಳಲ್ಲಿ ಬಂದು ಕೂರುವ ಪಕ್ಷಿಗಳಿಗೆ ದಾಹ ತೀರಿಸುವ ಕೆಲಸ ಮಾಡುತ್ತಿದ್ದಾರೆ.


ಇದನ್ನೂ ಓದಿ: Bijapur Chivda : ಈ ಊರಲ್ಲಿ ಬಿಜಾಪುರ ಚೂಡಾ ಸಿಗೋದು ವರ್ಷದ 15 ದಿನ ಮಾತ್ರ!


ಹೀಗೆ ಮರ ಗಿಡಗಳಿಗೆ ಕಟ್ಟಿದಂತಹ ಬುಟ್ಟಿಗಳಿಗೆ ಅಲ್ಲಿನ ಜನರಿಂದಲೇ ನೀರು ಹಾಕುವಂತೆ ಮನವಿ ಮಾಡುತ್ತಾರೆ. ಜೊತೆಗೆ ಸಾಧ್ಯವಾದ್ರೆ ಸದಸ್ಯರೇ ಹೋಗಿ ನೀರು ಸಂಗ್ರಹಿಸಿ ಪಕ್ಷಿ ಪ್ರೇಮವನ್ನು ಮೆರೆಯುತ್ತಿದ್ದಾರೆ.


ಇದನ್ನೂ ಓದಿ: Cooker Dhaba: ಈ ಡಾಬಾದಲ್ಲಿ ಎಲ್ಲಾ ಕುಕ್ಕರ್​ನಲ್ಲೇ ರೆಡಿಯಾಗುತ್ತೆ! 10 ನಿಮಿಷ ಕಾದರೆ ಸಾಕು ಊಟ ರೆಡಿ!


ಒಟ್ಟಿನಲ್ಲಿ ಬಿರು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸುವ ಕೆಲಸ ಮಾಡ್ತಿರೋ ಕಾಯಕಯೋಗಿ ಟ್ರಸ್ಟ್ ಸದಸ್ಯರ ಸೇವೆ ನಿಜಕ್ಕೂ ಶ್ಲಾಘನೀಯ.


ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

First published: