• Home
 • »
 • News
 • »
 • kalburgi
 • »
 • Success Story: ಕಾಲಿಲ್ಲದಿದ್ರೂ ಕೃಷಿ ಮಾಡ್ತಾರೆ! ಸಮಸ್ಯೆಗಳಿಗೆ ಸವಾಲ್ ಹಾಕಿರೋ ಸ್ವಾಭಿಮಾನಿ

Success Story: ಕಾಲಿಲ್ಲದಿದ್ರೂ ಕೃಷಿ ಮಾಡ್ತಾರೆ! ಸಮಸ್ಯೆಗಳಿಗೆ ಸವಾಲ್ ಹಾಕಿರೋ ಸ್ವಾಭಿಮಾನಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಎರಡು ಕಾಲುಗಳು ಇಲ್ಲದಿದ್ರೂ ಸ್ವತಃ ತಾವೇ ತರಕಾರಿ ಬೆಳೆಗಳನ್ನು ಬಿತ್ತನೆ ಮಾಡ್ತಾರೆ. ಪೈಪುಗಳ ಮೂಲಕ ನೀರು ಹಾಯಿಸ್ತಾರೆ. ಕಳೆ ಕೀಳ್ತಾರೆ. ಮಾರಾಟವನ್ನೂ ಮಾಡ್ತಾರೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ವಿಶೇಷಚೇತನರಾದ್ರೂ ಸ್ವಾಭಿಮಾನಿ ಬದುಕು ಇವರದ್ದು. ಎರಡೂ ಕಾಲುಗಳಿಗೆ ಬಲ ಇಲ್ಲದಿದ್ರೇನಂತೆ, ಕೃಷಿಯಲ್ಲಿ ಬದುಕು ಕಟ್ಟಿಕೊಂಡವರು (Success Story) ಇವರು.  ನಿಜ, ನಡೆಯುವ ಕಾಲುಗಳೇ ಇಲ್ದಿದ್ರೂ ಜೀವನದಲ್ಲಿ ಎದುರಾಗಿರೋ ಸವಾಲಿಗೆ ಚಾಲೆಂಜ್ ಹಾಕಿ ಬದುಕುತ್ತಿರೋ ಇವರು ಕಲಬುರಗಿಯ (Kalaburagi Positive Story)  ಶಿವಪ್ಪ ಜಮಾದಾರ ಅಂತ. ಕೃಷಿ ಭೂಮಿಯಲ್ಲಿ (Agriculture Land) ಹೀಗೆ ಸ್ವಾಧೀನ ಕಳೆದುಕೊಂಡ ಕಾಲುಗಳನ್ನ ಸವೆಸುತ್ತಾ ಕೃಷಿ ಮಾಡುವ 40 ವರ್ಷದ ಶಿವಪ್ಪ ಜಮಾದಾರನವರ ಜೀವನವೇ (Positive Story) ಅಚ್ಚರಿ ಮೂಡಿಸುತ್ತೆ.


  ಕಾಲುಗಳ ಸ್ವಾಧೀನ ಕಳೆದುಕೊಂಡ್ರೂ ತನ್ನೂರಾದ ಜಂಬಗಾ ಗ್ರಾಮದಲ್ಲಿ ಕೃಷಿ ಚಟುವಟಿಕೆ ನಡೆಸಿ ಸೈ ಎನಿಸಿಕೊಂಡಿದ್ದಾರೆ.ತಾವು ಬೆಳೆದ ಬೆಳೆಗೆ ಶಿವಪ್ಪ ತಾವೇ ಮಾರ್ಕೆಟಿಂಗ್ ಕೂಡಾ ಮಾಡ್ತಾರೆ. ಈ ಮೂಲಕ ಅಪ್ಪಟ ಸ್ವಾಭಿಮಾನಿ ಬದುಕನ್ನು ಕಟ್ಕೊಂಡಿದ್ದಾರೆ ಕಲಬುರಗಿಯ ಶಿವಪ್ಪನವ್ರು.


  ಆರನೇ ವರ್ಷದಿಂದಲೇ ಪೋಲಿಯೋ, ಆದ್ರೂ ಅಂಜಲಿಲ್ಲ
  ಆಗಿನ್ನೂ ಶಿವಪ್ಪನವ್ರಿಗೆ ಕೇವಲ ಆರೇ ಆರು ವರ್ಷ, ಆಗಲೇ ಪೋಲಿಯೊಗೆ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ರು. 30 ವರ್ಷಕ್ಕೆ ಮದುವೆಯಾಗಿ ಕಿರಾಣಿ ಅಂಗಡಿ ನಡೆಸುತಿದ್ದ ಶಿವಪ್ಪನವ್ರು ಮುಂದೆ ಕೃಷಿಕಡೆ ಮುಖಮಾಡಿದ್ರು.


  ತಾವೇ ಬೆಳೆಯುತ್ತಾರೆ, ತಾವೇ ಮಾರಾಟ ಮಾಡ್ತಾರೆ
  ತಮ್ಮ ಒಂದು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಪತ್ನಿಯ ಸಹಾಯದೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದ್ರು. ಈಗ ಜಮೀನಿನಲ್ಲಿ ತರಕಾರಿ ಬೆಳೆಗಳಾದ ಪಾಲಕ್ ಸೊಪ್ಪು, ಪುದೀನಾ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಸ್ವತಃ ತಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತಾರೆ.


  ಇದನ್ನೂ ಓದಿ: Positive Story: ಕುಷ್ಠರೋಗಿಗಳಿಗೆ ಈ ದಂಪತಿಯೇ ಆಪತ್ಬಾಂಧವರು; ಹನಮಂತ-ಬಸಮ್ಮ ದಂಪತಿಯ ಕಥೆ ಕೇಳಿ


  ಎರಡು ಕಾಲುಗಳು ಇಲ್ಲದಿದ್ರೂ ಸ್ವತಃ ತಾವೇ ತರಕಾರಿ ಬೆಳೆಗಳನ್ನು ಬಿತ್ತನೆ ಮಾಡ್ತಾರೆ. ಪೈಪುಗಳ ಮೂಲಕ ನೀರು ಹಾಯಿಸ್ತಾರೆ. ಕಳೆ ಕೀಳ್ತಾರೆ. ಸೊಪ್ಪು ಕಟಾವಿಗೆ ಬಂದ ನಂತರ ಪತ್ನಿ ಜಗದೇವಿ ಸಹಾಯದೊಂದಿಗೆ ಸೊಪ್ಪುಗಳನ್ನು ಕಟಾವು ಮಾಡಿ ತ್ರಿಚಕ್ರ ವಾಹನದ ಮೇಲೆ ಸೊಪ್ಪುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಕೈತುಂಬಾ ಸಂಪಾದನೆ ಮಾಡ್ತಾರೆ.


  ಇದನ್ನೂ ಓದಿ: Inspiration: ಇವರಿಗೆ ಕಾಲೇ ಕೈ! ಕಾಲಿಂದಲೇ ಬೈಕ್ ರಿಪೇರಿ ಮಾಡುವ ಕಲಬುರಗಿಯ ಮೆಕಾನಿಕ್


  ಹೀಗೆ ಶಿವಪ್ಪ ಜಮಾದಾರ ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಯಾರ ಬಳಿಯೂ ಕೈ ಚಾಚದೆ ಸಾವಲಂಬಿ ಬದುಕು ನಡೆಸ್ತಿದ್ದಾರೆ. ಕೃಷಿಯನ್ನೆ ನಂಬಿ ಬದುಕುತ್ತಿರುವ ಈ ಶಿವಪ್ಪ ಜಮಾದಾರ ಅವ್ರಿಗೆ ಭೂತಾಯಿ ಕೈ ಹಿಡಿದಿದ್ದಾಳೆ. ಈ ಮೂಲಕ ಎಲ್ಲ ಇದ್ದೂ ಏನೂ ಇಲ್ಲ ಅನ್ನೋರ ನಡುವೆ ಶಿವಪ್ಪನವರು ಮಾದರಿಯಾಗಿ ನಿಂತಿದ್ದಾರೆ.


  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: