• Home
 • »
 • News
 • »
 • kalburgi
 • »
 • Kalaburagi Chakli: ತಿಂದರೆ ತಿಂತಾನೇ ಇರ್ತೀರಿ ಕಲಬುರಗಿ ಚಕ್ಕುಲಿ! ಇದು ಫಾರೆನ್ ಟೂರ್​ಗೂ ಹೋಗುತ್ತೆ!

Kalaburagi Chakli: ತಿಂದರೆ ತಿಂತಾನೇ ಇರ್ತೀರಿ ಕಲಬುರಗಿ ಚಕ್ಕುಲಿ! ಇದು ಫಾರೆನ್ ಟೂರ್​ಗೂ ಹೋಗುತ್ತೆ!

ಚಕ್ಕುಲಿ ರುಚಿ ನೋಡಿ

"ಚಕ್ಕುಲಿ ರುಚಿ ನೋಡಿ"

ಶುದ್ದ ಸ್ವಾದಿಷ್ಟಭರಿತ ಚಕ್ಕುಲಿ, ಬೆಣ್ಣೆ ಚಕ್ಕುಲಿ, ಅವಲಕ್ಕಿ ಚೂಡಾ, ನಿಪ್ಪಟ್ಟು, ಶಂಕರಪಾಳ, ಘಾಟಿ, ಸೇವ್, ಬೆಸನ್ ಉಂಡೆ, ಡ್ರೈ ಫ್ರುಟ್ಸ್ ತುಪ್ಪ ಬಳಸಿ ತಯಾರಿಸೋ ಅಂಟಿನ ಉಂಡೆ ಹೀಗೆ ಮೂವತ್ತಕ್ಕೂ ಅಧಿಕ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡ್ತಾರೆ.

 • Share this:

  ಕಲಬುರಗಿ: ಈ ಮಹಿಳೆ ಚಕ್ಕುಲಿ ತಯಾರಿಸಿದ್ರು ಅಂದ್ರೆ ಎಲ್ರ ಬಾಯಲ್ಲೂ ನೀರೂರುತ್ತೆ! ಹೊರದೇಶಗಳಿಗೂ ಇವ್ರ ಚಕ್ಕುಲಿ (Chakkkli) ರಫ್ತಾಗುತ್ತೆ! ಚಕ್ಕುಲಿ ಸೇರಿದಂತೆ ತರಹೇವಾರಿ ತಿನಿಸುಗಳನ್ನ ತಯಾರಿಸುತ್ತಿರುವ ಈ ಮಹಿಳೆಯ ಹೆಸರು ಅನ್ನಪೂರ್ಣ ಸಂಗೋಳ್ಗಿ ಅಂತ, ಕಲಬುರಗಿ ನಗರದ ಎಸ್​ಬಿಐ ಕಾಲೋನಿ ನಿವಾಸಿಯಾದ ಇವ್ರು ಕಲಬುರಗಿ ಜನರಿಗೆ (Kalaburagi News) ಪಕ್ಕಾ ಅನ್ನಪೂರ್ಣೆಯೇ! ಅನ್ನಪೂರ್ಣ ಅವ್ರು ತಯಾರಿಸುವ ತಿನಿಸುಗಳಿಗೆ (Home Made Chakkli) ಭಾರೀ ಡಿಮ್ಯಾಂಡ್ ಇದೆ. ತಮ್ಮ ಮನೆಯಲ್ಲಿ ಅತ್ಯಂತ ಶುದ್ಧವಾಗಿ ತಮ್ಮ ಕೈಯ್ಯಾರೆ ತಾವೇ ತಯಾರಿಸುವ ಹೋಂ ಮೇಡ್ ಕುರುಕಲು ತಿಂಡಿಗಳಿಗೆ (Crunchy Snack In Kalaburagi)  ಕಲಬುರಗಿ ಜನರ ರಸಗ್ರಂಥಿಗಳು ಮಾರುಹೋಗಿವೆ!.


  ಅಂದಹಾಗೆ ಅನ್ನಪೂರ್ಣ ಅವ್ರ ಮನೇಲೇನೂ ಕೆಲಸ ಮಾಡ್ಲೇಬೇಕು ಅನ್ನೋ ಒತ್ತಡ ಇರ್ಲಿಲ್ವಂತೆ. ಪತಿ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡ್ತಾರೆ. ಚಿಕ್ಕ ಚೊಕ್ಕ ಕುಟುಂಬದ ನಿರ್ವಹಣೆ ಮಾಡ್ಕೊಂಡ್ರೆ ಸಾಕು ಅನ್ನೋ ವಾತಾವರಣ ಇತ್ತಂತೆ. ಆದ್ರೆ ಮನೇಲಿ ಕುಳಿತುಕೊಂಡು ಏನ್ ಮಾಡೋದು? ಹೀಗಂತ ಯೋಚಿಸಿ 13 ವರ್ಷಗಳ ಹಿಂದೆ ಶುರುಮಾಡಿದ್ದೇ ಈ ಚಕ್ಕುಲಿ ಬ್ಯುಸಿನೆಸ್. ಆವಾಗಿಂದ ಈ ಕುರುಕಲು ತಿಂಡಿಯಿಂದ ಹತ್ತಾರು ಮಹಿಳೆಯರ ಜೀವನಕ್ಕೂ ನೆರವಾಗಿದೆ.


  ಏನೇನೆಲ್ಲಾ ಸಿಗುತ್ತೆ ಇಲ್ನೋಡಿ
  ಅನ್ನಪೂರ್ಣ ಅವ್ರ ಬಳಿ ಸಿಗೋ ಕುರುಕಲು ತಿಂಡಿ ಲಿಸ್ಟ್ ನೋಡ್ತಾ ಹೋದ್ರೇನೇ ಬಾಯಲ್ಲಿ ನೀರೂರುತ್ತೆ! ಶುದ್ದ ಸ್ವಾದಿಷ್ಟಭರಿತ ಚಕ್ಕುಲಿ, ಬೆಣ್ಣೆ ಚಕ್ಕುಲಿ, ಅವಲಕ್ಕಿ ಚೂಡಾ, ನಿಪ್ಪಟ್ಟು, ಶಂಕರಪಾಳ, ಘಾಟಿ, ಸೇವ್, ಬೆಸನ್ ಉಂಡೆ, ಡ್ರೈ ಫ್ರುಟ್ಸ್ ತುಪ್ಪ ಬಳಸಿ ತಯಾರಿಸೋ ಅಂಟಿನ ಉಂಡೆ ಹೀಗೆ ಮೂವತ್ತಕ್ಕೂ ಅಧಿಕ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡ್ತಾರೆ.


  ಅನ್ನಪೂರ್ಣ ಅವರ ಸಂಪರ್ಕ ಸಂಖ್ಯೆ:  98457 62606


  ವಿದೇಶ ಪ್ರಯಾಣ ಮಾಡೋ ಚಕ್ಕುಲಿ!
  ಹಬ್ಬ ಹರಿದಿನಗಳು ಬಂದ್ರೆ ಸಾಕು ಕಲಬುರಗಿಯ ಮನೆಗಳಲ್ಲಿ ಈ ತಿಂಡಿಗಳದ್ದೇ ದರ್ಬಾರ್. ರಾಜಧಾನಿ ಬೆಂಗಳೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಇವರ ಚಕ್ಕುಲಿ ಸೇಲ್ ಆಗುತ್ತವೆ. ಅಷ್ಟೆ ಏಕೆ? ವಿದೇಶ ವಿಮಾನಗಳ ಪ್ರಯಾಣವನ್ನೂ ಮಾಡುತ್ತೆ ಅನ್ನಪೂರ್ಣ ಅವ್ರು ತಯಾರಿಸೋ ಕುರುಕಲು ತಿಂಡಿ. ಮನೆಯಲ್ಲೇ ಕುಳಿತು ಏನ್ ಮಾಡೋದು ಅಂತ ಯೋಚಿಸೋರಿಗೆ ಇವರಿಗಿಂಥಾ ಒಳ್ಳೆ ಮಾದರಿ ಬೇಕಿಲ್ಲ ಅಲ್ವಾ?


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: