ಕಲಬುರಗಿ: ಜಮೀನಿನ ತುಂಬಾ ಗುಲಾಬಿ ಹೂಗಳ ರಂಗು. ಹೀಗೆ ಬೆಳೆದ ಗುಲಾಬಿಯನ್ನ ಇವ್ರು ಯಾವತ್ತು ನೇರ ಮಾರುಕಟ್ಟೆಗೆ ಕೊಟ್ಟವರಲ್ಲ. ಮತ್ತೇನ್ಮಾಡ್ತಾರೆ ಅಂತೀರ? ನಿಜ, ಈ ಗುಲಾಬಿನ ಹೀಗೆ ಬೇಯಿಸಿ ತಯಾರಿಸೋ ಈ ಐಟಂ ಆದ್ರೂ ಏನು ಅಂತೀರ? ಹಾಗಿದ್ರೆ ಈ ಸ್ಟೋರಿ ನೋಡಿ ಆ ರೋಸ್ ಸ್ಪೆಷಲ್ ಏನೂಂತ ನೀವೇ ತಿಳ್ಕೊಳ್ಳಿ.
ರೋಸ್ ವಾಟರ್, ಗುಲ್ಕನ್!
ಯೆಸ್, ರೋಸ್ ವಾಟರ್, ರೋಸ್ ಗುಲ್ಕನ್ ಈ ಪಿಂಕ್ ರೋಸ್ಗಳ ಬೈ ಪ್ರಾಡಕ್ಟ್. ಅದಕ್ಕೆ ಬೇಕಾದ ತಳಿಯ ಗುಲಾಬಿಯನ್ನೇ ಕಲಬುರಗಿಯ ಸೇಡಂ ತಾಲೂಕಿನ ಸಟ್ಪಟಳ್ಳಿಯ ರಮೇಶ್ ತಾಪಾಡಿಯಾ ಬೆಳೆಸಿಕೊಂಡು ಬಂದಿದ್ದಾರೆ. ಹಾಗೆ ಅರಳಿದ ಗುಲಾಬಿಯನ್ನ ಇವರು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದವರೇ ಅಲ್ಲ. ಬದಲಿಗೆ, ಮಹಿಳೆಯರ ಸಹಾಯದಿಂದ ರೋಸ್ ವಾಟರ್, ಗುಲ್ಕನ್ ತಯಾರಿಸಿ ಮಾರುಕಟ್ಟೆಗೆ ಮಾರಾಟ ಮಾಡ್ತಾರೆ.
ಭಾರೀ ಬೇಡಿಕೆ
ಹೀಗೆ ರಮೇಶ್ ತಾಪಡಿಯಾ ಅವರ ಮನೆಯಲ್ಲಿ ತಯಾರಾಗೋ ಈ ಗುಲ್ಕನ್, ರೋಸ್ ವಾಟರ್ ಗೆ ಭಾರೀ ಬೇಡಿಕೆಯೂ ಇದೆ. ಕರ್ನಾಟಕವೊಂದೇ ಅಲ್ಲದೇ, ಹೊರ ರಾಜ್ಯದಿಂದಲೂ ಸಖತ್ ಡಿಮ್ಯಾಂಡ್ ಇದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲೂ ರಮೇಶ್ ತಾಪಡಿಯಾ ಅವರ ಗುಲ್ಕನ್, ರೋಸ್ ವಾಟರ್ ಭಾರೀ ಹೆಸರು ಪಡೆದಿದೆ.
ಪಿಂಕ್ ಗುಲಾಬಿ
ರಮೇಶ್ ತಾಪಡಿಯಾ ತಮ್ಮ ಹತ್ತಾರು ಎಕರೆ ಜಮೀನಿನಲ್ಲಿ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಹೂವಿನ ಕೃಷಿ ಮಾಡಿದ್ದಾರೆ. ಉದ್ಯಮಿ ಆದ್ರೂ ಕೃಷಿ ಬಗ್ಗೆ ತುಂಬಾ ಆಸಕ್ತಿ ಹೊಂದಿರೋ ರಮೇಶ ತಾಪಡಿಯಾ ಅವರು ರಾಜಸ್ಥಾನದ ಪುಷ್ಕರ್ ಎಂಬ ಹಳ್ಳಿಯಿಂದ ಪಿಂಕ್ ಗುಲಾಬಿ ಹೂವಿನ ಸಸಿ ತಂದು ನೆಟ್ಟಿದ್ದಾರೆ. ಸಾವಿರಾರು ಗುಲಾಬಿ ಹೂವುಗಳು ಅವರ ತೋಟದಲ್ಲಿದ್ದು ಈಗ ಆ ಪಿಂಕ್ ಗುಲಾಬಿ ಹೂವಿನಿಂದಲೇ ಮನೆಯಲ್ಲಿಯೇ ಗುಲ್ಕನ್ ಮತ್ತು ರೋಸ್ ವಾಟರ್ ತಯಾರಿ ಮಾಡ್ತಿದ್ದಾರೆ.
ಇದನ್ನೂ ಓದಿ: Kalaburagi: ಈ ಶಾಲೆಯಲ್ಲಿ ಪ್ರತಿನಿತ್ಯ ಎರಡು ಗಂಟೆಯಷ್ಟೇ ಪಾಠ!
ಆರ್ಗ್ಯಾನಿಕ್ ತಯಾರಿ
ಗುಲ್ಕನ್ ಮತ್ತು ರೋಸ್ ವಾಟರ್ ಮನುಷ್ಯನ ದೇಹದ ಉಷ್ಣಾಂಶ ಕಮ್ಮಿ ಮಾಡುವ ಶಕ್ತಿ ಹೊಂದಿದೆ. ಹೀಗಾಗಿ, ಅವರ ಮನೆಯಲ್ಲಿಯೇ ಗುಲಾಬಿ ಹೂವಿನ ಗುಲ್ಕನ್ ಮತ್ತು ರೋಜ್ ವಾಟರ್ ತಯಾರಿಸುತ್ತಿದ್ದಾರೆ. ಜೊತೆಗೆ ಕಡಿಮೆ ರೇಟ್ನಲ್ಲಿ ಜನರಿಗೆ ಕೊಡ್ತಿದ್ದಾರೆ. ಇನ್ನೊಂದು ವಿಶೇಷವೆಂದ್ರೆ, ಯಾವುದೇ ಕೆಮಿಕಲ್ ಬಳಸದೇ ಕೇವಲ ಆರ್ಗ್ಯಾನಿಕ್ ಆಗಿ ಈ ಪ್ರಾಡಕ್ಟ್ ಅನ್ನು ಅವರು ತಯಾರಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: Qawwali Family: ಮನೆಯವರೆಲ್ರೂ ಕಲಾವಿದರು, ಕವಾಲಿ ಲೋಕದಲ್ಲಿ ತೇಲಾಡಿಸುವ ಕುಟುಂಬವಿದು!
ಇತರೆ ಬೆಳೆ
ಇನ್ನು ರಮೇಶ್ ಅವ್ರು ಕೇವಲ ಹೂವಲ್ಲದೇ ತೋಟದಲ್ಲಿ ಮಾವು, ತೆಂಗು ಹಾಗೂ ಇತರೆ ಹಣ್ಣುಗಳನ್ನು ಬೆಳೆದಿದ್ದಾರೆ. ಆದರೂ ಬಿಸಿಲ ನಗರಿಯ ಜನರ ಆರೋಗ್ಯ ವೃದ್ಧಿಸುವ ಸಲುವಾಗಿ ಈ ಪಿಂಕ್ ಗುಲಾಬಿಯ ಪ್ರಾಡಕ್ಡ್ಗಳನ್ನ ತಯಾರಿಸುತ್ತಿದ್ದಾರೆ. ಈ ಬೇಸಿಗೆ ಬಿರುಬಿಸಿಲಿಗೆ ನಿಮಗೂ ರೋಸ್ ವಾಟರ್, ಗುಲ್ಕನ್ ಬೇಕಿದ್ರೆ ರಮೇಶ್ ತಾಪಡಿಯಾ ಅವರನ್ನ ಸಂಪರ್ಕಿಸಬಹುದು ನೋಡಿ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ