• Home
 • »
 • News
 • »
 • kalburgi
 • »
 • Kalaburagi: ಕಲಬುರಗಿಯ ಕಪಿಲ್ ದೇವ್! ಇವ್ರಿಗೆ ನೀವು ಭೇಷ್ ಅನ್ಲೇಬೇಕು!

Kalaburagi: ಕಲಬುರಗಿಯ ಕಪಿಲ್ ದೇವ್! ಇವ್ರಿಗೆ ನೀವು ಭೇಷ್ ಅನ್ಲೇಬೇಕು!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಶೇಷಚೇತನ ಆದ್ರೂ, ಅದೆಲ್ಲವನ್ನೂ ತನ್ನ ಪಾಲಿನ ನೆಗೆಟಿವ್ ಎನಿಸಿಕೊಳ್ಳದೇ, ಪಾಸಿಟಿವ್ ಆಗಿ ಮುನ್ನುಗ್ಗುತ್ತಾ ಸಾಗಿರುವ ಕಪಿಲ್ ದೇವ್ ಚಕ್ರವರ್ತಿ ಛಲ, ಪರಿಶ್ರಮಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು.

 • Share this:

  ಕಲಬುರಗಿ: ಇಷ್ಟೊಂದು ಅದ್ಭುತವಾಗಿ ನಟಿಸುತ್ತಿರೋ ಈ ಕಲಾವಿದ ಹುಟ್ಟುತ್ತಲೇ ವಿಶೇಷಚೇತನ. ಅದ್ರಲ್ಲೂ ಎರಡು ಕಾಲುಗಳೇ ಸ್ವಾಧೀನ ಕಳೆದುಕೊಂಡವರಿವರು. ಆದ್ರೆ ಕಲಾಮಾತೆಗೆ ಬೇಧ ಭಾವ ಇಲ್ವಲ್ಲ? ಅದ್ಕೆ ನೋಡಿ, ವಿಶೇಷಚೇತನ (Differenty Abled Artist) ಇರೋದು ದೇಹಕ್ಕೆ ಹೊರತು ಕಲೆಗಲ್ಲ ಅನ್ನೋದನ್ನ ಈ ಕಲಾವಿದನ ಮೂಲಕ ತೋರಿಸಿಕೊಟ್ಟಿದ್ದಾರೆ. ಯಾವುದೇ ಡೈಲಾಗ್ ಇರ್ಲಿ, ಯಾವುದೇ ಪಾತ್ರ ಇರ್ಲಿ ತನ್ನಲ್ಲಿನ ದೈಹಿಕ ನ್ಯೂನ್ಯತೆಯನ್ನು ಮೀರಿ ನಟಿಸಬಲ್ಲ ಇವ್ರು ಕಲಬುರಗಿ ಜಿಲ್ಲೆಯ (Kalaburagi Artist) ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಕಪಿಲ್ ದೇವ್ ಚಕ್ರವರ್ತಿ.


  ಹೆಸರಿಗೆ ತಕ್ಕಂತೆ ಇವ್ರು ನಾಟಕ ಕ್ಷೇತ್ರದಲ್ಲೂ ಚಕ್ರವರ್ತಿನೇ ಬಿಡಿ. ಪಿಹೆಚ್​ಡಿ ವಿದ್ಯಾರ್ಥಿಯೂ ಆಗಿರುವ ಕಪಿಲ್ ದೇವ್ ಪಕ್ಕಾ ಕಲಾ ಮಾತೆಯ ಆರಾಧಕ. ಹಾಗಾಗಿಯೇ ನೋಡಿ, ಹಲವು ಬಾರಿ ಪ್ರಯತ್ನಪಟ್ಟು ಅವಕಾಶ ಸಿಗದೇ ಹೋದಾಗಲೂ ನಿರಾಶರಾಗಲಿಲ್ಲ. ಕೊನೆಗೂ ಸಿಕ್ಕ ಅವಕಾಶವನ್ನ ಎಲ್ಲರೂ ಹುಬ್ಬೇರುವಂತೆ ನಟಿಸುವ ಮೂಲಕ ಸುದ್ದಿಯಾದ್ರು.


  ಇವ್ರ ಪಾತ್ರಕ್ಕೆ ಎಲ್ರೂ ದಂಗಾಗ್ತಾರೆ!
  ಈಗಾಗಲೇ ಕಪಿಲ್ ಚಂದ್ರಶೇಖರ ಕಂಬಾರ ಅವರ ಹರಕೆಯ ಕುರಿ, ಸಂತ ಶಿಶುನಾಳ ಶರೀಫರ ನಾಟಕ ಸೇರಿದಂತೆ ಹತ್ತಾರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಿರಿಯ ಕಲಾವಿದರ ಮಾರ್ಗದರ್ಶನ ಪಡೆದು ರಂಗ ವೇದಿಕೆಯಲ್ಲಿ ಎಲ್ರೂ ಹುಬ್ಬೇರಿಸುವಂತೆ ಪಾತ್ರ ಜೀವಕ್ಕೆ ತುಂಬುತ್ತಾರೆ.


  ಇದನ್ನೂ ಓದಿ: Nose Flute: ಮೂಗಿನಿಂದ ಕೊಳಲು ನುಡಿಸೋ ಕಲಬುರಗಿ ಕಲಾವಿದ!


  ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆಯ ಹೆಜ್ಜೆ
  ಕಪಿಲ್ ದೇವ್, ನಾಟಕವಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ನಾವು ತೊಡಗಿಸಿಕೊಂಡಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲದಲ್ಲಿ ತಮ್ಮೂರ ಸೂಫಿ ಸಂತರ ಕುರಿತು ಸಂಶೋಧನೆ ಮಾಡ್ತಿದ್ದಾರೆ. ಚಿತ್ರಕಲೆಯಲ್ಲೂ ಅಷ್ಟೇ ಆಸಕ್ತಿ ಹೊಂದಿದ್ದಾರೆ.


  ಕಪಿಲ್ ದೇವ್ ಅವರ ಸಂಪರ್ಕ ಸಂಖ್ಯೆ: 9590122566


  ಇದನ್ನೂ ಓದಿ: Kalaburagi Blood Donor: ಎಮರ್ಜೆನ್ಸಿ ರಕ್ತ ಬೇಕಿದ್ರೆ ಇವ್ರಿಗೆ ಫೋನ್ ಮಾಡಿ ಸಾಕು!


  ಹೀಗೆ ಹುಟ್ಟುತ್ತಾ ವಿಶೇಷಚೇತನ ಆದ್ರೂ, ಅದೆಲ್ಲವನ್ನೂ ತನ್ನ ಪಾಲಿನ ನೆಗೆಟಿವ್ ಎನಿಸಿಕೊಳ್ಳದೇ, ಪಾಸಿಟಿವ್ ಆಗಿ ಮುನ್ನುಗ್ಗುತ್ತಾ ಸಾಗಿರುವ ಕಪಿಲ್ ದೇವ್ ಚಕ್ರವರ್ತಿ ಛಲ, ಪರಿಶ್ರಮಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: