ಕಲಬುರಗಿ: ಗುಲಾಬಿ ಹೂಗಳಿಂದ ಕಂಗೊಳಿಸುತ್ತಿರುವ ಜಮೀನು, ಹೊಲದಲ್ಲಿ ಹೂ ಬಿಡಿಸುತ್ತಿರುವ ರೈತ. ನೋಡೋಕೆ ಜಸ್ಟ್ ಪುಷ್ಪಕೃಷಿ (Rose Farming) ಅಂತ ಅನಿಸಬಹುದು. ಆದ್ರೆ ಇದು ಕೂಲಿ ಕಾರ್ಮಿಕನೊಬ್ಬನ (Success Story) ಯಶೋಗಾಥೆ! ಹೌದು. ಇದೇ ನೋಡಿ ಈ ಸ್ಟೋರಿಯ ಇಂಟರೆಸ್ಟಿಂಗ್ ವಿಷ್ಯ. ಹೌದು, ಇವರು ಉಗ್ರಾಣವೊಂದ್ರಲ್ಲಿ ಕೂಲಿ ಮಾಡಿ ಬದುಕು ನಡೆಸುತ್ತಿದ್ದವರು. ಹಮಾಲಿ ಕೆಲಸ ಮಾಡಿ ಹಣ ಉಳಿಸಿ ಆ ಹಣದಲ್ಲೇ ಜಮೀನು ಖರೀದಿಸಿ ಆರಂಭಿಸಿದ್ದೇ ಈ ಪುಷ್ಪ ಕೃಷಿ. ಕಲಬುರಗಿ ಜಿಲ್ಲೆಯ (Kalaburagi News) ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ನಿವಾಸಿ ಬಸವರಾಜ್ ಮಾಲಿಬಿರಾದಾರ ಅವರೇ ಈ ಸ್ಟೋರಿ ಹೀರೋ!
ಬಸವರಾಜ್ ಅವ್ರು ತಮ್ಮ ಜಮೀನಿನಲ್ಲಿ ಕೆಂಪು ಗುಲಾಬಿ, ಚೆಂಡು ಹೂ, ಸುಗಂಧರಾಜದಂತಹ ಹಲವು ಹೂಗಳನ್ನು ನೆಟ್ಟು ಉತ್ತಮ ಫಸಲು ತೆಗೆಯುತ್ತಿದ್ದಾರೆ.
ತಿಂಗಳಿಗೆ 70ರಿಂದ 80 ಸಾವಿರ ಆದಾಯ
ಪುಷ್ಪಕೃಷಿ ಅವರ ಬದುಕಿಗೆ ದಾರಿ ತೋರಿದೆ. ಸದ್ಯ ಬಸವರಾಜ್ ಮಾಲಿಬಿರಾದಾರ ಅವರು ನಡೆಸುತ್ತಿರುವ ಪುಷ್ಪ ಕೃಷಿಯಿಂದಾಗಿ ತಿಂಗಳಿಗೆ ಏನಿಲ್ಲ ಅಂದ್ರೂ 70ರಿಂದ 80 ಸಾವಿರ ಸಾವಿರದವರೆಗೆ ಆದಾಯ ಗಳಿಸ್ತಿದ್ದಾರೆ.
ಇದನ್ನೂ ಓದಿ: Ganagapura: ಭಕ್ತರ ಕಾಯುವ ಗಾಣಗಾಪುರ ದತ್ತ ಪಾದುಕೆ, ವರ್ಷದಲ್ಲಿ 2 ಬಾರಿ ರಥೋತ್ಸವ ನಡೆಯುವ ಸನ್ನಿಧಿ
ಎಂಟರಿಂದ ಹತ್ತು ಜನರಿಗೆ ಉದ್ಯೋಗ!
ಜಮೀನು ಖರೀದಿಸಿದ್ದ ಆರಂಭದಲ್ಲಿ ಯಾವ ಬೆಳೆ ಬೆಳೆಯಬೇಕೆಂಬ ಗೊಂದಲ ಬಸವರಾಜ್ ಅವರಲ್ಲೂ ಇತ್ತು. ಬೆಂಗಳೂರಿಗೆ ಹೋಗಿ ಗುಲಾಬಿ ಹೂವಿನ ವಿವಿಧ ತಳಿಯ ಸಸಿಗಳನ್ನು ತಂದು ನಾಟಿ ಮಾಡಿದರು. ಹೀಗೆ ಆರಂಭವಾದ ಬಸವರಾಜ್ ಅವರ ಪುಷ್ಪ ಕೃಷಿ ಜರ್ನಿ ಇಂದು ಎಂಟತ್ತು ಜನರಿಗೆ ಉದ್ಯೋಗ ನೀಡುವ ಮಟ್ಟಿಗೆ ಬೆಳೆದು ನಿಂತಿದೆ.
ಇದನ್ನೂ ಓದಿ: Kalaburagi: ಡ್ರೋನ್ಗಳನ್ನು ಕಂಡರೆ ಈಗ ರೌಡಿಗಳಿಗೆ ಗಢಗಢ!
ನೋಡಿದ್ರಲ್ಲ, ತಮ್ಮ ಕೈಯಿಂದ ಏನೂ ಸಾಧ್ಯವಿಲ್ಲ ಅನ್ನೋದಾಗಿ ಸುಮ್ಮನೆ ಕೂತಿದ್ದರೆ ಹಮಾಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಬದುಕು ಬದಲಾಗುತ್ತಲೇ ಇರಲಿಲ್ಲ. ಒಂದು ಕಾಲದ ಕೂಲಿ ಇಂದು ಓನರ್ ಆಗಿ ಬದಲಾಗಿದ್ದು ನಿಜಕ್ಕೂ ಗ್ರೇಟ್ ಎನ್ನಲೇಬೇಕು.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ