ಕಲಬುರಗಿ: ನೀಟಾಗಿ ಜೋಡಿಸಿಟ್ಟ ಬೆಲ್ಲದ ಅಚ್ಚು. ಅಲ್ಲೇ ಕಬ್ಬಿನಿಂದ ತಯಾರಾಗುತ್ತೆ ಈ ಸಿಹಿಪಾಕ. ಸಾವಯವ ಬೆಲ್ಲದ (Organic Jaggary) ಮೂಲಕ ಗಳಿಸುತ್ತಿದ್ದಾರೆ ಲಾಭದಾಯಕ ಆದಾಯ. ಇಬ್ಬರು ಸಹೋದರರ ಕೈ ಹಿಡಿಯಿತು (Success Story) ಈ ಬೆಲ್ಲದ ಸಿಹಿ.
ಹೌದು, ಹೊಲದಲ್ಲಿ ಗಾಣವನ್ನು ನಿರ್ಮಿಸಿ ಸಾವಯವ ಬೆಲ್ಲವನ್ನು ತಯಾರಿಸುತ್ತಿರುವ ಇವರ ಹೆಸರು ಬಸವರಾಜ್ ಉಪ್ಪಿನ್ ಹಾಗೂ ರೇವಪ್ಪ ಉಪ್ಪಿನ್ ಅಂತ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದ ನಿವಾಸಿಗಳು. ಈ ಸಹೋದರಿಬ್ಬರು ತಮ್ಮ 14 ಎಕರೆ ಭೂಮಿಯಲ್ಲಿ ಸಾವಯವ ಮಾದರಿಯಲ್ಲಿ ಕಬ್ಬನ್ನು ಬೆಳೆದು ಬರೋಬ್ಬರಿ 20ಲಕ್ಷಕ್ಕೂ ಅಧಿಕ ಆದಾಯವನ್ನು ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಭರ್ಜರಿ ಮಾರಾಟ!
ಸಾವಯವ ಬೆಲ್ಲ ತಯಾರಿಸಿ ಇತರರಿಗೆ ಮಾದರಿಯಾದ ಉಪ್ಪಿನ್ ಸಹೋದರರು ಯಾವುದೇ ಕೆಮಿಕಲ್ ಮಿಶ್ರಣ ಮಾಡದೆ 1 ಎಕ್ಕರೆ ಕಬ್ಬಿಗೆ 8 ರಿಂದ 10 ಲೀಟರ್ ಜೀವಾಮೃತ ನೀಡುತ್ತಾರೆ. ಜೊತೆಗೆ ತಿಪ್ಪೆಗೊಬ್ಬರ, ಆಕಳ ಗೋ ಮೂತ್ರ ಬಿಟ್ಟರೆ ಬೇರೇನೂ ಬಳಸದೆ ಕಬ್ಬನ್ನು ಬೆಳೆಯುತ್ತಾರೆ.
ಇದನ್ನೂ ಓದಿ: Kalaburagi News: ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!
ತಮ್ಮ ಜಮೀನಿನಲ್ಲಿ ಕಬ್ಬಿನ ಗಾಣವನ್ನು ನಿರ್ಮಿಸಿ ಅಲ್ಲೇ ಬೆಲ್ಲವನ್ನು ತಯಾರಿಸುತ್ತಾರೆ. 1 ಕೆಜಿ, 5 ಕೆಜಿ ಹಾಗೂ 10 ಕೆಜಿ ಬೆಲ್ಲದ ಅಚ್ಚುಗಳನ್ನು ತಯಾರಿಸಿ ಪ್ರತಿ ಕೆಜಿಗೆ 60 ರೂಪಾಯಿಯಂತೆ ಮಾರಾಟ ಮಾಡುವ ಮೂಲಕ ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ.
ವಾಟ್ಸ್ಆ್ಯಪ್ ಗ್ರೂಪ್ ಬಳಕೆ
ಜಮೀನಲ್ಲಿ ತಯಾರಿಸಲಾದ ಬೆಲ್ಲವನ್ನು ಗ್ರಾಹಕರು ಬಹುತೇಕ ಜಮೀನಿಗೆ ಹೋಗಿ ಖರೀದಿಸುತ್ತಾರೆ. ಅಲ್ಲದೇ, ಬೆಲ್ಲ ಮಾರಾಟಕ್ಕಾಗಿಯೇ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಬೀದರ್, ಬಾಗಲಕೋಟೆ ಹೀಗೆ ರಾಜ್ಯದ ನಾನಾ ಕಡೆಗಳಿಗೆ ಬೆಲ್ಲವನ್ನು ಸರಬರಾಜು ಮಾಡ್ತಾರೆ.
ಇದನ್ನೂ ಓದಿ: Free Hostel: ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ, ಈಗಲೇ ಹೀಗೆ ಅರ್ಜಿ ಸಲ್ಲಿಸಿ
ಅಷ್ಟೇ ಅಲ್ಲದೆ ಪೌಡರ್ ತಯಾರಿಸಿ ಮಾರಾಟ ಮಾಡ್ತಾರೆ. ವಿಶೇಷವೆಂದರೆ ಸಾಮಾನ್ಯವಾಗಿ ಸಾವಯವ ಮಾದರಿಯಲ್ಲಿ ತಯಾರಿಸುವ ಬೆಲ್ಲದ ಬಣ್ಣ ಕಪ್ಪು ಬಣ್ಣದಲ್ಲಿದ್ದರೆ, ಇಲ್ಲಿ ತಯಾರಾಗುವ ಬೆಲ್ಲ ಕೆಂಪಾಗಿರುತ್ತದೆ.
ಉತ್ತಮ ಲಾಭ
ಒಂದು ಎಕರೆಗೆ 30 ಕ್ವಿಂಟಲ್ ಬೆಲ್ಲವನ್ನು ತಯಾರಿಸುತ್ತಾ, ಒಟ್ಟು 14 ಎಕರೆಗೆ 20 ಲಕ್ಷಕ್ಕೂ ಅಧಿಕ ಆದಾಯವನ್ನು ಉಪ್ಪಿನ ಸಹೋದರರು ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಉಪ್ಪಿನ ಸಹೋದರರು ಸಾವಯವ ಪದ್ಧತಿ ಮೂಲಕ ಮಾಡುವ ಬೆಲ್ಲ ತಯಾರಿಸುತ್ತಾ, ಕೈತುಂಬ ಸಂಪಾದನೆ ಮಾಡುವುದರೊಂದಿಗೆ ಇತರ ರೈತರಿಗೂ ಮಾದರಿಯಾಗಿದ್ದಾರೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ