ಕಲಬುರಗಿ: ವಿವಿಧ ಸ್ಥಬ್ಧಚಿತ್ರಗಳು, ಭಿತ್ತಿಚಿತ್ರಗಳನ್ನ ಹೊತ್ತೊಯ್ತಿರೋ ವಿದ್ಯಾರ್ಥಿಗಳು (Students Celebration), ಸುಂದರ ಪೋಷಾಕು, ಚಂದದ ಸಾಂಪ್ರದಾಯಿಕ ಬಟ್ಟೆಗಳನ್ನ (Traditional Dress) ಧರಿಸಿರೋ ಮಕ್ಕಳು. ಅರೇ! ಹೆದ್ದಾರಿಯಲ್ಲಿ ಇವರೆಲ್ಲ ಎಲ್ಲಿಗೆ ಹೋಗ್ತಿದ್ದಾರೆ ಅಂದ್ಕೊಂಡ್ರಾ? ನಾವ್ ಹೇಳ್ತೀವಿ ಕೇಳಿ.
ಕಲಬುರಗಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 2022-23ನೇ ಶೈಕ್ಷಣಿಕ ಸಾಲಿನ 3ನೇ ಅಂತರ್ ವಿಶ್ವವಿದ್ಯಾಲಯದ ದಕ್ಷಿಣ-ಪೂರ್ವ ವಲಯ ಯುವಜನೋತ್ಸವದ ಝಲಕ್ ಇದು. ಹಲವು ವರ್ಷಗಳ ಬಳಿಕ ದಕ್ಷಿಣ-ಪೂರ್ವ ವಲಯ ಯುವಜನೋತ್ಸವ, ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳ ಸಂಭ್ರಮ ಹೆಚ್ಚಿಸಿತ್ತು.
ಇದನ್ನೂ ಓದಿ: Kalaburagi: ಮನೆಯೊಂದು 101 ಬಾಗಿಲು! ಕಲಬುರಗಿಯಲ್ಲೊಂದು ವಿಶಿಷ್ಟ ಮನೆ
ರಾಜ್ಯದ ನಾನಾ ವಿಶ್ವವಿದ್ಯಾಲಯಗಳು ಸೇರಿದಂತೆ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಯುವಜನೋತ್ಸವದಲ್ಲಿ ಭಾಗವಹಿಸಿದರು.
ಇದನ್ನೂ ಓದಿ: Kalburgi: ಸಂಭ್ರಮದ ಕೋರಿಸಿದ್ದೇಶ್ವರ ಜಾತ್ರೆ - ತಲೆ ಮೇಲೆ ಬೆಂಕಿ ಹೊತ್ತು ನಡೆದ ಭಕ್ತರು!
ಈ ಎಲ್ಲಾ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಆಗಮನ
ಯುವಜನೋತ್ಸವದಲ್ಲಿ ದಕ್ಷಿಣ ಪೂರ್ವ ವಲಯದ ತೆಲಂಗಾಣ ಹಾಗೂ ಛತ್ತೀಸ್ಗಢ ರಾಜ್ಯಗಳ ವಿಶ್ವವಿದ್ಯಾಲಯಗಳು, ಗುಲಬರ್ಗಾ ವಿವಿ, ಶರಣಬಸವ ವಿವಿ, ಖಾಜಾ ಬಂದೇ ನವಾಜ್ ವಿವಿ, ಬೆಂಗಳೂರು ವಿವಿ, ಮೈಸೂರು ವಿವಿ, ಮಂಗಳೂರು ವಿವಿ, ದಾವಣಗೆರೆ ವಿವಿ, ಶಿವಮೊಗ್ಗ ವಿವಿ, ಅಕ್ಕಮಹಾದೇವಿ ವಿವಿ, ಕೃಷಿ ವಿವಿ, ಛತ್ತಿಸಗಢ ವಿವಿ, ಸತ್ಯಸಾಯಿ ವಿವಿ ಸೇರಿ ಒಟ್ಟು 23 ವಿಶ್ವವಿದ್ಯಾಲಯಗಳ ಸುಮಾರು 1200 ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ, ಶಿಳ್ಳೆ, ಕೇಕೆ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ