• Home
  • »
  • News
  • »
  • kalburgi
  • »
  • Positive Story: ಶಾಲೆ ಆಡಳಿತ ಮಕ್ಕಳ ಕೈಗೆ, ಪಾಠ ಮಾಡೋದೂ ವಿದ್ಯಾರ್ಥಿಗಳೇ!

Positive Story: ಶಾಲೆ ಆಡಳಿತ ಮಕ್ಕಳ ಕೈಗೆ, ಪಾಠ ಮಾಡೋದೂ ವಿದ್ಯಾರ್ಥಿಗಳೇ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಶಿಕ್ಷಕರು ಒಂದು ದಿನ ಶಾಲೆಯ ಆಡಳಿತ ಜವಾಬ್ದಾರಿ ಹಾಗೂ ಮಕ್ಕಳಿಗೆ ವಹಿಸಿ ಮಕ್ಕಳಂತೆ ಬೆಂಚ್ ಮೇಲೆ ಕುಳಿತು ಪಾಠ ಆಲಿಸಿದರು.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕೋಟು ಹಾಕೊಂಡ ಪುಟ್ಟ ಪುಟ್ಟ ಮೇಷ್ಟ್ರು, ಸೀರೆ ಧರಿಸಿದ ಪುಟಾಣಿ ಮೇಡಮ್ಮು. ನೋಡಿ ಮಕ್ಕಳಂತೆ ಬೆಂಚ್ ಮೇಲೆ ಕುಳಿತು ಪಾಠ ಆಲಿಸುತ್ತಿರೋ ಟೀಚರ್ಸ್! ಇಲ್ಲಿ ಎಲ್ಲವೂ ಅದಲು ಬದಲು. ಶಿಕ್ಷಕರು ಮಕ್ಕಳಾದ್ರೆ, ಮಕ್ಕಳು ಶಿಕ್ಷಕರಾಗಿದ್ರು. ಕಲಬುರಗಿಯ (Kalaburagi News) ಚಿತ್ತಾಪುರದ ರಾವೂರ್ ಗ್ರಾಮದ ಸಚ್ಚಿದಾನಂದ ಪ್ರೌಢಶಾಲೆಯ ಆಡಳಿತ ಮಂಡಳಿಯು ಮಕ್ಕಳಲ್ಲಿ ಬೋಧನಾ ಸಾಮರ್ಥ್ಯ (Teaching Skill) ಬೆಳೆಸುವ ನಿಟ್ಟಿನಲ್ಲಿ ಈ ರೀತಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು.


    ಶಿಕ್ಷಕರು ಒಂದು ದಿನ ಶಾಲೆಯ ಆಡಳಿತ ಜವಾಬ್ದಾರಿ ಹಾಗೂ ಮಕ್ಕಳಿಗೆ ವಹಿಸಿ ಮಕ್ಕಳಂತೆ ಬೆಂಚ್ ಮೇಲೆ ಕುಳಿತು ಪಾಠ ಆಲಿಸಿದರು.


    ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


    ಟೀಚರ್​ಗಳನ್ನೂ ಮೀರಿ ಪಾಠ
    ಕೋಟು, ಸೀರೆ ಧರಿಸಿ ಬಂದಿದ್ದ ಮಕ್ಕಳಂತೂ ತಮ್ಮ ಟೀಚರ್ಸ್​ಗಳನ್ನೂ ಮೀರಿ ಪಾಠ ಬೋಧನೆ ಮಾಡಿದರು. ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ ಸೇರಿ ಎಲ್ಲಾ ವಿಷಯಗಳನ್ನು ಮನಮುಟ್ಟುವಂತೆ ಕಲಿಸಿದರು.


    ಇದನ್ನೂ ಓದಿ: Uttara Kannada: 22 ಸಾವಿರ ಕಿಮೀ ದೂರದಿಂದ ಉತ್ತರ ಕನ್ನಡಕ್ಕೆ ಹಾರಿಬಂದ ಅತಿಥಿಗಳು!


    ಮಕ್ಕಳೂ ಖುಷಿಗೆ ಪಾರವೇ ಇಲ್ಲ!
    ಇನ್ನು ಮಕ್ಕಳ ಬೋಧನಾ ಕಲೆಯನ್ನು ಕಂಡು ಸ್ವತಃ ಶಿಕ್ಷಕರೇ ಬೆರಗಾದರು. ಆ ಮಟ್ಟಿಗೆ ವಿದ್ಯಾರ್ಥಿಗಳು ತಮಗೆ ನೀಡಿದ ವಿಷಯವನ್ನು ಅಚ್ಚುಕಟ್ಟಾಗಿ ಬೋಧಿಸಿದರು. ಇತರ ಮಕ್ಕಳು ಕೂಡಾ ತಮ್ಮ ಸಹಪಾಠಿಗಳು ಪಾಠ ಮಾಡಬೇಕಾದರೆ ಶಿಸ್ತಿನಿಂದ ಆಲಿಸಿದರು. ಒಂದು ದಿನದ ಟೀಚರ್ ಆಗಿದ್ದಕ್ಕೆ ಮಕ್ಕಳೂ ಖುಷಿಪಟ್ಟರು .


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: