ತರಕಾರಿ ಬೇಕೇನ್ರೀ ತರಕಾರಿ, ಹಣ್ಣು ಬೇಕೇನ್ರೀ ಹಣ್ಣು. ಸೊಪ್ಪು ನೋಡಿ ಹತ್ತೇ ರೂಪಾಯಿ! ಹೀಗೆ ಥೇಟ್ ವ್ಯಾಪಾರಸ್ಥರಂತೆ ಕೂಗುತ್ತಿರೋ ಇವ್ರೆಲ್ಲ ಶಾಲಾ ಮಕ್ಕಳು. ಶಾಲಾ ಅಂಗಳವೇ ಇವ್ರ ತರಕಾರಿ ಮಾರ್ಕೆಟ್ಟು. ಪೆನ್ನು, ಪುಸ್ತಕ ಹಿಡಿಯೋ ಕೈಯ್ಯಲ್ಲಿ ಹಣ್ಣು, ತರಕಾರಿ.ಇವ್ರ ವ್ಯಾಪಾರದ ಜೋಶ್ ಹೇಗಿದೆ ಅಂದ್ರೆ ಒಂದೊಮ್ಮೆ ತರಕಾರಿ ಮಾರ್ಕೆಟ್ಗೆ ಹೋದ್ರೆ ನಿತ್ಯ ವ್ಯಾಪಾರ ಮಾಡೋರೇ ಸುಸ್ತಾಗೋದು ಗ್ಯಾರಂಟಿ. ಗ್ರಾಹಕರ ಕರೆಯುತ್ತಾ ತರಕಾರಿ ಮಾರುತ್ತಿರೋ ಇವ್ರೆಲ್ಲ ಕಲಬುರಗಿ ಜಿಲ್ಲೆಯ (Kalaburagi News) ಚಿತ್ತಾಪುರ ತಾಲೂಕಿನ (Chittapur Taluk) ಸರ್ಕಾರಿ ಶಾಲೆಯ ಮಕ್ಕಳು. ಆ ಶಾಲೆಯ ಆವರಣವೇ ಅವರ ಮಾರ್ಕೆಟ್ಟು. ಅಲ್ಲೇ ಕೂತು ವ್ಯಾಪಾರ ಮಾಡೋ ಈ ಮಕ್ಕಳ ಚೆಂದ ನೋಡಬೇಕು.
ವ್ಯಾಪಾರಿ ಆದ ಮಕ್ಕಳು
ವರ್ಷವಿಡೀ ನಾಲ್ಕು ಗೋಡೆಗಳ ಮಧ್ಯೆ ಇರೋ ಈ ಮಕ್ಕಳು ವ್ಯಾಪಾರಿಗಳಾಗಿ ಬದಲಾಗಿದ್ರು. ಅಡತ್ ಬಜಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆ ಮಕ್ಕಳ ಸಂತೆಗೆ ಅವಕಾಶ ಮಾಡಿಕೊಟ್ಟಿತು. ಮಕ್ಕಳಲ್ಲಿ ವ್ಯಾಪಾರ ಮನೋಭಾವ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯ್ತು.
ಶಿಕ್ಷಕರೂ ಪಾಲ್ಗೊಂಡಿದ್ರು
ಚಿಣ್ಣರ ಸಂತೆಯಲ್ಲಿ ಮಕ್ಕಳು ತರಕಾರಿ, ಹಣ್ಣುಗಳು, ವಿವಿಧ ತಿನಿಸುಗಳನ್ನು ಮಾರಾಟ ಮಾಡಿದರು. ಅನೇಕರು ಗೋಣಿಚೀಲದ ಮೇಲೆ ತರಕಾರಿಗಳು, ಸೊಪ್ಪುಗಳನ್ನು ಗುಡ್ಡೆಹಾಕಿ ವ್ಯಾಪಾರಿಗಳಂತೆ ವಹಿವಾಟು ನಡೆಸಿದರು. ಶಿಕ್ಷಕರು ಸಹ ಮಕ್ಕಳೊಂದಿಗೆ ವ್ಯಾಪಾರ ಮಾಡುವ ಮೂಲಕ ವ್ಯವಹಾರ ಜ್ಞಾನ ವೃದ್ಧಿಸಿದರು. ಇನ್ನು ಸಂತೆಯಲ್ಲಿ ಭಾಗವಹಿಸಿದ ಮಕ್ಕಳು ವ್ಯಾಪಾರ ಮಾಡುವ ಮೂಲಕ ಖಷಿಪಟ್ಟರು.
ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!
ಒಟ್ಟಿನಲ್ಲಿ ಚಿಣ್ಣರ ಸಂತೆಯಲ್ಲಿ ಮಕ್ಕಳಲ್ಲಿರುವ ವ್ಯಾಪಾರ ಕೌಶಲ್ಯವನ್ನು ಹೆಚ್ಚಿಸೋ ಪ್ರಯತ್ನ ನಡೆಯಿತು. ಮಕ್ಕಳು ನಾಲ್ಕು ಗೋಡೆಗಳಿಂದ ಹೊರಬಂದು ತಮ್ಮಲ್ಲಿರುವ ವ್ಯಾಪಾರಿ ಕಲೆಯನ್ನ ಪ್ರದರ್ಶಿಸಿದ್ದು ಪಾಲಕರಿಗೂ ಖುಷಿ ಕೊಟ್ಟಿತು.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ