• Home
 • »
 • News
 • »
 • kalburgi
 • »
 • Inspiration: ಇವರಿಗೆ ಕಾಲೇ ಕೈ! ಕಾಲಿಂದಲೇ ಬೈಕ್ ರಿಪೇರಿ ಮಾಡುವ ಕಲಬುರಗಿಯ ಮೆಕಾನಿಕ್

Inspiration: ಇವರಿಗೆ ಕಾಲೇ ಕೈ! ಕಾಲಿಂದಲೇ ಬೈಕ್ ರಿಪೇರಿ ಮಾಡುವ ಕಲಬುರಗಿಯ ಮೆಕಾನಿಕ್

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಬ್ದುಲ್ ರಹೆಮಾನ್ ಕೂಡ ಚಿಕ್ಕಂದಿನಲ್ಲಿ ಇತರರ ಜೊತೆ ಬೆರೆಯಲಾಗದೇ ಬೇಸರಪಟ್ಟಿದ್ದರಂತೆ. ಆದ್ರೆ ಇಷ್ಟಕ್ಕೇ ಅವ್ರು ಎದೆಗುಂದಲಿಲ್ಲ. ಯಾರ ಮೇಲೂ ಅವಲಂಬನೆ ಇಟ್ಕೊಳ್ಬಾರ್ದು ಅಂತ ಕಾಲುಗಳನ್ನೆ ಕೈಯಾಗಿಸಿಕೊಂಡು ಎಲ್ರೂ ನಾಚುವಂತೆ ಕೆಲಸ ಮಾಡ್ತಿದ್ದಾರೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಎರಡು ಕೈಗಳು ಇಲ್ದೇ ಹೋದ್ರೇನಂತೆ, ಇವ್ರಿಗೆ ಕಾಲುಗಳೇ ಕೈಗಳು. ಅದೇ ಕಾಲುಗಳಲ್ಲಿ ಇವ್ರು ಮೊಬೈಲ್ ಆಪರೇಟ್ ಮಾಡಬಲ್ಲರು, ಬೈಕ್ ರಿಪೇರಿ ಮಾಡಬಲ್ಲರು. ಚಹಾ, ನೀರು ಕುಡಿದು ದಾಹ ನೀಗಿಸಬಲ್ಲರು. ಹೌದು, ಅದೆಲ್ಲಕ್ಕೂ ಜಾಸ್ತಿ ಕೈ ಇಲ್ಲ ಅನ್ನೋ ಕೊರಗಿನಿಂದ ಕೂರದೇ ಈ ಯುವಕ ಹಲವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಯೆಸ್, 25 ವರ್ಷದ ಈ ವಿಶೇಷಚೇತನರ ಹೆಸರು ಅಬ್ದುಲ್ ರಹೆಮಾನ್. ಕಲಬುರಗಿ ನಗರದ ಸ್ಟೇಷನ್ ಬಜಾರ ಬಡಾವಣೆಯ ನಿವಾಸಿ. ಹುಟ್ಟುತ್ತಲೇ ಎರಡು ಕೈಗಳಿಲ್ಲದೆ ಹುಟ್ಟಿದ ರಹಮಾನ್ ಅವ್ರನ್ನು ಕಂಡು ಪೋಷಕರು ಕಂಗಾಲಾಗಿ ಹೋಗಿದ್ದರು. ಮುಂದೆ ಬದುಕು ಹೇಗೆ ಎಂಬ ಆತಂಕ ಪಟ್ಟಿದ್ದರು.


  ಅಬ್ದುಲ್ ರಹೆಮಾನ್ ಕೂಡ ಚಿಕ್ಕಂದಿನಲ್ಲಿ ಇತರರ ಜೊತೆ ಬೆರೆಯಲಾಗದೇ ಬೇಸರಪಟ್ಟಿದ್ದರಂತೆ. ಆದ್ರೆ ಇಷ್ಟಕ್ಕೇ ಅವ್ರು ಎದೆಗುಂದಲಿಲ್ಲ. ಯಾರ ಮೇಲೂ ಅವಲಂಬನೆ ಇಟ್ಕೊಳ್ಬಾರ್ದು ಅಂತ ಕಾಲುಗಳನ್ನೆ ಕೈಯಾಗಿಸಿಕೊಂಡು ಎಲ್ರೂ ನಾಚುವಂತೆ ಕೆಲಸ ಮಾಡ್ತಿದ್ದಾರೆ.  ಹುಬ್ಬೇರಿಸುವಂತೆ ಮಾಡುವ ಆ್ಯಕ್ಟಿವ್​ನೆಸ್
  ಅಬ್ದುಲ್ ರಹೆಮಾನ್ ಮೆಕ್ಯಾನಿಕ್ ವೃತ್ತಿಯನ್ನು ಕರಗತ ಮಾಡಿಕೊಂಡಿದ್ದಾರೆ. ತಮ್ಮ ಕಾಲುಗಳಿಂದಲೇ ಮೆಕ್ಯಾನಿಕ್ ಕೆಲಸವನ್ನು ಮಾಡುವ ಇವರ ಚುರುಕುತನಕ್ಕೆ ಕಲಬುರಗಿ ಜನ ಫಿದಾ ಆಗಿದ್ದಾರೆ. ಸ್ಟೇಷನ್ ರಸ್ತೆಯಲ್ಲಿರುವ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುವ ರಹೆಮಾನ್ ಯಾರ ಸಹಾಯವನ್ನು ಪಡೆಯದೆ ಒಬ್ರೇ ಬೈಕ್ ರಿಪೇರಿ ಮಾಡ್ತಾರೆ. ಇವರ ಈ ಆ್ಯಕ್ಟಿವ್​ನೆಸ್ ಎಂಥವರನ್ನು ಹುಬ್ಬೇರಿಸುವಂತೆ ಮಾಡುತ್ತೆ.


  ಇದನ್ನೂ ಓದಿ: Positive Story: ಕುಷ್ಠರೋಗಿಗಳಿಗೆ ಈ ದಂಪತಿಯೇ ಆಪತ್ಬಾಂಧವರು; ಹನಮಂತ-ಬಸಮ್ಮ ದಂಪತಿಯ ಕಥೆ ಕೇಳಿ
  ರಾಹುಲ್ ಗಾಂಧಿ ಮೆಚ್ಚುಗೆ
  ಮಹಮ್ಮದ್ ಅವ್ರ ವೃತ್ತಿಕೌಶಲ್ಯಕ್ಕೆ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ರಾಯಚೂರಿನಲ್ಲಿ ನಡೆದ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಮಹಮದ್ರನ್ನು ಕಂಡು ರಾಹುಲ್ ಗಾಂಧಿ ಬೆನ್ನುತಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ರು, ಅಲ್ಲದೇ ಮೆಕ್ಯಾನಿಕ್ ಕಿಟ್ ಉಡುಗೊರೆಯಾಗಿ ಕಳಿಸಿಕೊಟ್ಟಿದ್ರು.
  ಇದನ್ನೂ ಓದಿ: Kalaburagi: ಸರ್ಕಾರಿ ಶಾಲೆ ಕಟ್ಟಲು ಜೋಳಿಗೆ ಹಿಡಿದ ಸ್ವಾಮೀಜಿ; ಸಂಗ್ರಹವಾಯ್ತು 40 ಲಕ್ಷ!


  ಸರ್ಕಾರಿ ಕೆಲಸದ ಹಂಬಲ
  ಎರಡೂ ಕೈ ಚೆನ್ನಾಗಿ ಇದ್ದವರು ಮಾಡಲಾಗದ ಕೆಲಸಗಳನ್ನು ಅಬ್ದುಲ್ ರೆಹಮಾನ್ ತಮ್ಮ ಕಾಲಿನಿಂದ್ಲೇ ಮಾಡ್ತಿದ್ದಾರೆ. ಆದರೆ ಅವರ ತಂದೆತಾಯಿಗೆ ಈಗಲೂ ರಹೆಮಾನ್ ಭವಿಷ್ಯದ ಬಗ್ಗೆ ಆತಂಕ ಇದ್ದೇ ಇದೆ. ಸರ್ಕಾರ ಯಾವುದಾದರೂ ಒಂದು ಸಣ್ಣ ಕೆಲಸವನ್ನು ನೀಡಿದ್ರೆ ಬದುಕಿಗೆ ಆಸರೆಯಾಗುತ್ತೆ ಎಂಬುದು ಅವರ ಆಸೆ. ಒಟ್ಟಾರೆ ಎಲ್ಲ ಇದ್ದೂ ಇಲ್ಲದವರಂತೆ ಬದುಕುವವರ ನಡುವೆ ಮಹಮ್ಮದ್ ರಹೆಮಾನ್ ಸ್ಪೂರ್ತಿಗಾಥೆಯೇ ಆಗಿದ್ದಾರೆ.


  ನೀವೂ ಅಬ್ದುಲ್ ರಹೆಮಾನ್ ಅವರಿಗೆ ಸಲಾಂ ಹೇಳಲು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು: 80501 20869


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: