• Home
  • »
  • News
  • »
  • kalburgi
  • »
  • Positive Story: ಕಾಲುಗಳಿಲ್ಲದ ಕೃಷಿ ಸಾಧಕರಿಗೆ ಸಿಕ್ತು ನೆರವಿನ ಭರವಸೆ; ಇದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಪರಿಣಾಮ

Positive Story: ಕಾಲುಗಳಿಲ್ಲದ ಕೃಷಿ ಸಾಧಕರಿಗೆ ಸಿಕ್ತು ನೆರವಿನ ಭರವಸೆ; ಇದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಪರಿಣಾಮ

ಕೃಷಿಕನ ಬವಣೆ ನೀಗಿತು!

"ಕೃಷಿಕನ ಬವಣೆ ನೀಗಿತು!"

ಎಲ್ಲ ಇದ್ದೂ ಏನೂ ಇಲ್ಲ ಎಂದು ಕೂರುವವರ ನಡುವೆ ವೈಕಲ್ಯದ ನಡುವೆಯೂ ಸಾಧನೆ ಮಾಡುವ ದಾರಿಯಲ್ಲಿ ಶಿವಪ್ಪನವರು ಛಲ ತೋರಿದ್ದರು. ಅವರ ಸಾಧನೆಯನ್ನ ನ್ಯೂಸ್ 18 ಕನ್ನಡ ಡಿಜಿಟಲ್ ಪ್ರಕಟಿಸಿತ್ತು.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ನಡೆಯೋಕೆ ಕಾಲುಗಳೇ ಇಲ್ಲ, ಆದ್ರೂ ನೆಲದ ಮೇಲೆ ಹರೆಯುತ್ತಾ ಮುಂದೆ ಮುಂದೆ ಸಾಗ್ತಾರೆ. ಹೊಲಕ್ಕೆ ಹೋಗ್ತಾರೆ, ತಾವೇ ಬೆಳೆದ ತರಕಾರಿಗಳಿಗೆ ನೀರು ಗೊಬ್ಬರ ಹಾಕಿ ಕಣ್ಣುಗಳಲ್ಲಿ ಖುಷಿ ತುಂಬಿಕೊಳ್ತಾರೆ. ಬದುಕಿನ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತ (Success Story) ಕಲಬುರಗಿಯ ವಿಶೇಷ ಸಾಧಕ ರೈತರ (Specially Abled Farmer) ಕುರಿತು ನ್ಯೂಸ್ 18 ಕನ್ನಡ ಡಿಜಿಟಲ್ (News 18 Kannada Digital) ವಿಶೇಷ ವರದಿಗೆ ಫಲಶ್ರುತಿ ಸಿಕ್ಕಿದೆ. ಕಲಬುರಗಿಯ ವಿಶೇಷ ಚೇತನ ಕೃಷಿಕ ಶಿವಪ್ಪನವ ಮುಖದಲ್ಲಿ ಮಂದಹಾಸ ಮೂಡಿದೆ.


    ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ರೈತ ಶಿವಪ್ಪ ಜಮಾದಾರ ಅವರಿಗೆ ಎರಡೂ ಕಾಲುಗಳಿಲ್ಲ. ಎಲ್ಲ ಇದ್ದೂ ಏನೂ ಇಲ್ಲ ಎಂದು ಕೂರುವವರ ನಡುವೆ ವೈಕಲ್ಯದ ನಡುವೆಯೂ ಸಾಧನೆ ಮಾಡುವ ದಾರಿಯಲ್ಲಿ ಶಿವಪ್ಪನವರು ಛಲ ತೋರಿದ್ದರು. ಅವರ ಸಾಧನೆಯನ್ನ ನ್ಯೂಸ್ 18 ಕನ್ನಡ ಡಿಜಿಟಲ್ ಪ್ರಕಟಿಸಿತ್ತು.


    ಸ್ವಾಧೀನ ಇಲ್ಲದಿದ್ದರೂ ಸಾಧಕ
    ಶಿವಪ್ಪನವರ ಶ್ರಮ ಹಾಗೂ ಸ್ವಾಭಿಮಾನದ ಬದುಕಿನ ಕುರಿತು ವಿಸ್ತೃತ ವರದಿ ಮೂಲಕ ತೋರಿಸಲಾಗಿತ್ತು. ತಮ್ಮ ಎರಡು ಕಾಲುಗಳನ್ನು ಪೋಲಿಯೊದಿಂದ ಸ್ವಾಧೀನ ಕಳೆದುಕೊಂಡ್ರೂ ಮತ್ತೊಬ್ಬರ ಮೇಲೆ ಅವಲಂಬಿತರಾಗದ ಅವರ ಸಾಧನೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು.


    ಇದನ್ನೂ ಓದಿ:


    ಸರ್ಕಾರದ ಸಹಾಯದ ಅವಶ್ಯಕತೆ; ಗಮನ ಸೆಳೆದಿದ್ದ ನ್ಯೂಸ್ 18 ಕನ್ನಡ ಡಿಜಿಟಲ್
    ತಮ್ಮ ಪತ್ನಿಯ ಸಹಾಯದಿಂದ ವಿವಿಧ ತರಕಾರಿ ಕೃಷಿ ಮಾಡಿ, ಪ್ರತಿನಿತ್ಯವೂ ಮಾರುಕಟ್ಟೆಗೆ ತ್ರಿಚಕ್ರ ವಾಹನದ ಮೇಲೆ ತಾವೇ ಸ್ವತಃ ಸಾಗಿಸುವ ಅವರ ಸ್ವಾವಲಂಬಿ ಬದುಕು ಇತರರಿಗೂ ಮಾದರಿಯಾಗಿತ್ತು. ಆದ್ರೆ ಸರ್ಕಾರದ ಸಹಾಯದ ಅವಶ್ಯಕತೆಯೂ ಇತ್ತು. ಈ ಕುರಿತು ವಿಡಿಯೋ ವರದಿ ಬಿತ್ತರಿಸಿ ನ್ಯೂಸ್ 18 ಕನ್ನಡ ಡಿಜಿಟಲ್ ಗಮನ ಸೆಳೆದಿತ್ತು. ಇದೀಗ ವರದಿಗೆ ಸ್ಪಂದನೆ ಸಿಕ್ಕಿದೆ.


    ಶಿವಪ್ಪನವರ ಮೊಗದಲ್ಲಿ ಮೂಡಿದ ಮಂದಹಾಸ
    ನ್ಯೂಸ್ 18 ಕನ್ನಡ ಡಿಜಿಟಲ್ ವರದಿಯಿಂದ ರೈತ ಶಿವಪ್ಪ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಇಲಾಖೆ ಅಧಿಕಾರಿಗಳ ಭೇಟಿಯೇ ಅವರಿಗೆ ಭರವಸೆ ತುಂಬಿದೆ. ಅವರು ನೀಡಿದ ಕೃಷಿ ಸಲಕರಣೆ, ಬಿತ್ತನೆ ಬೀಜ, ಕೀಟನಾಶಕದೊಂದಿಗೆ ಶಿವಪ್ಪ ಅವರೂ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದೆಯೂ ಶಿವಪ್ಪನವರಿಗೆ ಸರ್ಕಾರದಿಂದ ಇನ್ನಷ್ಟು ನೆರವು ಒದಗಿಸುವ ಭರವಸೆಯನ್ನು ಕೃಷಿ ಅಧಿಕಾರಿಗಳು ನೀಡಿದ್ದಾರೆ.


    ಇದನ್ನೂ ಓದಿ:


    ಊರಲ್ಲಿ ಎಷ್ಟೇ ಜಮೀನಿದ್ದರೂ ಮೆಟ್ರೋ ಸಿಟಿಗಳನ್ನ ಅರಸಿ ಹೋಗುವವರ ಮಧ್ಯೆ ಶಿವಪ್ಪ ನಿಜಕ್ಕೂ ಗ್ರೇಟ್ ಎನಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರದಿಂದ ಇನ್ನಷ್ಟು ನೆರವು ಹರಿದು ಬರಲಿ ಅನ್ನೋದೆ ನ್ಯೂಸ್ 18 ಕನ್ನಡ ಡಿಜಿಟಲ್ ಆಶಯ ಕೂಡಾ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: