ಕಲಬುರಗಿ: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಅಥವಾ ಕೇಂದ್ರದ ಯಾವುದೇ ಯೋಜನೆಯ ಫಲಾನುಭವಿಗಳಾಗಲು ಆಧಾರ್ ಕಾರ್ಡ್ (Aadhaar Card) ಇಲ್ಲದಿದ್ದರೆ ಕಷ್ಟ. ಅದರಲ್ಲೂ ಕುಷ್ಠರೋಗ ಆಧಾರ್ ಕಾರ್ಡ್ ಮಾಡುವಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿದ್ದವು. ಅದರಲ್ಲೂ ಆಧಾರ್ ಕಾರ್ಡ್ ಇಲ್ಲದೇ ಬ್ಯಾಂಕ್ ಖಾತೆ ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವ ಹಲವು ಪ್ರಸಂಗಗಳು ನಡೆದಿದ್ದವು. ಇದೀಗ ರಾಜ್ಯದಲ್ಲಿಯೇ (Karnataka) ಮೊದಲ ಬಾರಿಗೆ ವಿಶೇಷವಾಗಿ ಕುಷ್ಠರೋಗಿಗಳು ಮತ್ತು ವಿಶೇಷಚೇತನರಿಗೆ (Specially Abled) ಆಧಾರ್ ಕಾರ್ಡ್ ನೋಂದಣಿ ಶಿಬಿರ ಆಯೋಜಿಸಲಾಗಿದೆ.
ಯಾವಾಗ? ಎಲ್ಲಿ?
ಡಿಸೆಂಬರ್ 20 ರಂದು ಕಲಬುರಗಿಯಲ್ಲಿ ವಿಶೇಷ ಆಧಾರ್ ನೋಂದಣಿ ಶಿಬಿರ ಆಯೋಜಿಸಿದೆ. ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸ್ಪಂದನಾ ಕೇಂದ್ರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ನೋಂದಣಿ ಕಾರ್ಯ ನಡೆಯಲಿದೆ.
ದಾಖಲಾತಿ ಇಲ್ಲದಿದ್ದರೆ ಹೀಗೆ ಮಾಡಿ
ಆಧಾರ ನೋಂದಣಿಗೆ ಹೆಸರು ಹಾಗೂ ವಿಳಾಸದ ಪುರಾವೆಯೊಂದಿಗೆ ಬರಬೇಕಾಗುತ್ತದೆ. ಒಂದು ವೇಳೆ ಯಾವುದೇ ಹೆಸರು ಮತ್ತು ವಿಳಾಸದ ದಾಖಲಾತಿ ಇಲ್ಲದಿದ್ದರೆ ಕುಷ್ಟರೋಗಿ ಮತ್ತು ವಿಶೇಷ ಚೇತನರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಒದಗಿಸಿದಲ್ಲಿ ಆಧಾರ ನೋಂದಣಿಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ: Potraj Dance: ಪೋತರಾಜ ಕುಣಿತದ ಬಗ್ಗೆ ನಿಮಗೆಷ್ಟು ಗೊತ್ತು? ಇವರೇ ನೋಡಿ ವಿಶೇಷ ಕಲಾವಿದ
ಅಲ್ಲೇ ಮಾಡಿಸಿಕೊಳ್ಳಿ ಅಂಚೆ ಇಲಾಖೆಯ ಉಳಿತಾಯ ಖಾತೆ
ಬ್ಯಾಂಕ್ ಖಾತೆಯಿಂದ ವಂಚಿತರಾಗಿರುವ ಕುಷ್ಟರೋಗಿಗಳು, ಹಾಗೂ ವಿಶೇಷಚೇತನರಿಗೆ ಆಧಾರ ನೋಂದಣಿಯ ನಂತರ ಸ್ಥಳದಲ್ಲಿಯೇ ಅಂಚೆ ಇಲಾಖೆಯ ಉಳಿತಾಯ ಖಾತೆಯನ್ನು ಮಾಡಿಕೊಡಲಾಗುವುದು. ಇದಕ್ಕಾಗಿ ಅರ್ಜಿದಾರರು ಪಾಸ್ಪೋರ್ಟ್ ಅಳತೆಯ 3 ಭಾವಚಿತ್ರದ ಜೊತೆ ವಿಳಾಸ ಮತ್ತು ಹೆಸರಿನ ಪುರಾವೆ ಒದಗಿಸಬೇಕು.
ಇದನ್ನೂ ಓದಿ: Kalaburagi: ಸರ್ಕಾರಿ ಕೆಲಸ ಬಿಟ್ಟು ಕಲ್ಲು ಹಿಡಿದ ಸಾಧಕ!
ಹೆಚ್ಚಿನ ಮಾಹಿತಿಗಾಗಿ
ಆಧಾರ ನೋಂದಣಿ ಕುರಿತು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9986630003, 9591864143 ಗೆ ಸಂಪರ್ಕಿಸಬಹುದಾಗಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ