ರೈಲ್ವೆ ಟಿಕೆಟ್ ಮಾಡುವುದೆಂದರೆ ಒಂದು ರೀತಿಯ ಸಾಹಸ ಮಾಡಿದಂತೆ. ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಅದರಲ್ಲೂ ತತ್ಕಾಲ್, ಸಾಮಾನ್ಯ ಕೌಂಟರ್ ಅನ್ನೋ ಗೊಂದಲವು ಕೌಂಟರ್ ಬಳಿ ಪ್ರಯಾಣಿಕರಿಗೆ ಎದುರಾಗುತ್ತದೆ. ಇತ್ತೀಚೆಗೆ ಪ್ರಯಾಣಿಕರ ಈ ಬವಣೆ ತಪ್ಪಿಸಲು ಮೊಬೈಲ್ ಆ್ಯಪ್ನ್ನು (Mobile App) ರೈಲ್ವೇ ಇಲಾಖೆ (Indian Railways) ಪರಿಚಯಿಸಿತ್ತು. ಆದರೆ ಆ ಆ್ಯಪ್ನಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಷ್ಟೇ ಟಿಕೆಟ್ ಪಡೆಯಬಹುದಾಗಿತ್ತು. ಆದರೆ ಇದೀಗ ಯುಟಿಎಸ್ (Unreserved Ticketing System) ಆ್ಯಪ್ ಸುಧಾರಿತ ಕ್ರಮ ತೆಗೆದುಕೊಳ್ಳಲಾಗಿದ್ದು, ಆ ಮೂಲಕ ಕನ್ನಡಿಗರು ಕನ್ನಡ ಭಾಷೆಯಲ್ಲಿಯೇ (Rail Ticket Booking In Kannada) ಟಿಕೆಟ್ ಪಡೆಯಬಹುದಾಗಿದೆ.
UTS ನಿಂದ ಲಾಭವೇನು?
ಕಾಯ್ದಿರಿಸದ ಟಿಕೆಟ್ ಬುಕ್ ಮಾಡುವುದೆಂದರೆ ವ್ಯಕ್ತಿಯೋರ್ವ ತಾನು ಇರುವ ಸ್ಥಳದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿರುವ ಯಾವುದೇ ರೈಲ್ವೇ ನಿಲ್ದಾಣದಿಂದ ಹೊರಡಲು ಯುಟಿಎಸ್ ಆ್ಯಪ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುವುದು. ಇದೀಗ ಕನ್ನಡ ಭಾಷೆಯೂ ಟಿಕೆಟ್ ಪಡೆಯುವ ಅವಕಾಶಕ್ಕೆ ಸೇರ್ಪಡೆಯಾಗಿದ್ದು ಕನ್ನಡಿಗರು ಇದರ ಲಾಭ ಪಡೆಯಬಹುದಾಗಿದೆ.
ಮೊಬೈಲ್ ಆ್ಯಪ್ನಿಂದ ಮಾಹಿತಿ
ಅದಲ್ಲದೇ ಯುಟಿಎಸ್ ಆ್ಯಪ್ನಿಂದ ಸಾಮಾನ್ಯ ಬುಕಿಂಗ್, ತ್ವರಿತ ಬುಕಿಂಗ್, ಪ್ಲ್ಯಾಟ್ ಫಾರ್ಮ್ ಟಿಕೆಟ್, ಸೀಝನ್ ಟಿಕೆಟ್ ಬುಕಿಂಗ್, ಕ್ಯುಆರ್ ಬುಕಿಂಗ್ ಸೇರಿದಂತೆ ಟಿಕೆಟ್ ಕುರಿತ ಮಾಹಿತಿ, ಟಿಕೆಟ್ ರದ್ಧತಿ ಮಾಹಿತಿಯನ್ನ ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ.
ಆ್ಯಪ್ ಲಿಂಕ್ ಹೀಗಿದೆ ನೋಡಿ
ಆಸಕ್ತರು ತಾವು ತಮ್ಮ ಮೊಬೈಲ್ ಫೋನ್ನಲ್ಲಿರುವ ಆ್ಯಪಲ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್ ಹಾಗೂ ವಿಂಡೋಸ್ ಸ್ಟೋರ್ಗಳ ಸಹಾಯದಿಂದ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಬಹುದು ನೋಡಿ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ಹೀಗಿದೆ
ರೈಲ್ವೆ ಸಂಬಂಧಿತ ಹೆಚ್ಚಿನ ಮಾಹಿತಿ, ದೂರು, ಸಲಹೆಗಳಿಗಾಗಿ 139 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಪ್ರಯಾಣಿಕರು ರೈಲು ಟಿಕೆಟ್ ಪಡೆಯಲು ಈ ಮೊದಲು ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಅದನ್ನು ತಪ್ಪಿಸಲೆಂದೇ ಇಲಾಖೆಯು ಇದುವರೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿದ್ದ ಯು ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಯುಟಿಎಸ್ ಆ್ಯಪ್ನ ಬಳಕೆಗೆ ಪ್ರಯಾಣದ ಟಿಕೆಟ್ ಪಡೆಯುವ ಅವಕಾಶವನ್ನು ಕನ್ನಡದಲ್ಲಿಯೇ ಯುಟಿಎಸ್ ಕಲ್ಪಿಸಿದೆ. ನಿಲ್ದಾಣದಿಂದ ಸಾಮಾನ್ಯ ಬುಕಿಂಗ್ ಹೊರಡಲು ಯುಟಿಎಸ್ ಟಿಕೆಟ್, ತ್ವರಿತ ಬುಕಿಂಗ್ ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ತಾವು ಇರುವ ಮೂಲಕ ಹಣ ಪಾವತಿಸಿ ಟಿಕೆಟ್ , ಪ್ಲಾಟ್ಫಾರ್ಮ್ ಟಿಕೆಟ್ ಪಡೆಯಬಹುದಾಗಿದೆ.
ಇದನ್ನೂ ಓದಿ: Kalaburagi: ಕಲ್ಯಾಣ ಕರ್ನಾಟಕದ ಈ ಊರಿನಿಂದಲೇ ಶುರುವಾಗಲಿದೆ 6 ಪಥದ ರಾಷ್ಟ್ರೀಯ ಹೆದ್ದಾರಿ!
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸದ್ಯ 6.5 ಲಕ್ಷ ಜನರು ಯುಟಿಎಸ್ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಪ್ರಯಾಣಿಕರು ಈಗ ಕನ್ನಡದಲ್ಲಿಯೇ ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: PM Narendra Modi Statue: ಪಿಎಂ ಮೋದಿಯ 60 ಪ್ರತಿಮೆ ತಯಾರಿಸಿದ ಕಲಬುರಗಿ ಕಲಾವಿದ! ಇವ್ರ 'ಆ ಆಸೆ' ಈಡೇರುತ್ತಾ?
ಸೀಜನ್ ಟಿಕೆಟ್ ಬುಕಿಂಗ್, ಕ್ಯೂಆರ್ ಬುಕಿಂಗ್ ಸೌಲಭ್ಯದ ಜೊತೆಗೆ ಟಿಕೆಟ್ ರದ್ದತಿ, ಟಿಕೆಟ್ನ ಸದ್ಯದ ಮಾಹಿತಿ ಸೇರಿದಂತೆ ಇನ್ನಿತರ ಮಾಹಿತಿಯನ್ನೂ ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ