ಕಲಬುರಗಿ: ಬಾಲಿವುಡ್ನ ʼರಾಮಯ್ಯ ವಸ್ತಾವಯ್ಯʼ ಸಿನೆಮಾದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೋನು ಸೂದ್ (Sonu Sood), ಇದೀಗ ಕನ್ನಡದಲ್ಲೂ ಅದೇ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸ್ಯಾಂಡಲ್ವುಡ್ನಲ್ಲಿ ಅನ್ನದಾತನ ಪಾತ್ರಕ್ಕೆ ಜೀವ ತುಂಬುತ್ತಿರೋ ರಿಯಲ್ ಹೀರೋನ (Real Hero) ಸಿನೆಮಾದ ಪ್ರಚಾರ ಭರ್ಜರಿಯಾಗಿ ಸಾಗಿವೆ. ಬರೇ ಸೋನು ಸೂದ್ ಅಲ್ದೇ, ಈ ಸಿನೆಮಾದ ಕಥೆ, ಹಾಡು, ಸಂಗೀತದ ಜೊತೆಗೆ ಗಾಯನ ಕೂಡಾ ಕುತೂಹಲ ಹುಟ್ಟಿಸಿದೆ. ಅದ್ಯಾಕೆ ಅಂತೀರ? ಈ ಸ್ಟೋರಿ ನೋಡಿದ್ರೆ ನಿಮ್ಗೇ ಗೊತ್ತಾಗುತ್ತೆ.
ರೈತನ ಕುರಿತ ಹಾಡು ಮೊಳಗಿಸ್ತಾ ಪ್ರಚಾರದಲ್ಲಿ ತೊಡಗಿರೋ ಸಿನೆಮಾ ಟೀಂ.. ಎಸ್ ಪಿಬಿ ಸ್ವರದಲ್ಲಿ ಮೂಡಿದ ಸಂಗೀತ ಸ್ವರ. ಹೌದು, ಎಸ್ ಪಿ ಬಾಲಸುಬ್ರಹ್ಮಣ್ಯಂ ನಮ್ಮನ್ನಗಲಿ ವರುಷ ಕಳೆದರೂ ಅವರು ಹಾಡಿರುವ ಹಾಡೊಂದು ಮತ್ತೆ ಈಗ ಅವರನ್ನ ನೆನಪಿಸುವಂತೆ ಮಾಡಿದೆ. ಅಂದಹಾಗೆ ಈ ಸಿನೆಮಾ ಹೆಸರು "ಶ್ರೀಮಂತ".
ಎಸ್.ಬಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಸಿನಿಮಾ
ಸಂಪೂರ್ಣವಾಗಿ ರೈತನ ಜೀವನಾಧಾರಿತ ಕಥೆ ಹೊಂದಿರುವ ಈ ಸಿನೆಮಾದಲ್ಲಿ ಸೋನು ಸೂದ್ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷವೆನಿಸದರೆ, ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಡಿರೋ ಕೊನೆಯ ಸಿನೆಮಾ ಅನ್ನೋ ಹೆಗ್ಗಳಿಕೆಯೂ ಈ ಸಿನೆಮಾದ್ದು. ಇನ್ನು ಸಿನೆಮಾದಲ್ಲಿರೋ ಎಂಟು ಹಾಡುಗಳಿಗೆ ಹಂಸಲೇಖ ಸಂಗೀತವಿದೆ.
ರೈತನ ಜೀವನಾಧಾರಿತ
ಹಾಸನ್ ರಮೇಶ್ ಅವರ ನಿರ್ದೇಶನದಲ್ಲಿಮೂಡಿಬಂದಿರುವ ಶ್ರೀಮಂತ ಸಿನಿಮಾದಲ್ಲಿ ರೈತನೇ ನಿಜವಾದ ಶ್ರೀಮಂತ ಎಂದು ಹೇಳಲು ಚಿತ್ರತಂಡ ಹೊರಟಿದೆ. ಈ ಚಿತ್ರದ ಟ್ರೈಲರ್ ಈಗಾಗಲೆ ಬಿಡುಗಡೆಗೊಂಡಿದ್ದು, ಉತ್ತಮ ಸ್ಪಂದನೆಯೂ ವ್ಯಕ್ತವಾಗ್ತಿದೆ.
ಘಟಾನುಘಟಿ ತಾರಾಗಣ
ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸೋನು ಸೂದ್ ಕಾಣಿಸಿಕೊಂಡರೆ, ನಾಯಕ ನಟನಾಗಿ ಕಲಬುರಗಿ ಮೂಲದ ಯುವನಟ ಕ್ರಾಂತಿ ನಾಯಕನಾಗಿ ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ ಹಾಗೂ ವೈಷ್ಣವಿ ಚಂದ್ರನ್ ಮೆನನ್ ಅಭಿನಯಿಸಿದ್ದಾರೆ.
ಇದನ್ನೂ ಓದಿ: Kalaburagi: ಈ ಶಾಲೆಯಲ್ಲಿ ಪ್ರತಿನಿತ್ಯ ಎರಡು ಗಂಟೆಯಷ್ಟೇ ಪಾಠ!
ಅಲ್ಲದೇ, ನಟ ಚರಣರಾಜ್, ಸಾಧುಕೋಕಿಲ, ರಮೇಶ್ ಭಟ್, ಕುರಿ ರಂಗ, ಉತ್ತರ ಕರ್ನಾಟಕ ಭಾಗದ ಖ್ಯಾತ ಹಾಸ್ಯ ಕಲಾವಿದ ರಾಜು ತಾಳಿಕೋಟಿ ಸೇರಿದಂತೆ ಘಟಾನುಘಟಿ ತಾರಾಗಣವೇ ಇದೆ. ಇನ್ನೇನು ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆಗೆ ಬರೋದಕ್ಕೆ ಸಿನೆಮಾ ರೆಡಿ ಆಗಿದೆ.
ಇದನ್ನೂ ಓದಿ: Qawwali Family: ಮನೆಯವರೆಲ್ರೂ ಕಲಾವಿದರು, ಕವಾಲಿ ಲೋಕದಲ್ಲಿ ತೇಲಾಡಿಸುವ ಕುಟುಂಬವಿದು!
ಒಟ್ಟಿನಲ್ಲಿ ರೈತರ ಜೀವನಾಧರಿತ ಹೈ ಬಜೆಟ್ ಸಿನಿಮಾದಲ್ಲಿ ಹೈ ಪ್ರೊಫೈಲ್ ನಟರೇ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ