• Home
 • »
 • News
 • »
 • kalburgi
 • »
 • Kalaburagi Viral Video: ಜನರಿಂದಲೇ ಸೈನಿಕನ ರಕ್ಷಣೆ! ಅಚ್ಚರಿ ಘಟನೆ ವೈರಲ್

Kalaburagi Viral Video: ಜನರಿಂದಲೇ ಸೈನಿಕನ ರಕ್ಷಣೆ! ಅಚ್ಚರಿ ಘಟನೆ ವೈರಲ್

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ದೇಶ ಕಾಯುತ್ತಾ ನಮ್ಮನ್ನೆಲ್ಲ ರಕ್ಷಿಸಿದ 57 ರ ಹರೆಯದ ಯೋಧನನ್ನು, ಜನರೇ ರಕ್ಷಿಸಿದ್ದು ಅವರ ಸೇವೆಗೆ ಕೃತಜ್ಞತೆ ಹೇಳಿದಂತಿತ್ತು.

 • Share this:

  ಕಲಬುರಗಿ: ಧಾರಾಕಾರವಾಗಿ ಸುರಿಯುತ್ತಿರೋ ಮಳೆ. ರಭಸದಿಂದ ಹರಿದು ಹೋಗ್ತಿರೋ ಚರಂಡಿ ನೀರು. ಇದರ ಮಧ್ಯೆಯೇ ನಡೆಯಿತು ಅಗ್ನಿಶಾಮಕದಳ ಸಿಬ್ಬಂದಿಗಳ ಕಾರ್ಯಾಚರಣೆ. ಇದು ಅಂತಿಂಥಾ ಕಾರ್ಯಾಚರಣೆ ಅಲ್ಲ, ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಾಜಿ ಸೈನಿಕನ ರಕ್ಷಣಾ ಕಾರ್ಯಾಚರಣೆ. ಕಲಬುರಗಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದ (Kalaburagi News) ಮಾಜಿ ಸೈನಿಕರೊಬ್ಬರು ಬೈಕ್​ನಲ್ಲಿ ತೆರಳುತ್ತಿದ್ದ ಸಮಯ ಆಯತಪ್ಪಿ ಚರಂಡಿ ಮೇಲೆ ಬಿದ್ದು ತೇಲಿಹೋಗ್ತಿದ್ರು.  ಅದೃಷ್ಟಕ್ಕೆ ಲಾಲಗೇರಿ ಕ್ರಾಸ್ ಸಮೀಪದ ಅಗ್ನಿಶಾಮಕ ದಳದ ಕಚೇರಿ (Fire Station) ಮುಂದೆ ಈ ಘಟನೆ ನಡೆದಿದೆ.


  ಇದನ್ನೂ ಓದಿ: Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!


  ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ SDRF ಸಿಬ್ಬಂದಿಗಳು ಆಗಮಿಸಿದ್ದಾರೆ. ಆಗಲೇ ಶುರುವಾಯ್ತು ಭರ್ಜರಿ ಕಾರ್ಯಾಚರಣೆ. ಹೀಗೆ ಗಂಟೆ ಕಾಲ ನಡೆದ ಕಾರ್ಯಾಚರಣೆ ಮೂಲಕ ಕೊನೆಗೂ ಮಾಜಿ ಯೋಧ ಮಲ್ಲಣ್ಣ ಮಡಿವಾಳ ಅಪಾಯದಿಂದ ಪಾರಾಗಿ ಮೇಲೆ ಬಂದರು.


  ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


  ಆದ್ರೆ ಈ ರಕ್ಷಣಾ ಕಾರ್ಯ ಸಕ್ಸಸ್ ಆಗ್ತಿರ್ಲಿಲ್ಲ. ಏನಾದ್ರು ಮಾಡಿ ಇವರನ್ನ ಕಾಪಾಡ್ಬೇಕು ಅಂತ ಹಗ್ಗ ಇಳಿಸಿ ಚರಂಡಿ ಒಳಗೆ ಸಿಲುಕಿಕೊಂಡಿದ್ದ ಮಲ್ಲಣ್ಣ ಅವರನ್ನು ನಿಧಾನವಾಗಿ ಮೇಲಕ್ಕೆತ್ತಿದರು. ಸುತ್ತಲೂ ನೆರೆದಿದ್ದ ಜನರೆಲ್ಲರೂ ಕಾರ್ಯಾಚರಣೆ ಯಶಸ್ವಿ ಆಗ್ತಿದ್ದಂತೆ ಶಹಬ್ಬಾಸ್ ಕೂಗಿ ಅಭಿನಂದಿಸಿದ್ರು. ದೇಶ ಕಾಯುತ್ತಾ ನಮ್ಮನ್ನೆಲ್ಲ ರಕ್ಷಿಸಿದ 57 ರ ಹರೆಯದ ಯೋಧನನ್ನು, ಜನರೇ ರಕ್ಷಿಸಿದ್ದು ಅವರ ಸೇವೆಗೆ ಕೃತಜ್ಞತೆ ಹೇಳಿದಂತಿತ್ತು.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: