Kalaburagi Snake Prashanth: ಕಲಬುರಗಿಯ ಈ ಆಟೋ ಡ್ರೈವರ್​ಗೆ ಹಾವೆಂದರೆ ಹೂವು!

12ನೇ ವಯಸ್ಸಿನಲ್ಲಿ ಹಾವುಗಳನ್ನು ಹಿಡಿಯಲು ಆರಂಭಿಸಿದ ಇವರು, ಈವರೆಗೂ ಸುಮಾರು 25 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಕಲಬುರಗಿ: ಒಂದಲ್ಲ ಎರಡಲ್ಲ, ಒಮ್ಮೆಗೆ ರಾಶಿ ರಾಶಿ ಹಾವುಗಳನ್ನು ಹಿಡಿದು ಅವುಗಳ ಜೊತೆ ಆಟವಾಡಬಲ್ಲರು. ಹಾವುಗಳನ್ನ ಹೂವುಗಳಂತೆ ಹಿಡಿದು ರಕ್ಷಿಸಬಲ್ಲರು. ವೃತ್ತಿಯಲ್ಲಿ ಆಟೋ ಡ್ರೈವರ್, ಆದ್ರೆ ಪ್ರವೃತ್ತಿಯಲ್ಲಿ ಪಕ್ಕಾ ಹಾವು ರಕ್ಷಕ. ಇವರ ಹೆಸರು ಪ್ರಶಾಂತ್.  ಕಲಬುರಗಿಯ (Kalaburagi) ಮುಕ್ತಾಂಪುರ ಬಡಾವಣೆ ನಿವಾಸಿ. ಈ ಪ್ರಶಾಂತ್ ಪಾಟೀಲ್ ಹೈಸ್ಕೂಲ್ ಹೋಗೋ ಪ್ರಾಯದಲ್ಲೇ ಹಾವುಗಳನ್ನು ಸೆರೆ ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡವರು. ಇವರು ಈವರೆಗೂ ಸಾವಿರಾರು ಹಾವುಗಳನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶದಲ್ಲಿ (Snakes In Forest) ಬಿಟ್ಟಿದ್ದಾರೆ. ಕಲಬುರಗಿಯಲ್ಲಿ ಎಲ್ಲೇ ಹಾವು ಕಂಡರೆ ಫಸ್ಟ್ ಕರೆ ಬರೋದೆ ಪ್ರಶಾಂತ್ ಅವರಿಗೆ. ಫೋನ್ ಬಂದು ತಕ್ಷಣ ಕೂಡಲೇ ಸ್ಥಳಕ್ಕೆ ದೌಡಾಯಿಸುವ ಪ್ರಶಾಂತ್ ಅವರು (Kalaburagi Snake Prashanth) ಹಾವನ್ನು ಹಿಡಿದು ರಕ್ಷಣೆ ಮಾಡಿ ಅದನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರ್ತಾರೆ.

    ಅಲ್ಲದೇ ಅರಣ್ಯ ಇಲಾಖೆ ಕೂಡಾ ಇವರದ್ದೇ ಸಹಾಯವನ್ನ ಯಾಚಿಸ್ತದೆ. ಜೊತೆಗೆ ಎಲ್ಲೇ ಹಾವುಗಳನ್ನು ಕಂಡರೂ ನನಗೆ ಕರೆ ಮಾಡಿ, ಹೊರತು ಅವುಗಳನ್ನ ಕೊಲ್ಲಲು ಹೋಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತಾರೆ.



    ಹಾವಿನ ನೋವು ನಲಿವಿಗೆ ಪ್ರಶಾಂತ್ ಸ್ಪಂದನೆ
    ಪ್ರಶಾಂತ್ ಪಾಟೀಲ್ ಜೀವನ ಸಾಗಿಸಲು ಆಟೋ ಓಡಿಸುತ್ತಾರೆ. ಹಾವುಗಳನ್ನು ನಿರ್ಭಯದಿಂದ ಹಿಡಿದು ಮಗುವಿನಂತೆ ಸಂರಕ್ಷಣೆ ಮಾಡುವ ಇವರ ಧೈರ್ಯವನ್ನು ಹಾಗೂ ಹಾವು ಪ್ರೇಮವನ್ನು ಕಂಡು ಕಲಬುರಗಿ ಜನ ಇವರಿಗೆ ಸ್ನೇಕ್ ಪ್ರಶಾಂತ್ ಕರೆಯುತ್ತಾರೆ.



    ಹಾವುಗಳಿಗೂ ಚಿಕಿತ್ಸೆ
    ಎಲ್ಲಿ ಹಾವುಗಳನ್ನು ಕಂಡರೆ ಅದೆಷ್ಟೇ ಕಷ್ಟವಾದರೂ ಸಹ ಹಾವುಗಳನ್ನ ರಕ್ಷಣೆ ಮಾಡಿ ಚೀಲ ಅಥವಾ ಡಬ್ಬದಲ್ಲಿ ಹಾಕಿಕೊಂಡು ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರ್ತಾರೆ. ಅಷ್ಟೇ ಅಲ್ಲ ಹಾವುಗಳಿಗೆ ಗಾಯವಾದರೆ ಡಾಕ್ಟರ್ ಆಗಿ ಟ್ರೀಟ್ಮೆಂಟ್ ಕೂಡ ಕೊಡ್ತಾರೆ.

    ಸಂಕಷ್ಟದಲ್ಲಿ ಉರಗ ಪ್ರೇಮಿಯ ಬದುಕು
    12ನೇ ವಯಸ್ಸಿನಲ್ಲಿ ಹಾವುಗಳನ್ನು ಹಿಡಿಯಲು ಆರಂಭಿಸಿದ ಇವರು, ಈವರೆಗೂ ಸುಮಾರು 25 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಆದರೆ ಹಾವುಗಳ ಸಂರಕ್ಷಣೆ ಮಾಡುವ ಹೊಣೆ ಹೊತ್ತ ಸ್ನೇಕ್ ಪ್ರಶಾಂತ್ ಅವರ ಸ್ವಂತ ಬದುಕಿಗೆ ರಕ್ಷಣೆ ಇಲ್ಲದಂತಾಗಿದೆ.

    ಇದನ್ನೂ ಓದಿ: Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ!



    ಯಾರೊಬ್ಬರೂ ನೆರವಿಗೆ ಬಂದಿರಲಿಲ್ಲ
    ಹಿಂದೆ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದಾಗ ಯಾರೊಬ್ಬರೂ ಇವರ ನೆರವಿಗೆ ಬಂದಿರಲಿಲ್ಲ. ಹಾಗಾಗಿ ಸರಕಾರ ಇಂತಹವರ ನೆರವಿಗೆ ಧಾವಿಸಬೇಕು ಅನ್ನೋದು ಅವರ ಸ್ನೇಹಿತರ ಒತ್ತಾಯ.

    ಇದನ್ನೂ ಓದಿ: Kalaburagi Ganapati: ಬದುಕು ಕಟ್ಟಿಕೊಟ್ಟ ಗಣಪ! ಇದು ನಿಜಕ್ಕೂ ದೇವರು ನೀಡಿದ ವರ!



    ಸ್ನೇಕ್ ಪ್ರಶಾಂತ್ ಅವರ ಸಂಪರ್ಕ ಸಂಖ್ಯೆ: 7411431430

    ಒಟ್ಟಿನಲ್ಲಿ ಅದೆಷ್ಟೇ ಅಪಾಯವಿರಲಿ ಹಾವುಗಳ ರಕ್ಷಣೆ ಮಾಡಲು ಸ್ನೇಕ್ ಪ್ರಶಾಂತ್ ಹಿಂದೆ ಮುಂದೆ ನೋಡರು. ತನ್ನ ಪ್ರಾಣದ ಹಂಗನ್ನೇ ತೊರೆದು ಉರಗಗಳನ್ನ ರಕ್ಷಿಸೋ ಇವ್ರ ಬದುಕಿಗೂ ಸೂಕ್ತ ನೆಲೆ ಕಲ್ಪಿಸುವ ಕೆಲಸವನ್ನ ಸರಕಾರ ಮಾಡಬೇಕಿದೆ.

    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
    Published by:guruganesh bhat
    First published: