Kalaburagi: ಶರಣ ಬಸವೇಶ್ವರ ಜಾತ್ರೆಯಲ್ಲಿ ಭಕ್ತರ ಜಯಘೋಷ, ಭಕ್ತಿಯ ಪರಾಕಾಷ್ಠೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಂತಾನ ಭಾಗ್ಯ, ಕಂಕಣ ಭಾಗ್ಯ, ಬೇಡಿದನ್ನು ಕರುಣಿಸುವ ಕಲ್ಯಾಣ ನಾಡಿನ ಜನರ ಆರಾಧ್ಯದೈವ. ಮನೆ ದೇವರು ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ಜಾತ್ರೆಯ ಮಹಾರಥೋತ್ಸವದಲ್ಲಿ ಸಹಸ್ರಾರು ಜನರು ನೆರೆದಿದ್ದರು.

  • News18 Kannada
  • 3-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಕಣ್ಣು ಹಾಯಿಸಿದುದ್ದಕ್ಕೂ ಕಿಕ್ಕಿರಿದು ಸೇರಿದ ಭಕ್ತಗಣ. ಇನ್ನೊಂದೆಡೆ ವೈಭವದಿಂದ ನಡೆಯುತ್ತಿರುವ ರಥೋತ್ಸವ. ಜಾತ್ರಾ ಸಂಭ್ರಮಕ್ಕೆ ಮೆರುಗು ನೀಡಿತು ವಿದ್ಯುತ್‌ ದೀಪಗಳ ಅಲಂಕಾರ, ಬೃಹತ್‌ ವೇದಿಕೆ ಮೇಲಿನ ಸಾಂಸ್ಕೃತಿಕ ಕಲರವ.. ಈ ಎಲ್ಲ ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾಯಿತು ನೋಡಿ ಕಲ್ಯಾಣ ಕರ್ನಾಟಕದ (Kalyana Karnataka) ಹೆಬ್ಬಾಗಿಲು ಕಲಬುರಗಿಯ ಮಹಾದಾಸೋಹಿ (Shree Sharana Basaveshwara Temple) ಶ್ರೀ ಶರಣ ಬಸವೇಶ್ವರರ (Sharana Basaveshwara Jatra) ಜಾತ್ರಾ ಮಹೋತ್ಸವ.


    ಯೆಸ್‌, ಕಲ್ಯಾಣ ಕರ್ನಾಟಕದ ಸುಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಕಲಬುರಗಿಯ ಶ್ರೀ ಶರಣ ಬಸವೇಶ್ವರರ ದೇವಸ್ಥಾನದ 201 ನೇ ಜಾತ್ರಾ ಮಹೋತ್ಸವ ಸಡಗರ, ಸಂಭ್ರಮ, ವೈಭವದಿಂದ ಜರುಗಿತು. ಹದಿನೈದು ದಿನಗಳ ಕಾಲ ಜರುಗುವ ಶರಣ ಬಸವೇಶ್ವರರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ, ರಥ ಸಾಗುತ್ತಿದ್ದಂತೆ ಭಕ್ತರು ಖಾರಿಕು, ಬಾಳೆ ಹಣ್ಣು ರಥಕ್ಕೆ ಎಸೆದು ಶರಣನ ಭಕ್ತಿಗೆ ಪಾತ್ರರಾದರು.


    ಅಸಂಖ್ಯಾತ ಭಕ್ತರು ಸಾಕ್ಷಿ
    ಸಂತಾನ ಭಾಗ್ಯ, ಕಂಕಣ ಭಾಗ್ಯ, ಬೇಡಿದನ್ನು ಕರುಣಿಸುವ ಕಲ್ಯಾಣ ನಾಡಿನ ಜನರ ಆರಾಧ್ಯದೈವ. ಮನೆ ದೇವರು ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರ ಜಾತ್ರೆಗೆ ಕಲಬುರಗಿ, ಕಲ್ಯಾಣ ಕರ್ನಾಟಕದ ಭಕ್ತರಷ್ಟೇ ಅಲ್ಲದೇ, ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಜಾತ್ರೆಗೆ ಹರಿದು ಬಂದರು.


    ಭಕ್ತರ ಜಯಘೋಷ
    ದೇವಸ್ಥಾನದ ಅಕ್ಕ ಪಕ್ಕದ ಕಟ್ಟಡಗಳ ಮೇಲೆ ಕುಳಿತು ಅಪಾಯವನ್ನು ಲೆಕ್ಕಿಸದೇ ಭಕ್ತರು ಮಹಾರಥೋತ್ಸವ ಕಣ್ತುಂಬಿಕೊಂಡ್ರು. ಶರಣ ಬಸವೇಶ್ವರ ದೇವಸ್ಥಾನ ಸಂಸ್ಥಾನದ ಪೀಠಾಧಿಪತಿ ಶ್ರೀ ಶಣರ ಬಸಪ್ಪ ಅಪ್ಪಾ ಪರಸು ಬಟ್ಟಲು ಭಕ್ತರತ್ತ ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದ್ರು. ರಥ ಸಾಗುತ್ತಿದ್ದಂತೆ ಭಕ್ತರು ಶರಣಬಸವೇಶ್ವರರ ಜೈಘೋಷ ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು.


    ಇದನ್ನೂ ಓದಿ: Kalaburagi: ಪಿಯುಸಿ ಮಾತ್ರ ಓದಿರೋ ಈ ಮಹಿಳೆ ಭಾರತದ ಮೊದಲ ಮಹಿಳಾ ಸೂಪರ್ ಬಜಾರ್ ಆರಂಭಿಸಿದ್ರು!




    ತನಾರತಿ ಆಕರ್ಷಣೆ
    ದೇವಸ್ಥಾನ ಆವರಣದ ಬಸವಣ್ಣ ದೇವರ ಗರಡಿವರೆಗೆ ಸಾಗಿ ರಥ ವಾಪಸ್ ಮೂಲ ಸ್ಥಾನಕ್ಕೆ ತಲುಪಿತು. 201 ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಈ ವರ್ಷ ವಿಶೇಷವಾಗಿ ರಥೋತ್ಸವ ಮುಕ್ತಾಯವಾಗ್ತಿದ್ದಂತೆ ಕಾಶಿಯಲ್ಲಿ ಗಂಗಾರತಿ ಮಾಡುವಂತೆ ಶ್ರೀ ಶರಣಬಸವೇಶ್ವರರಿಗೆ ತನಾರತಿ, ಶರಣಾರತಿ ಬೆಳಗಲಾಯಿತು.


    ಇದನ್ನೂ ಓದಿ: Kalaburagi: ಹೈ ಹೀಲ್ಡ್ ಚಪ್ಪಲಿ ಧರಿಸಿ ಪುರುಷರ ಕ್ಯಾಟ್ ವಾಕ್!


    ರಥೋತ್ಸವ ನಿಮಿತ್ತ ಉಪವಾಸ ಕೈಗೊಂಡಿದ್ದ ಭಕ್ತರು ರಥೋತ್ಸವ ಜರುಗಿದ ಬಳಿಕ ಫಲಹಾರ ಸೇವಿಸಿ ಶ್ರದ್ದಾ-ಭಕ್ತಿಯಿಂದ ಶರಣನನ್ನ ಜಪಿಸಿದ್ರು. ಒಟ್ಟಿನಲ್ಲಿ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸದ ಮಹಾರಥೋತ್ಸವ ಭಕ್ತಿ ಪೂರ್ವಕವಾಗಿ ವಿಜೃಂಭಣೆಯಿಂದ ಜರಗಿತು.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: