• Home
  • »
  • News
  • »
  • kalburgi
  • »
  • Sharana Basaveshwara Temple: ಶರಣಬಸಪ್ಪ-ದೊಡ್ಡಪ್ಪ ಅಪ್ಪ ಜೋಡು ಮೂರ್ತಿಯ ಪವಿತ್ರ ದೇಗುಲ, ಅರಸಿ ಬಂದವರಿಗೆ ಆಶೀರ್ವದಿಸುವ ಕ್ಷೇತ್ರ

Sharana Basaveshwara Temple: ಶರಣಬಸಪ್ಪ-ದೊಡ್ಡಪ್ಪ ಅಪ್ಪ ಜೋಡು ಮೂರ್ತಿಯ ಪವಿತ್ರ ದೇಗುಲ, ಅರಸಿ ಬಂದವರಿಗೆ ಆಶೀರ್ವದಿಸುವ ಕ್ಷೇತ್ರ

X
ಇಲ್ಲಿ ದರ್ಶನ ಮಾಡಿ

"ಇಲ್ಲಿ ದರ್ಶನ ಮಾಡಿ"

ಆದಿ ದೊಡ್ಡಪ್ಪ ಮತ್ತು ನೀಲಮ್ಮ ದಂಪತಿಗಳ ದಾಸೋಹಕ್ಕೆ ತಲೆದೂಗಿ ಶರಣಬಸವೇಶ್ವರರು ಕಲಬುರಗಿಯ ಅವರ ನಿವಾಸದಲ್ಲಿಯೇ ನೆಲೆಸಿದರು. ಇಲ್ಲಿದೆ ಈ ಪವಿತ್ರ ಕ್ಷೇತ್ರದ ವಿಡಿಯೋ.

  • News18 Kannada
  • Last Updated :
  • Gulbarga, India
  • Share this:

    ಭಾವೈಕ್ಯತೆಯ ತಾಣವಿದು. ದಾಸೋಹದ ಮೂಲವಿದು. ಅರಸಿ ಬಂದವರ ಆಶೀರ್ವದಿಸುವ ಕ್ಷೇತ್ರವಿದು. ಇಡೀ ನಾಡಿಗೇ ಮಾದರಿ ಈ ಜೋಡು ಮೂರ್ತಿಯ ದೇಗುಲ. ಇಲ್ಲಿನ ಅಲಂಕಾರ, ರಚನೆ ಕಣ್ಮನ ಸೆಳೆದರೆ, ಇಲ್ಲಿನ ಸೇವೆ, ಪೂಜೆ ಪುನಸ್ಕಾರಗಳು ಮನಸ್ಸಿಗೆ ಮುದ ನೀಡುತ್ತೆ. ಹಾಗಿದ್ರೆ ಯಾವುದು ಇದು ಪುಣ್ಯ ತಾಣ ಅಂತೀರಾ? ಅದುವೇ ಕಲಬುರಗಿಯ (Temple's In Kalaburagi)  ಶರಣ ಬಸವೇಶ್ವರ ದೇಗುಲ. ಯೆಸ್, ದಾಸೋಹದ ಮೂಲಕವೇ ಶರಣಬಸವೇಶ್ವರರು ಕೋಟ್ಯಂತರ ಜನರ ಆರಾಧ್ಯ ದೈವ. ಹೈದರಾಬಾದ್ ಕರ್ನಾಟಕವಲ್ಲದೇ (Hyderabad Karnataka) ದೇಶಾದ್ಯಂತ 1100 ದೇವಸ್ಥಾನಗಳನ್ನು ಹೊಂದಿದ ಕೀರ್ತಿ ಶರಣಬಸವೇಶ್ವರರದ್ದು (Sharana Basaveshwara). ಕೆಲವರಿಗೆ ಸಂತಾನ ಕರುಣಿಸಿದರೆ, ಮತ್ತೆ ಕೆಲವರಿಗೆ ಖಾಯಿಲೆಗಳನ್ನು ಗುಣಮುಖ ಮಾಡಿದ ಮಹಾಮಹಿಮ. ಮಹಾ ದಾಸೋಹಿ, ದಿವ್ಯ ಜ್ಞಾನಿ, ಪವಾಡ ಪುರುಷ ಎಂದೇ ಪ್ರಸಿದ್ಧರಾದವರು.


    ಆದಿ ದೊಡ್ಡಪ್ಪ ಮತ್ತು ನೀಲಮ್ಮ ದಂಪತಿಗಳ ದಾಸೋಹವೇ ಹಾಗಿತ್ತು
    ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಜನಿಸಿದ ಶರಣಬಸವೇಶ್ವರರು ಕಲಬುರಗಿಯನ್ನು ತಮ್ಮ ತಪೋಭೂಮಿಯಾಗಿಸಿಕೊಂಡರು. ಕಲಬುರಗಿಯಲ್ಲಿ ಆದಿ ದೊಡ್ಡಪ್ಪ ಶರಣರ ಮನೆಯಲ್ಲಿ ನಡೆಯುತ್ತಿದ್ದ ದಾಸೋಹಾನುಸಂಧಾನದಲ್ಲಿ ಕಲ್ಯಾಣ ಶರಣರ ದಾಸೋಹ ಪರಂಪರೆ ಕಂಡುಕೊಂಡರು. ಆದಿ ದೊಡ್ಡಪ್ಪ ಮತ್ತು ನೀಲಮ್ಮ ದಂಪತಿಗಳ ದಾಸೋಹಕ್ಕೆ ತಲೆದೂಗಿ ಶರಣಬಸವೇಶ್ವರರು ಕಲಬುರಗಿಯ ಅವರ ನಿವಾಸದಲ್ಲಿಯೇ ನೆಲೆಸಿದರು.


    ಶರಣಬಸವೇಶ್ವರರ ದೇವಸ್ಥಾನಕ್ಕೆ ಅಡಿಗಲ್ಲು
    ಪರಹಿತದಲ್ಲಿಯೇ ಪರಮಾತ್ಮನನ್ನು ಕಂಡ ಶರಣಬಸವೇಶ್ವರರು 1882 ರಲ್ಲಿ ಲಿಂಗೈಕ್ಯರಾದರು. ನಂತರದಲ್ಲಿ ಶರಣಬಸವೇಶ್ವರರ ದಾಸೋಹ ಕಾರ್ಯವನ್ನು ಆದಿ ದೊಡ್ಡಪ್ಪ ಶರಣರು ಮುನ್ನಡೆಸಿದರು. ಅವರು 24 ವರ್ಷಗಳ ಕಾಲ ಶರಣಬಸವೇಶ್ವರರ ಜೀವನ ಮೌಲ್ಯಗಳನ್ನು ಜನತೆಗೆ ಪ್ರಚಾರ ಮಾಡಿದರು. ಅವರ ಅವಧಿಯಲ್ಲಿಯೇ ಶರಣಬಸವೇಶ್ವರರ ದೇವಸ್ಥಾನಕ್ಕೆ ಅಡಿಗಲ್ಲು ಹಾಕಲಾಯಿತು.


    ಅದೇ ವಂಶಸ್ಥರೇ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾಗಿ ದಾಸೋಹ ಕಾರ್ಯ ಮುಂದುವರೆಸಿದರು. ಶರಣಬಸವೇಶ್ವರರ ಸಮಾಧಿಯ ಮೇಲೆಯೇ ದೇವಸ್ಥಾನ ನಿರ್ಮಿಸಲಾಗಿದೆ. ಅವರ ಪುಣ್ಯತಿಥಿಯ ದಿನದಂದು ಮಹಾದಾಸೋಹಿಯ ಯಾತ್ರಾ ಮಹೋತ್ಸವ ನಡೆಸಲಾಗುತ್ತೆ.


    ಕಲಬುರಗಿಗೆ ಬಂದದ್ದೂ ಆಕಸ್ಮಿಕ
    ಜೇವರ್ಗಿ ತಾಲೂಕಿನ ಅರಳಗುಂಡಗಿಯಲ್ಲಿ ಹುಟ್ಟಿದರೂ ಶರಣಬಸವೇಶ್ವರರು ಪ್ರಸಿದ್ಧಿಗೆ ಬಂದದ್ದು ಕಲಬುರಗಿಗೆ ಬಂದ ನಂತರ. ಅವರು ಕಲಬುರಗಿಗೆ ಬಂದದ್ದೂ ಆಕಸ್ಮಿಕ. ಬಸವಕಲ್ಯಾಣಕ್ಕೆ ಹೊರಟ ಶರಣಬಸವೇಶ್ವರರು ನೆಲೆ ನಿಂತದ್ದು ಮಾತ್ರ ಕಲಬುರಗಿಯಲ್ಲಿ.


    ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!


    ಕನಸು ಬಿತ್ತು ನೋಡಿ
    ಆದಿ ದೊಡ್ಡಪ್ಪ ಅಪ್ಪ ಅವರ ತಾಯಿ ಕನಸಿನಲ್ಲಿ ಬಂದು ಇಂದು ನಿನಗೆ ದೊಡ್ಡ ವ್ಯಕ್ತಿಯ ದರ್ಶನವಾಗುತ್ತದೆ. ಅವರನ್ನು ಇಲ್ಲಿಗೆ ಕರೆದುಕೊಂಡು ಬಾ ಎಂದು ಸೂಚನೆ ನೀಡಿದ್ರಂತೆ. ಅದರ ಪ್ರಕಾರ ದೊಡ್ಡಪ್ಪ ಅಪ್ಪ ಅವರು ಕುದುರೆ ಹತ್ತಿ ಫರತಾಬಾದ್ ಕಡೆ ಪ್ರಯಾಣ ಮಾಡುತ್ತಿದ್ದ ವೇಳೆ ಶರಣಬಸವೇಶ್ವರರ ಮುಖಾಮುಖಿಯಾಗುತ್ತದೆ.


    ಕನಸಿನಲ್ಲಿ ಹೇಳಿದ ವ್ಯಕ್ತಿ!
    ತಾಯಿ ಕನಸಿನಲ್ಲಿ ಹೇಳಿದ ಆ ಮಹಾನ್ ವ್ಯಕ್ತಿ ಇವರೇ ಇರಬೇಕೆಂದುಕೊಳ್ಳುವ ಆದಿ ದೊಡ್ಡಪ್ಪ ಅಪ್ಪ ಅವರು, ಶರಣಬಸವೇಶ್ವರರನ್ನು ಕಲಬುರಗಿಗೆ ಕರೆತರುತ್ತಾರೆ. ಕಲಬುರಗಿಗೆ ಬಂದು ಆದಿ ದೊಡ್ಡಪ್ಪ ಶರಣರ ದಾಸೋಹ ಕೈಂಕರ್ಯಗಳನ್ನು ನೋಡಿದ ಶರಣಬಸವೇಶ್ವರರು ಇಲ್ಲಿಯೇ ನೆಲೆ ನಿಲ್ಲಲು ಮತ್ತೊಂದು ಕಾರಣವಿದೆ. ಹೀಗೆ ಇಬ್ಬರು ಮಹಾನ್ ವ್ಯಕ್ತಿಗಳು ದೈವತ್ವಕ್ಕೇರಿದ್ದಾರೆ. ಶರಣಬಸಪ್ಪ ಮತ್ತು ದೊಡ್ಡಪ್ಪ ಅಪ್ಪ ಜೋಡು ಮೂರ್ತಿಗಳಾಗಿ ನೆಲೆ ನಿಂತು ಜನರನ್ನು ಹರಸುತ್ತಿದ್ದಾರೆ.


    ಇದನ್ನೂ ಓದಿ: Success Story: ಭಾರೀ ಫೇಮಸ್ ಈ ಇಡ್ಲಿ ಮಲ್ಲಪ್ಪ! ಇಲ್ಲಿದೆ ನೋಡಿ ಇವರ ಬ್ಯುಸಿನೆಸ್ ಗುಟ್ಟು


    ಹೀಗೆ ಕಲಬುರಗಿಯ ಶರಣಬಸವೇಶ್ವರರ ಸೇವೆ ಆಧುನಿಕ ದಿನಗಳಿಗೆ ಪೂರಕವಾಗಿ ಶಿಕ್ಷಣ, ಸಮಾಜಸೇವೆ ಕ್ಷೇತ್ರಕ್ಕೂ ವ್ಯಾಪಿಸಿದೆ. ಅನ್ನ ದಾಸೋಹದ ಮೂಲಕ ಹಸಿದ ಹೊಟ್ಟೆಗಳನ್ನ ತಣಿಸುವ ಕೆಲಸ ಮಾಡ್ತಿರೋ ಕಲಬುರಗಿಯ ಈ ಕ್ಷೇತ್ರವನ್ನ ಒಮ್ಮೆ ನೀವೂ ದರ್ಶನ ಮಾಡಬಹುದು ನೋಡಿ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: