ಕಲಬುರಗಿ: ಹಾಳಾಗಿ ಮೂಲೆ ಸೇರಿರುವ ಬೋಟ್ಗಳು. ಮುರಿದು ಬಿದ್ದಿರುವ ಮಕ್ಕಳ ಆಟಿಕೆಗಳು. ವಿಶಾಲವಾದ ಕೆರೆ ಹೊಂದಿದ್ರೂ ನಿರ್ವಹಣೆ ಇಲ್ಲದೇ ಹೋಗಿರೋ ವ್ಯವಸ್ಥೆ. ಯೆಸ್, ಇದು ಒಂದು ಕಾಲದ ಕಲ್ಯಾಣ ನಾಡಿನ (Kalyana Karnataka) ಪ್ರಸಿದ್ಧ ಕೆರೆಯ (Lake) ಅವಸ್ಥೆ. ಇದೀಗ ಮತ್ತೆ ಜೀವಕಳೆ ಬಂದಿದ್ದು, ಹೊಸ ರೂಪ ಪಡೆಯಲು ಸಿದ್ಧವಾಗಿ ನಿಂತಿದೆ.
ಒಂದು ಕಾಲಕ್ಕೆ ಕಲಬುರಗಿಯ ಶರಣಬಸವೇಶ್ವರ ಅಪ್ಪನ ಕೆರೆ ಅಂದ್ರೆ ವೀಕೆಂಡ್ ಹಾಗೂ ರಜಾ ದಿನಗಳ ಫೇವರಿಟ್ ಸ್ಪಾಟ್ ಆಗಿತ್ತು. ಆದ್ರೆ ಕೊರೊನಾ ನಂತರ ಸರಿಯಾದ ನಿರ್ವಹಣೆ ಇಲ್ಲದೇ ಕೆರೆಯು ನೆನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ಈ ಕೆರೆಗೆ ಮರು ಜೀವ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಮೂಲಕ ನಿರ್ಜೀವ ಸ್ಥಿತಿಗೆ ತಲುಪಿದ್ದ ಐತಿಹಾಸಿಕ ಶರಣಬಸವೇಶ್ವರ ಕೆರೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಜೀವಕಳೆ ಪಡೆಯಲಿದೆ.
ನೆನೆಗುದಿಗೆ ಬಿದ್ದಿದ್ದ ಕೆರೆ
ಇಡೀ ಕಲಬುರಗಿಯ ಸೌಂದರ್ಯ ನಿಧಿ ಎನಿಸಿಕೊಂಡ ಶರಣಬಸವೇಶ್ವರ ಕೆರೆ ಜಿಲ್ಲೆಯ ಏಕೈಕ ದೊಡ್ಡ ಕೆರೆ ಎಂದು ಗುರುತಿಸಿಕೊಂಡಿದೆ. ದಶಕದ ಇತಿಹಾಸ ಹೊಂದಿರುವ ಈ ಕೆರೆಯ ಚಿತ್ರಣ ಬದಲಿಸಲು ಅಧಿಕಾರಿಗಳು ಪಣ ತೊಟ್ಟಿದ್ದಾರೆ.
ಇದನ್ನೂ ಓದಿ: Kalaburagi: ಟ್ರಾಫಿಕ್ ಸಮಸ್ಯೆ ಟಾಟಾ ಹೇಳಲು ಕಲಬುರಗಿ ರೆಡಿ!
ಸರ್ಕಾರದಿಂದ ಅಪ್ಪನ ಕೆರೆ ಅಭಿವೃದ್ಧಿಗೆ ಸೂಚನೆ ಬಂದ ಹಿನ್ನೆಲೆ ಮಹಾನಗರ ಪಾಲಿಕೆ ಕಮೀಷನರ್ ಭುವನೇಶ ಪಾಟೀಲ್ ಅವರು ಉದ್ಯಾನವನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಕೆರೆ ಅಭಿವೃದ್ಧಿ ಜೊತೆಗೆ ಬೋಟಿಂಗ್ ಸೇವೆಯೂ ಮರು ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Temple: ಇಲ್ಲಿ ಮದ್ವೆ ಆಗ್ಬೇಕು ಅಂದ್ರೆ ದೇವಿ ಅಪ್ಪಣೆ ಬೇಕೇ ಬೇಕು!
ಒಟ್ಟಿನಲ್ಲಿ ಗರ ಬಡಿದ ಸ್ಥಿತಿಯಲ್ಲಿದ್ದ ಕಲಬುರಗಿಯ ಶರಣಬಸವೇಶ್ವರ ಕೆರೆ ಹಾಗೂ ಉದ್ಯಾನವನಕ್ಕೆ ಮರು ಜೀವ ನೀಡಲು ಪಾಲಿಕೆ ಮುಂದಾಗಿದ್ದು ಬಿಸಿಲೂರಿನ ಜನರಲ್ಲಿ ಸಂತಸ ಮೂಡಿಸಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ