• Home
 • »
 • News
 • »
 • kalburgi
 • »
 • Kalaburagi: ಮಹಿಳೆಯರು ಸ್ವಯಂ ಉದ್ಯೋಗ ಶುರುಮಾಡಲು ಇಲ್ಲಿದೆ ಸುವರ್ಣಾವಕಾಶ!

Kalaburagi: ಮಹಿಳೆಯರು ಸ್ವಯಂ ಉದ್ಯೋಗ ಶುರುಮಾಡಲು ಇಲ್ಲಿದೆ ಸುವರ್ಣಾವಕಾಶ!

ನೀವೂ ಟ್ರೇನಿಂಗ್ ಪಡೆಯಿರಿ

ನೀವೂ ಟ್ರೇನಿಂಗ್ ಪಡೆಯಿರಿ

ಸ್ವಯಂ ಉದ್ಯೋಗ ಪ್ರಾರಂಭಿಸಲು ಇಲ್ಲಿದೆ ಒಂದೊಳ್ಳೆ ಅವಕಾಶ ಇಲ್ಲಿದೆ. ಈ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ ಸುವರ್ಣವಕಾಶ ಇಲ್ಲಿದೆ. ಎಸ್ಎಸ್​ಎಲ್​ಸಿ  ಉತ್ತೀರ್ಣರಾದ (SSLC Students) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗ ಪಡೆಯಬಹುದಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಕಲಬುರಗಿ (Kalaburagi News) ಇವುಗಳ ಸಂಯುಕ್ತಾಶ್ರಯದಲ್ಲಿ ತರಬೇತಿ (Training) ನೀಡಲಾಗುತ್ತಿದ್ದು, ಸ್ವಯಂ ಉದ್ಯೋಗ ಪ್ರಾರಂಭಿಸಲು ಹೊಂದಿರುವ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದಾಗಿದೆ.


  ಯಾರೆಲ್ಲ ಅರ್ಜಿ ಸಲ್ಲಿಸಬಹುದು?
  ಆಸಕ್ತಿಯುಳ್ಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 20 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಕನಿಷ್ಠ ಎಸ್. ಎಸ್. ಎಲ್. ಸಿ. ಉತ್ತೀರ್ಣ ಹಾಗೂ ಅನುತ್ತೀರ್ಣರಾಗಿರಬೇಕು.


  ಇದನ್ನೂ ಓದಿ: Anubhava Mantapa: ಪಾರ್ಲಿಮೆಂಟಲ್ಲಿ ಅನುಭವ ಮಂಟಪ! ಕಲ್ಯಾಣ ಕರ್ನಾಟಕದ ಕಲಾವಿದರು ಹೀಗಂತಾರೆ


  ಸಂದರ್ಶದ ಸ್ಥಳ ಇಲ್ಲಿದೆ
  ಅಭ್ಯರ್ಥಿಗಳು 2022ರ ನವೆಂಬರ್ 7 ರಂದು ಬೆಳಗ್ಗೆ 11 ಗಂಟೆಗೆ ಜಂಟಿ ನಿರ್ದೇಶಕರು, ಸಿಡಾಕ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗೀಯ ಕಛೇರಿ ಸಿಓಇ ಕಟ್ಟಡ, ಸರ್ಕಾರಿ ಬಾಲಕರ ಐಟಿಐ ಆವರಣ, ಎಂ. ಎಸ್. ಕೆ. ಮಿಲ್ ರಸ್ತೆ, ಎಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.


  ಇದನ್ನೂ ಓದಿ:Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!


  ಲಗತ್ತಿಸಬೇಕಾದ ದಾಖಲಾತಿಗಳು ವಿವರ ಹೀಗಿದೆ ನೋಡಿ
  ಸಂದರ್ಶನಕ್ಕೆ ಹಾಜರಾಗ ಬಯಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ವಿದ್ಯಾಭ್ಯಾಸದ ಅಂಕಪಟ್ಟಿ ಪ್ರತಿಗಳನ್ನು ಹಾಗೂ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಅಥವಾ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 91-08972833ಗೆ ಸಂಪರ್ಕಿಸಲು ಕೋರಲಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: