• Home
  • »
  • News
  • »
  • kalburgi
  • »
  • Toor Dal: ಈ ತಳಿಯ ತೊಗರಿ ಬೆಳೆದರೆ ಪೊಗದಸ್ತು ಇಳುವರಿ ಪಕ್ಕಾ! ಇದು ವಿಜ್ಞಾನಿಗಳ ಸಲಹೆ

Toor Dal: ಈ ತಳಿಯ ತೊಗರಿ ಬೆಳೆದರೆ ಪೊಗದಸ್ತು ಇಳುವರಿ ಪಕ್ಕಾ! ಇದು ವಿಜ್ಞಾನಿಗಳ ಸಲಹೆ

ಇಲ್ಲಿದೆ ನೋಡಿ ವಿಡಿಯೋ

"ಇಲ್ಲಿದೆ ನೋಡಿ ವಿಡಿಯೋ"

ಕೃಷಿ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿ ಅದ್ರಲ್ಲಿ ಸಕ್ಸಸ್ ಕೂಡ ಆಗಿದ್ದಾರೆ. ಅಲ್ಲದೇ ರೈತರಿಗೆ ಈ ಮಾದರಿಯ ವ್ಯವಸಾಯ ಅನುಸರಿಸೋಕೆ ಸಲಹೆ ನೀಡಿದ್ದಾರೆ.

  • Share this:

    ಕಲಬುರಗಿ ಅಂದ್ರೇನೆ ತೊಗರಿಯ ಕಣಜ. ಇಲ್ಲಿರೋ ಶೇಕಡಾ 80 ರಷ್ಟು ರೈತರ ಜೀವನಾಡಿಯೇ ಈ ತೊಗರಿಬೇಳೆ. ಕಲಬುರಗಿ ರೈತರ ಕೃಷಿ ಉತ್ಸಾಹಕ್ಕೆ ವಿಜ್ಞಾನಿಗಳು ನೀಡಿದ ಸಲಹೆ ಕೈ ಹಿಡಿದಿದೆ. ಈಗಂತೂ ಕಲಬುರಗಿಯಲ್ಲಿ (Kalaburagi News) ವರ್ಷದ ಎಲ್ಲಾ ಟೈಮಲ್ಲೂ ತೊಗರಿಬೇಳೆ ಹಚ್ಚಹಸುರಾಗುವಂತಾಗಿದೆ. ಹೀಗೆ ಹಚ್ಚಹಸುರಾಗಿರೋ ತೊಗರಿ ಬೇಳೆ ಬೆಳೆಯುವಲ್ಲಿ ರೈತರಿಗೆ ಕೃಷಿ ವಿಜ್ಞಾನಿಗಳು (Agriculture Scientists) ಕೊಡುಗೆ ಮಹತ್ವದ್ದು. ಪ್ರತಿ ಬಾರಿಯೂ ಹೆಚ್ಚಿನ ಮಳೆ ಹಾಗೂ ರೋಗಬಾಧೆಯಿಂದ ಕಲಬುರಗಿಯ ರೈತರು (Kalaburagi Farmers) ಬೆಳೆದ ಬೆಳೆಗೆ ಉತ್ತಮ ಇಳುವರಿ ಬಾರದೆ ಬೆಳೆ ಸಂಪೂರ್ಣ ನಾಶವಾಗಿ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗುತ್ತಿತ್ತು.


    ಇದನ್ನು ಮನಗಂಡ ಕೃಷಿ ವಿಜ್ಞಾನಿಗಳು ಇದನ್ನ ತಡೆಗಟ್ಟೋಕೆ ಹೊಸ ಪ್ರಯೋಗ ನಡೆಸಿ ಅದ್ರಲ್ಲಿ ಸಕ್ಸಸ್ ಕೂಡ ಆಗಿದ್ದಾರೆ. ಅಲ್ಲದೇ ರೈತರಿಗೆ ಅದೇ ಮಾದರಿಯ ವ್ಯವಸಾಯ ಅನುಸರಿಸೋಕೆ ಸಲಹೆ ನೀಡಿದ್ದಾರೆ.


    ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


    ಬೋದು ಸಾಲು ಪದ್ಧತಿ ಅನುಸರಿಸಬೇಕಂತೆ
    ಅತಿ ಹೆಚ್ಚು ಮಳೆಯಿಂದಾಗಿ ಜಮೀನಿನಲ್ಲಿ ಶೇಖರಣೆಗೊಂಡ ನೀರು ತೊಗರಿ ಬೆಳೆ ನಾಶಕ್ಕೆ ಸಹಜವಾಗಿ ಕಾರಣವಾಗುತ್ತದೆ. ಜೊತೆಗೆ ನೆಟೆರೋಗ ಹಾಗೂ ಮಚ್ಚೆ ರೋಗದಂಥಾ ರೋಗಗಳು ಆವರಿಸಿ ಬೆಳೆ ನೆಲಕಚ್ಚುತ್ತವೆ. ಹೀಗಾಗಿ ರೈತರು ಬೋದು ಸಾಲು ಪದ್ಧತಿಯಲ್ಲಿ ಬೆಳೆಯನ್ನ ನಾಟಿ ಮಾಡಿದರೆ ನೀರು ಶೇಖರಣೆಯನ್ನು ತಡೆಗಟ್ಟಬಹುದು ಅನ್ನೋದು ಕೃಷಿ ವಿಜ್ಞಾನಿಗಳ ಪ್ಲ್ಯಾನ್.


    ಇದನ್ನೂ ಓದಿ: Kalaburagi Cancer Patients: ಕಲಬುರಗಿಯಲ್ಲಿ ಕ್ಯಾನ್ಸರ್ ಅಬ್ಬರ; 6 ತಿಂಗಳಲ್ಲಿ 2,370 ಕೇಸ್


    ಈ ತಳಿಯ ತೊಗರಿಯನ್ನು ಬೆಳೆದರೆ ಒಳ್ಳೆಯದು
    ಸಾಮಾನ್ಯವಾಗಿ ರೈತರು ಪ್ರತಿವರ್ಷ ವಿವಿಧ ತಳಿಯ ತೊಗರಿ ಬೆಳೆಯನ್ನ ನಾಟಿ ಮಾಡುತ್ತಾರೆ. ಕೆಲ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ರೋಗ ಬಾಧಿಸುತ್ತದೆ. ಆದ್ರೆ ರೈತರು ಜಿಆರ್​ಜಿ 811 ಮತ್ತು ಜಿಆರ್​ಜಿ 152 ತಳಿಯ ತೊಗರಿ ಬೆಳೆ ನಾಟಿ ಮಾಡಿದರೆ ಉತ್ತಮ ಇಳುವರಿ ಸಿಗೋದು ಪಕ್ಕಾವಂತೆ. ಸದ್ಯ ಕಲಬುರಗಿ ಕೃಷಿಕರಂತೂ ಈ ತೊಗರಿ ಸಂರಕ್ಷಣಾ ಪ್ರಯೋಗದಿಂದ ಖುಷಿಯಾಗಿದ್ದಾರೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: