Kalaburagi: ಮರವೇ ದವಾಖಾನೆ! ಕಲಬುರಗಿಯಲ್ಲೊಂದು ಸಂಜೀವಿನಿ ಮರ!

ಕಲಬುರಗಿ ಜಿಲ್ಲೆಯಲ್ಲಿರುವ ಮರವೊಂದು ರೋಗಗಳಿಗೆ ರಾಮಬಾಣವೆನಿಸಿಕೊಂಡಿದೆ. ಬರೋಬ್ಬರಿ ಎಂಟು ಶತಮಾನಗಳನ್ನು ಕಂಡಿರುವ ಈ ಮರವೇ ಗ್ರಾಮಸ್ಥರ ಪಾಲಿನ ದವಾಖಾನೆ ಕೂಡಾ. ಅಷ್ಟರ ಮಟ್ಟಿಗೆ ರೋಗಶಮನಗೊಳಿಸುವ ಸಾಮರ್ಥ್ಯ ಈ ಮರಕ್ಕಿದೆಯಂತೆ!

ಯಾವ ಮರವಿದು?

"ಯಾವ ಮರವಿದು?"

 • Share this:
  ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ 12ನೇ ಶತಮಾನದ ಅಪರೂಪದ ಔಷಧಿ ಮರವೊಂದಿದೆ. ಆ ಮರದ ಬೇರು, ಕಾಂಡ, ಎಲೆ ಸೇರಿದಂತೆ ಎಲ್ಲವೂ ಔಷಧಿ ಗುಣವನ್ನು ಹೊಂದಿದೆ. ಅದು ಸರ್ವರೋಗವನ್ನು ಗುಣಪಡಿಸುವ ಸಂಜೀವಿನಿಯಾಗಿದೆ.  ಇದೊಂದು ಸಾಮಾನ್ಯ ಮರಗಳಂತೆ ಕಂಡ್ರೂ ಸಾಕಷ್ಟು ಮಹತ್ವ ಹಾಗೂ ಅಪರೂಪದ ಮರವಾಗಿದೆ. ಈ ಮರದ ಬೇರು, ಎಲೆ, ಕಾಂಡ ಸೇರಿದಂತೆ ಎಲ್ಲವೂ ಔಷಧಿ ಗುಣಗಳನ್ನು ಹೊಂದಿದೆ.  ಆ ಮರದ ಹೆಸರು ಬ್ರಹ್ಮಲೇಖಾ (Brahmalekha) ಅಂತ. ಇಂಗ್ಲೀಷ್ ಭಾಷೆಯಲ್ಲಿ ಲಂಡನ್ ಟ್ರೀ ಮತ್ತು ಅಡಾನ್ ಸೋನಿಯಾ ಡಿಜಿಟೇಟ್ ಮರ ಅಂತ ಕರೆಯುತ್ತಾರೆ. ಆಫ್ರಿಕನ್ ಮೂಲದ ಸಸ್ಯ ಇದಾಗಿದೆ. ಇಂತಹದೊಂದು ಅಪರೂಪದಲ್ಲಿಯೇ ಅಪರೂಪವಾದ ಮರ ಇರೋದು ಕಲಬುರಗಿ ಜಿಲ್ಲೆಯ (Karaburagi) ಶಹಾಬಾದ್ ತಾಲೂಕಿನಲ್ಲಿ.

  ಐತಿಹಾಸಿಕವಾಗಿ ಪ್ರಸಿದ್ದಿ ಹೊಂದಿರುವ ಮರತೂರ ಗ್ರಾಮದಲ್ಲಿ. ಇಲ್ಲಿಯ ಶ್ರೀ ಲಕ್ಷ್ಮೀ ದೇವಸ್ಥಾನದ ಬಳಿ ಈ ಮರ ಇದೆ. ಇದು 12ನೇ ಶತಮಾನದ ಮರ ಎಂದು ಸಂಶೋಧಕರು ಹೇಳ್ತಾರೆ.

  ಕಲಿಯುಗದ ಕಲ್ಪವೃಕ್ಷ
  ಬ್ರಹ್ಮಲೇಖಾ ಮರ ಔಷಧಿ ಗುಣ ಹೊಂದಿದ್ದು ಎಲ್ಲ ರೋಗಗಳನ್ನು ಗುಣಪಡಿಸುವ ಕಲ್ಪವೃಕ್ಷವಾಗಿದೆ. ಈ ಮರದ ಎಲೆ, ಕಾಂಡ, ಬೇರು, ಕಾಯಿ, ಬೀಜ ಸೇರಿದಂತೆ ಪ್ರತಿಯೊಂದು ಕೂಡ ಔಷಧಿ ಗುಣವನ್ನು ಹೊಂದಿದೆ. ಹೀಗಾಗಿ ಈ ಮರಕ್ಕೆ ‘ಸಂಜೀವಿನ ಮರ‘ ಎಂತಲೂ ಕೂಡ ಕರೆಯುತ್ತಾರೆ.

  ಈ ಮರ ಇಲ್ಲಿ ಮಾತ್ರ ಕಂಡು ಬರುತ್ತೆ
  ಅಷ್ಟಕ್ಕೂ ಈ ಮರ ಇಡೀ ರಾಜ್ಯದಲ್ಲಿ ಕೇವಲ ನಾಲ್ಕೇ ನಾಲ್ಕು ಸ್ಥಳಗಳಲ್ಲಿ ಕಂಡು ಬರುತ್ತದೆ. ಅದು ಬೆಂಗಳೂರಿನ ಲಾಲಬಾಗ, ವಿಜಯಪೂರ, ಹಾವೇರಿ ಮತ್ತು ಕಲಬುರಗಿಯಲ್ಲಿ. ಅಲ್ಲದೇ ಸಾಕಷ್ಟು ಐತಿಹಾಸಿಕವಾಗಿಯೂ ಈ ಮರ ಮಹತ್ವ ಪಡೆದುಕೊಂಡಿದೆ ಎನ್ನೋ ಅಭಿಪ್ರಾಯ ಸಸ್ಯ ಶಾಸ್ತ್ರಜ್ಞರದ್ದು.

  Martur
  ಮರ ನೋಡಲು ಹೀಗೆ ಬನ್ನಿ ( ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಬ್ರಹ್ಮಲೇಖ ಮೂಲ ಇದುವೇ?
  ಆಫ್ರಿಕನ್ ದೇಶದ ಈ ಸಸ್ಯ ಕಲಬುರಗಿ ಜಿಲ್ಲೆಗೆ ಬಂದಿರುವ ಕುರಿತು ಸಾಕಷ್ಟು ಇತಿಹಾಸಗಳಿವೆ. 12ನೇ ಶತಮಾನದಲ್ಲಿ ಐತಿಹಾಸಿಕವಾಗಿ ಪ್ರಸಿದ್ದವಾಗಿರುವಂತೆ ಮರತೂರ ಗ್ರಾಮ ಪ್ರಮುಖ ವ್ಯಾಪಾರ ಕೇಂದ್ರವೂ ಆಗಿತ್ತಂತೆ. ಇಲ್ಲಿಗೆ ಆಗ ವಿದೇಶಿಗರು ವ್ಯಾಪಾರಸ್ಥರಕ್ಕಾಗಿ ಇಲ್ಲಿಗೆ ಬಂದು ಹೋಗುತ್ತಿದ್ದಂತೆ. ಈ ಸಸ್ಯ ಔಷಧಿ ಸಸ್ಯ ಆಗಿದ್ರಿಂದ ಅದನ್ನು ಆಫ್ರಿಕಾ ಮೂಲದ ಒರ್ವ ವ್ಯಾಪಾರಿ ಇಲ್ಲಿ ನೆಟ್ಟು ಹೋಗಿದ್ದಾನಂತೆ. ಅದು ಈಗ ಬೆಳೆದು ನಿಂತಿದೆ.

  ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

  ಸಂಜೀವಿನಿ ಕುರಿತು ಅಧ್ಯಯನ
  ಇನ್ನು ಎಂತಹದ್ದೇ ಗಾಯಗಳಾದ್ರೂ ನೋವಿದ್ರೂ ಈ ಮರದ ಕಾಯಿಯ ರಸ ಹಚ್ಚಿದ್ರೇ ಮಾಯವಾಗುತ್ತದೆ. ಜ್ವರ-ತಲೆನೋವು ಸೇರಿದಂತೆ ನಾನಾ ರೋಗಗಳು ಕ್ಷಣ ಮಾತ್ರದಲ್ಲಿಯೇ ಕಡಿಮೆ ಆಗುತ್ತವೆ. ಹೀಗೆ, ಒಂದಲ್ಲ,ಎರಡಲ್ಲ.. ಇಡೀ ಮರವೇ ಸರ್ವರೋಗಕ್ಕೂ ಮದ್ದಾಗಿದೆ. ಇನ್ನು ಈ ಮರದ ಬಗ್ಗೆ ನಾನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದಾರೆ. ಸಾಕಷ್ಟು ಜನ ಸಂಶೋಧಕರು ಭೇಟಿ ನೀಡುತ್ತಿದ್ದಾರೆ ಎನ್ನೋದು ಸ್ಥಳೀಯರ ಹೇಳಿಕೆ.

  ಇದನ್ನೂ ಓದಿ: Kamalapur Red Banana: ಕಮಲಾಪುರದ ಕೆಂಪುಬಾಳೆ! ತಿಂದರೆ ತಿಂತಾನೇ ಇರ್ತೀರಿ, ಅಷ್ಟು ರುಚಿ!

  800 ವರ್ಷಗಳ ಇತಿಹಾಸ
  ಇನ್ನು 800ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರೋ ಮರ ಇದಾಗಿದ್ದು ಇನ್ನೂ ಮುಪ್ಪಾಗಿಲ್ಲ, ಪ್ರತಿವರ್ಷ ಎಲೆಗಳು ಉದುರಿ; ಮತ್ತೇ ಚಿಗುರುತ್ತವೆ. ಈ ಹಿಂದೆ ರಾಜ್ಯದಲ್ಲಿ ಇಂತಹ ಮರಗಳು ಸಾಕಷ್ಟಿದ್ವು. ಆದ್ರೆ, ಈಗ ಸಿಗೋದೇ ಅಪರೂಪ.

  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ
  Published by:guruganesh bhat
  First published: