ಕಲಬುರಗಿ: ಮರಳಲ್ಲಿ ಅರಳಿದ ಸರ್ದಾರ ವಲ್ಲಭಬಾಯಿ ಪಟೇಲರು (Sardar Vallabhbhai Patel) ಸ್ಯಾಂಡ್ ಆರ್ಟ್ಗೆ ಫಿದಾ ಆದ್ರು ನೋಡ್ರಿ ಬಿಸಿಲನಾಡಿನ (Kalaburagi News) ಜನರು. ಕಲ್ಯಾಣ ಕರ್ನಾಟಕ ಉತ್ಸವಕ್ಕೆ (Kalyana Karnataka Utsav) ಮೆರುಗು ನೀಡಿತು ಕಲಾವಿದ ಸುದರ್ಶನ್ ಪಟ್ನಾಯಕ್ (Sand Artist Sudarshan Patnaik) ಮರಳು ಶಿಲ್ಪ.
ಯೆಸ್, ಮರಳಿನ ಮೂಲಕ ಮೋಡಿ ಮಾಡಬಲ್ಲ ಖ್ಯಾತ ಅಂತರಾಷ್ಟ್ರೀಯ ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಕಲಬುರಗಿಯಲ್ಲಿ ರಚಿಸಿದ ಸರ್ದಾರ ವಲ್ಲಭಭಾಯಿ ಪಟೇಲರ ಮರಳು ಶಿಲ್ಪ ಜನರ ಗಮನ ಸೆಳೆಯಿತು. ಏಕತಾ ಪ್ರತಿಮೆ ಹೇಗೆ ಜನರನ್ನ ಆಕರ್ಷಿಸುತ್ತದೆಯೋ, ಅದೇ ರೀತಿಯಲ್ಲಿ ಪಟೇಲರ ಮರಳು ಶಿಲ್ಪ ಜನರನ್ನ ಕೈಬೀಸಿ ಕರೆಯಿತು.
ಇದನ್ನೂ ಓದಿ: Kalaburagi: ಬಾನಂಗಳದಲ್ಲಿ ಪತಂಗಗಳ ಚಿತ್ತಾರ! ಕಲ್ಯಾಣ ಕರ್ನಾಟಕದಲ್ಲಿ ಗಾಳಿಪಟಗಳ ರಂಗು!
ಮರಳಲ್ಲಿ ಮೂಡಿದ ಉಕ್ಕಿನ ಮನುಷ್ಯ
ಉತ್ಸವಕ್ಕೆ ಆಗಮಿಸಿದ ಜನರೆಲ್ಲರೂ ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರ ಮರಳು ಶಿಲ್ಪ ಎಂದು ಗೊತ್ತಾಗುತ್ತಲೇ ಖುಷಿಪಟ್ಟರು. ಅವರ ನಿರೀಕ್ಷೆಗೆ ತಕ್ಕಂತೆ ದೇಶ ಕಂಡ ಮೊದಲ ಗೃಹಮಂತ್ರಿ, ಕಲ್ಯಾಣ ಕರ್ನಾಟಕ ವಿಮೋಚನೆಯ ರೂವಾರಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಬಿಡಿಸುವ ಮೂಲಕ ಪಟ್ನಾಯಕ್ ಸೈ ಎನಿಸಿಕೊಂಡರು. ಪ್ರತಿಮೆ ಸುತ್ತಲೂ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಸ್ಥಳಗಳನ್ನು ಸಣ್ಣ ಗಾತ್ರದಲ್ಲಿ ಬಿಡಿಸಲಾಗಿತ್ತು.
ಇದನ್ನೂ ಓದಿ: Positive Story: ಈ ವಿಶೇಷ ಚೇತನರ ಬದುಕೇ ಸ್ಪೂರ್ತಿ, ಎಲ್ರಿಗೂ ಮಾದರಿ ಕಲಬುರಗಿಯ ನಾಗೇಂದ್ರ
ಮೋದಿ ಮಾಡಿದ ಕಲಾವಿದ
ಪ್ರತಿಮೆ ವೀಕ್ಷಿಸಿದ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ವಾವ್ಹ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಮೋಡಿ ಮಾಡಿದರು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ