• Home
 • »
 • News
 • »
 • kalburgi
 • »
 • Sanchari Taralaya: ಬ್ರಹ್ಮಾಂಡವನ್ನೇ ಹೊತ್ತು ತಿರುಗುತ್ತೆ ಈ ವ್ಯಾನ್!

Sanchari Taralaya: ಬ್ರಹ್ಮಾಂಡವನ್ನೇ ಹೊತ್ತು ತಿರುಗುತ್ತೆ ಈ ವ್ಯಾನ್!

X
ಸಂಚಾರಿ ತಾರಾಲಯ ದರ್ಶನ

"ಸಂಚಾರಿ ತಾರಾಲಯ ದರ್ಶನ"

ಶಾಲೆಗೆ ಅಂಗಳಕ್ಕೆ ಆಗಮಿಸಿದ ಡಿಜಿಟಲ್ ತಾರಾಲಯದ ಒಳಹೊಕ್ಕು ವಿದ್ಯಾರ್ಥಿಗಳು ಬ್ರಹ್ಮಾಂಡ ದರ್ಶನವನ್ನೇ ಮಾಡ್ತಿದ್ದಾರೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಈ ವಾಹನ ಹೋದಲ್ಲೇ ಹೋಗುತ್ತೆ ಸೌರಮಂಡಲ, ಇಡೀ ಬ್ರಹ್ಮಾಂಡವೇ ಊರಿಂದ ಊರಿಗೆ ತಿರುಗುತ್ತೆ! ನಾಲ್ಕೇ ನಾಲ್ಕು ಚಕ್ರದ ಈ ವಾಹನದಲ್ಲಿ ಸಕಲ ಭೂಮಂಡಲವೂ ಓಡಾಡುತ್ತೆ! ಅಂದ್ಹಾಗೆ ಇದು ಸಂಚಾರಿ ತಾರಾಲಯ (Sanchari Taralaya) ಎಂಬ ವಿಶೇಷ! ಕಲಬುರಗಿ ಜಿಲ್ಲೆಯಾದ್ಯಂತ (Kalaburagi News) ಸಂಚರಿಸುತ್ತಿರುವ ಸಂಚಾರಿ ತಾರಾಲಯ ವಾಹನ ವಿದ್ಯಾರ್ಥಿಗಳಿಗೆ ಖಗೋಳದ ಜ್ಞಾನ ಉಣಬಡಿಸುತ್ತಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ತಾರಾಲಯ ವಾಹನ ಸಂಚರಿಸಲಿದ್ದು ವಿದ್ಯಾರ್ಥಿಗಳಿಗೆ ವಿಜ್ಞಾನದ (Science Knowledge) ಕುರಿತು ಅನುಕೂಲವಾಗ್ತಿದೆ.


  ಕರ್ನಾಟಕದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ವಿನೂತನ ಯೋಜನೆ ಜಾರಿಗೊಳಿಸಿದೆ. ಖಗೋಳ ವಿಜ್ಞಾನದ ವಿಸ್ಮಯ, ತಾರಾಮಂಡಲ ಕೌತುಕದ ಬಗ್ಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ನೀಡಲಾಗ್ತಿದೆ.


  ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ


  ಕಾಲ್ಪನಿಕ ಆಕಾಶವೇ ಸೃಷ್ಟಿ
  ಕಾಲ್ಪನಿಕ ಆಕಾಶವನ್ನೇ ಸೃಷ್ಟಿಸಿ ಗ್ರಹ, ಉಪಗ್ರಹ, ರಾಕೆಟ್ ಉಡಾವಣೆ, ನಕ್ಷೆತ್ರಗಳ ಹುಟ್ಟು ಸಾವು, ಬ್ರಹ್ಮಾಂಡದ ಉಗಮ, ಭೂಮಿ, ಸೂರ್ಯ, ಚಂದ್ರಗ್ರಹಣದ ಬಗ್ಗೆ ಪ್ರಾಜೆಕ್ಟರ್ ಮೂಲಕ ತಿಳಿಸಲಾಗ್ತಿದೆ.


  ಇದನ್ನೂ ಓದಿ: Kalaburagi: 111 ದಿನ ಉಪವಾಸ, ಮೌನವ್ರತ ಮಾಡಿದ ಕಲಬುರಗಿಯ ಸ್ವಾಮೀಜಿ!


  ಸೌರವ್ಯೂಹ ನೋಡಿ ವಿಸ್ಮಯ
  ಶಾಲೆಗೆ ಅಂಗಳಕ್ಕೆ ಆಗಮಿಸಿದ ಡಿಜಿಟಲ್ ತಾರಾಲಯದ ಒಳಹೊಕ್ಕು ವಿದ್ಯಾರ್ಥಿಗಳು ಬ್ರಹ್ಮಾಂಡ ದರ್ಶನವನ್ನೇ ಮಾಡ್ತಿದ್ದಾರೆ. ಸೌರವ್ಯೂಹವನ್ನೇ ನೋಡಿ ವಿಸ್ಮಯಗೊಳ್ತಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ಖಗೋಳ ದರ್ಶನ ಮಾಡಿಸಿ ಆಸಕ್ತಿ ಮೂಡಿಸೋ ಪ್ರಯತ್ನಕ್ಕೆ ಪಾಸಿಟಿವ್ ಪ್ರತಿಕ್ರಿಯೆ ದೊರೆಯುತ್ತಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು