Kalaburagi Ganesh Chaturthi: ರಾಜಸ್ತಾನಿ ಮಹಿಳೆಯರ ಕೈಯ್ಯಲ್ಲಿ ಕಲಬುರಗಿ ಗಣಪತಿ!

Ganesh Chaturthi 2022: ಪುರುಷ ಕಲಾವಿದರು ಗಣೇಶ ಮೂರ್ತಿ ತಯಾರಿಸುವುದು ಸಾಮಾನ್ಯ. ಆದರೆ ಕಲಬುರಗಿಯಲ್ಲಿ ರಾಜಸ್ತಾನಿ ಮಹಿಳೆಯರು ನೂರಾರು ಗಣಪತಿ ಮೂರ್ತಿ ತಯಾರಿಸಿದ್ದು ಆಕರ್ಷಕವಾಗಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಕಲಬುರಗಿ: ಬಣ್ಣ ಬಣ್ಣದ ಬೃಹದಾಕಾರದ ಗಣೇಶನ ಮೂರ್ತಿಗಳು.. ಅವುಗಳಿಗೆ ಬಣ್ಣ ಹಚ್ಚುತ್ತಿರುವ ಮಹಿಳೆಯರು. ಇನ್ನೊಂದು ಕಡೆ ಖರೀದಿಗೆ ಮುಗಿಬಿದ್ದ ಸಾರ್ವಜನಿಕರು.. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ನಗರದ ಹೀರಾಪುರ ಬಳಿಯ ಅಂಡರ್ ಬ್ರಿಡ್ಜ್ ಪಕ್ಕದಲ್ಲಿ. ಕಲಬುರಗಿ ನಗರದಾದ್ಯಂತ (Kalaburagi Ganesh Chaturthi) ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೀತಿದೆ. ಆಗಸ್ಟ್ 31 ರಿಂದ ಆರಂಭವಾಗಿ, ಹಲವು ದಿನಗಳ ಕಾಲ ವಿಜೃಂಭಣೆಯಿಂದ ಎಲ್ಲೆಡೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಣೆಗಳು ನಡೆಯಲಿದೆ. ಹೀಗಾಗಿ ಕಲಬುರಗಿಯಲ್ಲಿ ರಾಜಸ್ಥಾನದಿಂದ (Rajasthan) ಆಗಮಿಸಿದ ಮಹಿಳೆಯರೇ ಈ ಬಾರಿ ಕಲರ್ ಫುಲ್, ಆಕರ್ಷಕ ಗಣಪತಿಯನ್ನು ತಯಾರಿಸಿದ್ದಾರೆ. ಮಹಿಳಾ ಕಲಾವಿದರು ತಾವೇ ತಯಾರಿಸಿದ ಬೃಹತ್ ಆಕಾರದ ಗಣೇಶ ಮೂರ್ತಿಗೆ ಪೇಂಟಿಂಗ್ ಮಾಡಿ ಪೈನಲ್ ಟಚ್ ನೀಡಿದ್ದಾರೆ.



    ಹೇಗಿದ್ದಾನೆ ಗೊತ್ತಾ ಗಣೇಶ?
    ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಮಧ್ಯೆಯು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಮಾರಾಟವು ಅಷ್ಟೇ ಬೇಡಿಕೆಯನ್ನು ಪಡೆಯುತ್ತಿದೆ.

    ಇದನ್ನೂ ಓದಿ:  Kalaburagi Ganapati: ಬದುಕು ಕಟ್ಟಿಕೊಟ್ಟ ಗಣಪ! ಇದು ನಿಜಕ್ಕೂ ದೇವರು ನೀಡಿದ ವರ!



    ಬಣ್ಣ, ಬಣ್ಣದ ಡಿಫ್ರೆಂಟ್ ಗಣಪತಿಯನ್ನು ತಯಾರಿಸಿದ್ದರಿಂದ ಜನ ಇಷ್ಟಪಟ್ಟು ಖರೀದಿಯಲ್ಲಿ ತೊಡಗಿದ್ದಾರೆ. ‌ಮೂರು ಅಡಿಯಿಂದ ಎಂಟು ಅಡಿವರೆಗಿನ ಗಣಪತಿ ಮೂರ್ತಿಯನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿದ್ದು ಗಾತ್ರದ ಆಧಾರದ ಮೇಲೆ ರೇಟ್ ಕೂಡ ಫಿಕ್ಸ್ ಮಾಡಲಾಗಿದೆ.

    ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

    ಒಟ್ಟಾರೆ ಕಲಬುರಗಿಯಲ್ಲಿ ಗಣಪತಿ ತಯಾರಿಕೆ ಮೂಲಕ ರಾಜಸ್ತಾನದ ಮೂಲದ‌ ಮಹಿಳಾ ಕಲಾವಿದರು ಕೈ ಚಳಕ ಮೆರೆಯುತ್ತಿದ್ದಾರೆ. ಈ ಮೂಲಕ ಗಣೇಶ ತಯಾರಿ ಬರೀ ಪುರುಷರಿಗಷ್ಟೇ ಅಲ್ಲ ಮಹಿಳೆಯರಿಗೂ ಸಾಧ್ಯ ಅನ್ನೋದನ್ನ‌ ತೋರಿಸಿ ಕೊಡುತ್ತಿದ್ದಾರೆ.

    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
    Published by:guruganesh bhat
    First published: