• Home
 • »
 • News
 • »
 • kalburgi
 • »
 • Kalaburagi Viral Video: ಕತ್ತಲಾಗುತ್ತಿದ್ದಂತೆ ಕಾಣಿಸಿಕೊಂಡ ದೈತ್ಯ ಹೆಬ್ಬಾವು!

Kalaburagi Viral Video: ಕತ್ತಲಾಗುತ್ತಿದ್ದಂತೆ ಕಾಣಿಸಿಕೊಂಡ ದೈತ್ಯ ಹೆಬ್ಬಾವು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕಲಬುರಗಿಯ ಬುದ್ಧ ವಿಹಾರಕ್ಕೆ ಧಾವಿಸಿದ್ದ ಸ್ನೇಕ್ ಪ್ರಶಾಂತ ಹೆಬ್ಬಾವನ್ನು ಹಿಡಿದ್ರು. ಬರೋಬ್ಬರಿ 10 ಅಡಿ ಉದ್ದ, 14 ಕೆಜಿ ತೂಕವಿದ್ದ ಹೆಬ್ಬಾವನ್ನ ಸ್ನೇಕ್ ಪ್ರಶಾಂತ್ ತಮ್ಮ ಚೀಲದೊಳಗೆ ಬಿಟ್ರು.

 • Share this:

  ಕಲಬುರಗಿ: ಹೆಬ್ಬಾವು ಅಂದ್ರೇನೆ ಅಬ್ಬಬ್ಬ ಅನ್ನೋಹಾಗೆ ಹೆದರಿಕೆಯಾಗುತ್ತೆ ಮಾರಾಯ ಅನ್ನೋರೇ ಜಾಸ್ತಿ. ಅದ್ರಲ್ಲೂ ಕತ್ತಲಾಗ್ತಿದ್ದಂತೆ ಹೆಬ್ಬಾವೇನಾದ್ರೂ ಮನೆಹತ್ರ ಕಂಡ್ರೆ ಮತ್ತೆ ಕೇಳೋದೆ ಬೇಡ. ಇಲ್ಲಾಗಿದ್ದೂ ಅದೇ! ಕತ್ತಲಾಗ್ತಿದ್ದಂತೆ ಕಲಬುರಗಿಯ ಬುದ್ಧ ವಿಹಾರದ ಬಳಿ ದೊಡ್ಡದಾದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಇನ್ನೇನ್ ಮಾಡೋದಪ್ಪ ಅಂದ್ಕೊಂಡಾಗ್ಲೇ ಅಲ್ಲಿದ್ದ ಜನರಿಗೆ ನೆನಪಾಗಿದ್ದು ಸ್ನೇಕ್ ಪ್ರಶಾಂತ್.


  ಕಲಬುರಗಿಯ ಬುದ್ಧ ವಿಹಾರಕ್ಕೆ ಧಾವಿಸಿದ್ದ ಸ್ನೇಕ್ ಪ್ರಶಾಂತ ಹೆಬ್ಬಾವನ್ನು ಹಿಡಿದ್ರು. ಬರೋಬ್ಬರಿ 10 ಅಡಿ ಉದ್ದ, 14 ಕೆಜಿ ತೂಕವಿದ್ದ ಹೆಬ್ಬಾವನ್ನ ಸ್ನೇಕ್ ಪ್ರಶಾಂತ್ ತಮ್ಮ ಚೀಲದೊಳಗೆ ಬಿಟ್ರು.


  ಇದನ್ನೂ ಓದಿ: Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ


  ಎಲ್ರಲ್ಲೂ ಮೂಡಿದ್ದ ಆತಂಕ ದೂರಾಯ್ತು. ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಿಂದ ಸಂರಕ್ಷಿತ ಪ್ರದೇಶಕ್ಕೆ ಹೆಬ್ಬಾವನ್ನು ಬಿಡಲಾಯ್ತು.


  ಇದನ್ನೂ ಓದಿ: Kalaburagi Viral Video: ಜನರಿಂದಲೇ ಸೈನಿಕನ ರಕ್ಷಣೆ! ಅಚ್ಚರಿ ಘಟನೆ ವೈರಲ್


  ಹೀಗೆ ಬರೋಬ್ಬರಿ 14 ಕೆಜಿ ಭಾರದ ಹೆಬ್ಬಾವನ್ನು ಸಾಹಸಮಯ ರೀತಿಲಿ ಹಿಡಿದ ಸ್ನೇಕ್ ಪ್ರಶಾಂತ್ ಅವರ ಧೈರ್ಯ ಹಾಗೂ ಸಾಹಸಕ್ಕೆ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

  Published by:ಗುರುಗಣೇಶ ಡಬ್ಗುಳಿ
  First published: