ಕಲಬುರಗಿ: ಕಬ್ಬಿನ ಗದ್ದೆಯಲ್ಲಿ ಅವಿತು ಕೂತ ಹೆಬ್ಬಾವು! ರಕ್ಷಣೆಗೆ ಮುಂದಾದ ಉರಗ ತಜ್ಞಇಡೀ ಗ್ರಾಮಕ್ಕೆ ಗ್ರಾಮವೇ ಸಾಕ್ಷಿಯಾಯಿತು ಪೈಥಾನ್ ಆಪರೇಷನ್.ಹಾಗಿದ್ರೆ ಹೇಗಿತ್ತು ಹೆಬ್ಬಾವು ರಕ್ಷಣಾ ಕಾರ್ಯಾಚರಣೆ ಅನ್ನೋದನ್ನ ನೀವೇ ನೋಡಿ. ಕಲಬುರಗಿ ನಗರದ (Python In Kalaburagi) ನಾಗನಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿರಬೇಕಾದ್ರೆ ಕೃಷಿ ಕಾರ್ಮಿಕರ ಕಣ್ಣಿಗೆ ಬೃಹತ್ ಆಕಾರದ ಹೆಬ್ಬಾವು (Python In Sugarcane Field) ಕಾಣಿಸಿಕೊಂಡಿದೆ. ಇದ್ರಿಂದ ಭಯಭೀತರಾದ ಕಾರ್ಮಿಕರು ಕೂಡಲೇ ಸ್ನೇಕ್ ಅಮರ ಅವ್ರಿಗೆ ಕರೆ ಮಾಡಿದ್ದಾರೆ.
ಗೋಣಿಚೀಲದಲ್ಲಿ ಹೆಬ್ಬಾವು!
ಇತ್ತ ಹೆಬ್ಬಾವು ಮಿಸುಕಾಡದ ಹಾಗೆ ಜನರು ನೋಡಿಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿ ಬಂದ ಸ್ನೇಕ್ ಅಮರ್ ಕಬ್ಬಿನ ಗದ್ದೆಗೆ ನುಗ್ಗಿ ಅವಿತುಕೊಂಡಿದ್ದ ಹೆಬ್ಬಾವನ್ನು ಹಿಡಿದು ಹೊರ ತಂದಿದ್ದಾರೆ. ಬಳಿಕ ಹೆಬ್ಬಾವನ್ನ ಗೋಣಿಚೀಲದಲ್ಲಿ ಕಟ್ಟಿಕೊಂಡು ಕೊಂಡೊಯ್ದರು. ನೆರೆದಿದ್ದ ಜನರೆಲ್ಲ ನಿಟ್ಟುಸಿರುಬಿಟ್ಟಿದ್ದಾರೆ.
ಇದನ್ನೂ ಓದಿ: Positive Story: ಕಾಲುಗಳಿಲ್ಲದ ಕೃಷಿ ಸಾಧಕರಿಗೆ ಸಿಕ್ತು ನೆರವಿನ ಭರವಸೆ; ಇದು ನ್ಯೂಸ್ 18 ಕನ್ನಡ ಡಿಜಿಟಲ್ ವರದಿ ಪರಿಣಾಮ
ಈವರೆಗೂ 3000ಕ್ಕೂ ಅಧಿಕ ಹಾವುಗಳನ್ನು ರಕ್ಷಣೆ
12 ಅಡಿ ಉದ್ದ ಹಾಗೂ 14 ಕೆಜಿ ತೂಕದ ಹೆಬ್ಬಾವನ್ನ ಸ್ನೇಕ್ ಅಮರ್ ಎಂಬ ಹಾವು ರಕ್ಷಕರ ಕೆಲವೇ ನಿಮಿಷಗಳಲ್ಲಿ ರಕ್ಷಿಸಿದರು. ಕಳೆದ ಹಲವು ವರ್ಷಗಳಿಂದ ಹಾವುಗಳ ಸಂತತಿ ರಕ್ಷಣೆಯಲ್ಲಿ ತೊಡಗಿರುವ ಇವ್ರು ಈವರೆಗೂ 3000ಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸ್ನೇಕ್ ಅಮರ್ 12 ಅಡಿ ಉದ್ದದ ಹೆಬ್ಬಾವನ್ನ ರಕ್ಷಣೆ ಮಾಡಿದ್ದಾಗಿ ತಿಳಿಸಿದರು.
ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ
ಇನ್ನು ರಕ್ಷಣೆ ಮಾಡಲಾದ ಹೆಬ್ಬಾವನ್ನ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಜನ ಪ್ರದೇಶದಲ್ಲಿ ಬಿಡಲಾಗಿದೆ. ಒಟ್ಟಾರೆ ಆತಂಕ ಸೃಷ್ಟಿಸಿದ್ದ ಭಾರೀ ಗಾತ್ರದ ಹೆಬ್ಬಾವು ಸುರಕ್ಷಿತವಾಗಿ ಮನೆ ಸೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ