• Home
  • »
  • News
  • »
  • kalburgi
  • »
  • Puneeth Rajkumar Temple: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂದ ಫ್ಯಾನ್ಸ್

Puneeth Rajkumar Temple: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂದ ಫ್ಯಾನ್ಸ್

ಇಲ್ಲಿ ನೊಡಿ ವಿಡಿಯೋ

"ಇಲ್ಲಿ ನೊಡಿ ವಿಡಿಯೋ"

ಅಪ್ಪು ಭಾವಚಿತ್ರಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರರ ರೂಪ ಕೊಡಲಾಗಿತ್ತು. ಅಭಿಮಾನಿಗಳು ಈ ಫೋಟೋಗಳನ್ನು ತಲೆ ಮೇಲೆ ಹೊತ್ತು ಸಾಗಿದರು.

  • News18 Kannada
  • Last Updated :
  • Gulbarga, India
  • Share this:

    ಎಲ್ಲೆಲ್ಲೂ ಕನ್ನಡದ ಧ್ವಜ, ಪಟಾಕಿ ಸಿಡಿಸಿ ಸಂಭ್ರಮ.. ಅರೆ, ಇದೇನು ಕರ್ನಾಟಕ ರಾಜ್ಯೋತ್ಸವ ಅಂದ್ಕೊಂಡ್ರಾ? ಖಂಡಿತಾ ಅಲ್ಲ. ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಮೇಲಿನ ಅಭಿಮಾನ. ಗಂಧದ ಗುಡಿ (Gandhadagudi Film) ಜಾತ್ರೆ. ಹಾಗಾಗಿಯೇ ನೋಡಿ ಅಪ್ಪು ದೇವರ ಸ್ಥಾನ ಪಡೆದಿದ್ದಾರೆ. ಬ್ರಹ್ಮ, ವಿಷ್ಣು, ಮಹೇಶ್ವರನಾಗಿ ನಗರದಲ್ಲೆಲ್ಲ ಸಂಚರಿಸಿ ಅಭಿಮಾನಿಗಳಿಗೆ ದರ್ಶನ ನೀಡಿದ್ರು. ಪುನೀತ್ ನಿಧನಕ್ಕೆ ಒಂದು ವರ್ಷ, ಇನ್ನೊಂದೆಡೆ ಗಂಧದ ಗುಡಿ ಡಾಕ್ಯುಮೆಂಟರಿ ಫಿಲ್ಮ್ ರಿಲೀಸ್​ಗಾಗಿ ಸಂಭ್ರಮ ಕಲಬುರಗಿ ನಗರದಲ್ಲಿ (Kalaburagi News) ಕಂಡುಬಂತು.


    ಅಪ್ಪು ಭಾವಚಿತ್ರಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರರ ರೂಪ ಕೊಡಲಾಗಿತ್ತು. ಅಭಿಮಾನಿಗಳು ಈ ಫೋಟೋಗಳನ್ನು ತಲೆ ಮೇಲೆ ಹೊತ್ತು ಸಾಗಿದರು. ನಗರದ ಪ್ರಮುಖ ಬೀದಿಗಳಲ್ಲೆಲ್ಲ ಸಂಚರಿಸಿ, ಗಂಧದಗುಡಿ ಜಾತ್ರೆ ಮಾಡಿದರು. ಯುವತಿಯರೂ ಸೇರಿದಂತೆ ಅಭಿಮಾನಿಗಳೆಲ್ಲರೂ ಅಪ್ಪು ಸಿನೆಮಾದ ಗೀತೆಗಳಿಗೆ ಡ್ಯಾನ್ಸ್ ಮಾಡುತ್ತಾ ಅಭಿಮಾನ ಮೆರೆದರು.


    ಇದನ್ನೂ ಓದಿ: Puneeth Rajkumar: ಮಿಲಿಟ್ರಿ ಮಹದೇವು ಮಾಡಿದ್ದ ಬೆಲ್ಲದ ಚಹಾ ಸವಿದಿದ್ದ ಅಪ್ಪು!


    ಭಾವಚಿತ್ರಕ್ಕೆ ಕ್ಷೀರಾಭಿಷೇಕ, ಜೆಸಿಬಿಯಿಂದ ಪುಷ್ಪಾರ್ಚನೆ
    ಇದೆಲ್ಲದಕ್ಕೂ ಮುನ್ನ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ, ಜೆಸಿಬಿಯಿಂದ ಪುಷ್ಪಾರ್ಚನೆ ನಡೆಸಲಾಯಿತು. ಕನ್ನಡ ಜಾತ್ರೆಯಂತೆ ಸಾಗಿದ ಮೆರವಣಿಗೆಯಲ್ಲೇ ಅಪ್ಪು ದೇಗುಲ ನಿರ್ಮಾಣದ ಬಗ್ಗೆ ಘೋಷಿಸಲಾಯಿತು. ರಾಘವೇಂದ್ರ ಕುಲಕರ್ಣಿ ಅನ್ನೋ ಅಭಿಮಾನಿ ತನ್ನ ಸ್ವಂತ ಜಮೀನಿನಲ್ಲಿ ಅಪ್ಪುಗಾಗಿ ದೇವಸ್ಥಾನ ಕಟ್ಟೋದಾಗಿ ತಿಳಿಸಿದರು.


    ಇದನ್ನೂ ಓದಿ: Gandhadagudi: ಗಂಧದಗುಡಿ ರಿಲೀಸ್​ ಸಂಭ್ರಮ, ಥಿಯೇಟರ್​ಗೆ ಆನೆ ಕರೆತಂದ ಫ್ಯಾನ್ಸ್


    ಮಿಸ್ ಯೂ ಅಪ್ಪು ಸರ್
    ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ನಿಧನವಾಗಿ ವರುಷ ಕಳೆಯುತ್ತಾ ಬಂದರೂ ಅಭಿಮಾನಿಗಳು ಮಾತ್ರ ಅವರನ್ನು ಇನ್ನೂ ಮರೆತಿಲ್ಲ. ಒಂದಲ್ಲ ಒಂದು ಕಾರ್ಯಕ್ರಮದ ಮೂಲಕ ನೆನಪಿಸುತ್ತಲೇ ಮಿಸ್ ಯೂ ಅಪ್ಪು ಸರ್ ಎನ್ನುತ್ತಲೇ ಇದ್ದಾರೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: