ಕಲಬುರಗಿ: ಜಿಲ್ಲೆಯಾದ್ಯಂತ ಸಂಕ್ರಾಂತಿಯ ಸುಗ್ಗಿ ಮನೆ ಮಾಡಿದೆ. ಕಬ್ಬು, ಕಡ್ಲೆ ರಾಶಿ ಮಾರಾಟಗಾರರ ಕೂಗಾಟ, ಕೊಳ್ಳುಗರ ಚೌಕಾಸಿಯೊಂದಿಗೆ ಖರೀದಿಯ ಸಂಭ್ರಮದ ಭರಾಟೆ ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಸಮೃದ್ಧವಾದ ಬೆಳೆ ಬಂದಿದೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಬೆಲೆಗಳು ಎರಡು ದಿನಗಳಿಂದೀಚೆಗೆ ದುಪ್ಪಟ್ಟಾಗಿದೆ.
ಬೆಲೆ ಏರಿಕೆ ಬಿಸಿ
ಸಂಕ್ರಾಂತಿ ಹಬ್ಬಕ್ಕೆ ಕಬ್ಬಿನ ದರ ಏರಿಕೆಯಾಗಿದೆ. ಜೊತೆಗೆ ಹೂವು ಹಾಗೂ ಇನ್ನಿತರ ಅವಶ್ಯಕ ವಸ್ತುಗಳ ಬೆಲೆಯು ಏರಿಕೆ ಕಂಡಿದೆ. ಹೀಗಾಗಿ ಸಂಕ್ರಾಂತಿ ಸಂಭ್ರಮದ ಜೊತೆಗೆ ಬೆಲೆ ಏರಿಕೆ ಬಿಸಿಯೂ ಗ್ರಾಹಕರನ್ನು ತಟ್ಟಿದೆ. ಆದರೂ, ಜನರು ಮಾರುಕಟ್ಟೆಗಳಲ್ಲಿ ಅವಶ್ಯಕ ಸಾಮಗ್ರಿಗಳನ್ನು ಇಷ್ಟಪಟ್ಟು ಖರೀದಿಸಿದ್ದು ಕಂಡು ಬಂದಿದೆ.
ಮಾರುಕಟ್ಟೆಯಲ್ಲಿ ಎಳ್ಳು-ಬೆಲ್ಲ ಮಿಶ್ರಣ
ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಮಾತ್ರ ಮಾರಾಟ ಕಾಣುತ್ತಿದ್ದ ಸಿದ್ಧ ಎಳ್ಳು-ಬೆಲ್ಲ ಈ ಬಾರಿ ಕಲಬುರಗಿ ನಗರದ ಮಾರುಕಟ್ಟೆಯಲ್ಲಿ ಕೆಲವೆಡೆ ಕಂಡು ಬಂದಿದೆ. ಜನರು ಎಳ್ಳು ಬೆಲ್ಲ ಖರೀದಿಗೆ ಆಸಕ್ತಿ ತೋರಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಿಶೇಷ ಮೆರುಗು
ಹಬ್ಬದ ನಿಮಿತ್ತ ಗ್ರಾಮೀಣ ಪ್ರದೇಶಗಳಲ್ಲಿ ದವಸ-ಧಾನ್ಯಕ್ಕೆ ಪೂಜೆ, ಊರ ಬಾಗಿಲಲ್ಲಿ ಬೆಂಕಿ ಹಾಕಿ ರಾಸುಗಳನ್ನು ಬೆಂಕಿ ಮೇಲೆ ಓಡಿಸುವ ಸ್ಪರ್ಧೆ ಮತ್ತಿತರ ಚಟುವಟಿಕೆಗಳು ಹಬ್ಬಕ್ಕೆ ವಿಶೇಷ ಮೆರಗು ನೀಡಲಿವೆ.
ಬೆಲೆ ಏರಿಕೆ ಹೀಗಿದೆ
ಕಬ್ಬು ಜಲ್ಲೆ ಜೋಡಿಗೆ - 80-100 ರೂ.
ಹಸಿ ಕಡ್ಲೆ - 50ರೂ. ಕಟ್ಟು
ಅವರೆಕಾಯಿ - 80ರಿಂದ 100ರೂ. ಕೆ.ಜಿಗೆ
ಬದನೆಕಾಯಿ - 40ರಿಂದ 60. ಕೆ.ಜಿಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ