• Home
 • »
 • News
 • »
 • kalburgi
 • »
 • Subsidy For Farmers: ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಭರ್ಜರಿ ಸಹಾಯಧನ ಘೋಷಣೆ

Subsidy For Farmers: ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಭರ್ಜರಿ ಸಹಾಯಧನ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಂತ್ರಜ್ಞಾನವನ್ನು ಬಳಸುವ ಮೂಲಕ ರೈತರು ನೀರಾವರಿಯನ್ನು ಮಾಡುವ ಮೂಲಕ ನೀರು ಉಳಿಸುವುದರ ಜೊತೆಗೆ ಉತ್ತಮ ಇಳುವರಿಯನ್ನ ಪಡೆದುಕೊಳ್ಳಬಹುದಾಗಿದೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ತೋಟಗಾರಿಕೆ ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (Pradhan Mantri Krishi Sinchai Scheme) ಸಿಹಿಸುದ್ದಿ ನೀಡಿದೆ ತೋಟಗಾರಿಕೆ ಇಲಾಖೆ ಯಂತ್ರೋಪಕರಣಗಳ ಸಹಾಯಧನಕ್ಕಾಗಿ (Subsidy For Farmers) ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ತಂತ್ರಜ್ಞಾನವನ್ನು ಬಳಸುವ ಮೂಲಕ ರೈತರು ನೀರಾವರಿಯನ್ನು ಮಾಡುವ ಮೂಲಕ ನೀರು ಉಳಿಸುವುದರ ಜೊತೆಗೆ ಉತ್ತಮ ಇಳುವರಿಯನ್ನ ಪಡೆದುಕೊಳ್ಳಬಹುದಾಗಿದೆ. ಇದರಿಂದ ರೈತರಿಗೆ ಉತ್ತಮ ಲಾಭವಾಗಲಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ (Central Government) ಜಾರಿಗೆ ತಂದಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ವಿನೂತನ ಸ್ಕೀಮ್​ಒಂದನ್ನು ಘೋಷಿಸಿದೆ.


  ತೋಟಗಾರಿಕೆ, ತರಕಾರಿ ಹಾಗೂ ಹೂ ಸೇರಿದಂತೆ ಸಣ್ಣ ಪ್ರಮಾಣದ ರೈತರು ಹಾಗೂ ನೀರಾವರಿಯಾಶ್ರಿತ ಕೃಷಿಕರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯು ರೈತರು ಕೃಷಿಗೆ ಬೇಕಾದ ಉಪಕರಣಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲವಾಗಲು ಸಹಕಾರವಾಗಲಿದೆ.


  ಶೇ. 90ರಷ್ಟು ಸಹಾಯಧನ
  ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ನೀರಾವರಿ ಘಟಕಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವಿಧ ನೀರಾವರಿ ಘಟಕಗಳ ಅಳವಡಿಕೆಗೆ ಶೇ. 90ರಷ್ಟು ಸಹಾಯಧನ ಲಾಭವಿದ್ದು ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.


  ಹನಿ ನೀರಾವರಿ ಘಟಕದಿಂದಾಗುವ ಲಾಭ
  ಹನಿ ನೀರಾವರಿ ಘಟಕವು ರೈತರಿಗೆ ಅತ್ಯಂತ ಲಾಭದಾಯಕ ಯೋಜನೆಯಾಗಿದ್ದು. ಎಲ್ಲೆಲ್ಲಿ ಬೆಳೆಗಳಿವೆ ಅಲ್ಲಿ ಮಾತ್ರ ನೀರು ಪೂರೈಸುವುದು ಮತ್ತು ದಿನಕ್ಕೆ ಎಷ್ಟು ಬಾರಿ ನೀರಿನ ಅವಶ್ಯಕತೆ ಇದು ಅಷ್ಟನ್ನ ಮಾತ್ರ ನೀರುಣಿಸುವುದು. ಹನಿ ನೀರಾವರಿ ಘಟಕ ಸ್ಥಾಪಿಸುವುದರಿಂದ ದೀರ್ಘಾವಧಿಯ ಕಾಲ ತೋಟಗಾರಿಕೆ ವ್ಯವಸಾಯದಲ್ಲಿ ಲಾಭವನ್ನು ಪಡೆದುಕೊಳ್ಳ ಬಹುದಲ್ಲದೆ ಅಧಿಕ ಲಾಭವನ್ನು ಕೂಡ ಪಡೆದುಕೊಳ್ಳಬಹುದು.


  ಯಾರು ಅರ್ಹರು?
  ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪಡೆದುಕೊಳ್ಳಬಹುದಾದರ ರೈತರು ಕಾಫಿ, ಟೀ ಹಾಗೂ ರಬ್ಬರ್ ಬೆಳೆಯನ್ನು ಹೊರತುಪಡಿಸಿ ತೋಟಗಾರಿಕೆ ಬೆಳಗಿನ ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ 5 ಹೆಕ್ಟೇರ್ ಜಮೀನಿನವರಿಗೆ ನೀರಾವರಿ ಯಂತ್ರ ಅಳವಡಿಸಲು ಸಹಾಯಧನವನ್ನು ನೀಡಲಾಗುತ್ತದೆ.


  ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


  ತುಂತುರು ನೀರಾವರಿ ಸೌಲಭ್ಯ
  2022 ಹಾಗೂ 23ನೇ ಸಾಲಿನ ತರಕಾರಿ ಹಾಗೂ ಹೂ ಬೆಳೆಗಾರರಿಗೆ ತುಂತುರು ನೀರಾವರಿ ಘಟಕ ಅಳವಡಿಸಲು ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ. ಅರ್ಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಮೊದಲು ಎರಡು ಹೆಕ್ಟೇರ್ ಪ್ರದೇಶಕ್ಕೆ ಶೇ90% ರಷ್ಟು ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ75%ರಷ್ಟು ಸಹಾಯಧನವನ್ನ ವಿತರಿಸಲಾಗುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರು ಎರಡು ಹೆಕ್ಟೇರೆಗಿಂತಲು ಮೇಲ್ಪಟ್ಟು ಗರಿಷ್ಠ ಐದು ಹೆಕ್ಟೇರ್ ನಷ್ಟು ಭೂಮಿಯನ್ನು ಹೊಂದಿದ್ರೆ, ಶೇ.45%ರಷ್ಟು ಸಹಾಯಧನವನ್ನು ಲಭ್ಯವಿರುತ್ತದೆ.


  ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


  ಸೌಲಭ್ಯ ಪಡೆಯುವುದು ಹೇಗೆ?
  ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ರೈತರು ತಮ್ಮ ವ್ಯಾಪ್ತಿಗೆ ಒಳಪಡುವ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿಯೊಂದಿಗೆ ಪಹಾಣಿ, ಛಾಪಾ ಕಾಗದ, ನೀರಿನ ಲಭ್ಯತೆ ದೃಢೀಕರಣ ಪತ್ರ, ಕೊಳವೆ ಬಾವಿ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ ಹಾಗೂ ರೈತರು ಎಸ್ ಸಿ, ಎಸ್ ಟಿ ಪಂಗಡಕ್ಕೆ ಸೇರಿದರೆ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ಸಂಬಂಧಪಟ್ಟ ದಾಖಲಿಗಳನ್ನು ತೆಗೆದುಕೊಂಡು ಹೋಗಿ ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ ವೆಬ್ ಸೈಟ್ ನಲ್ಲಿ ನಮೂದಿಸಿಕೊಳ್ಳಬಹುದಾಗಿದೆ. ಜೇಷ್ಠತಾ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: