• Home
  • »
  • News
  • »
  • kalburgi
  • »
  • Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ

Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಸೊನ್ನ ವಿರಕ್ತ ಮಠದ ಶ್ರೀಶಿವಾನಂದ ಸ್ವಾಮೀಜಿಗಳಿಗೆ ಅದರ ನೇತೃತ್ವ ನೀಡಿದರು. ಸ್ವಾಮೀಜಿ ಮನೆಮನೆಗೆ ತೆರಳಿ ಇದಕ್ಕಾಗಿ ಅಕ್ಷರಶಃ ಭಿಕ್ಷೆ ಬೇಡಿದ್ದಾರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಬಿಸಿಳ ಝಳದ ನಡುವೆಯೂ ಹೂ ಹಿಡಿದು ಕಾಯುತ್ತಿರೋ ಮಕ್ಕಳು, ಇನ್ನೊಂದೆಡೆ ತಮಟೆ, ನಗಾರಿ ಸದ್ದಿನೊಂದಿಗೆ ಆಗಮಿಸುತ್ತಿರೋ ಸ್ವಾಮೀಜಿ. ಇದು ಯಾವುದೋ ಶಾಲಾ ವಾರ್ಷಿಕೋತ್ಸವಕ್ಕೋ, ಧಾರ್ಮಿಕ ಕಾರ್ಯಕ್ರಮಕ್ಕೋ ಸ್ವಾಗತ ಕೋರುತ್ತಿರುವ ದೃಶ್ಯವಲ್ಲ. ಬದಲಿಗೆ ಮಕ್ಕಳ ಭವಿಷ್ಯಕ್ಕಾಗಿ (Children Future) ದುಡಿದ ಸ್ವಾಮೀಜಿಗೆ ನೀಡುತ್ತಿರೋ ಹೃದಯಸ್ಪರ್ಶಿ ಸ್ವಾಗತವಿದು. ನಿಜ, ಇವರು ಮಕ್ಕಳ ಶಿಕ್ಷಣಕ್ಕಾಗಿ (Children Education) ಅಕ್ಷರ ಜೋಳಿಗೆ ಹಿಡಿದು (Akshar Jolige) ಹಳ್ಳಿ ಹಳ್ಳಿ ತಿರುಗಾಡಿದ ಮಹಾನ್ ಅಕ್ಷರ ಸಂತ. ಇವರೇ ಕಲಬುರಗಿಯ (Kalaburagi) ಶ್ರೀಶಿವಾನಂದ ಸ್ವಾಮೀಜಿ.


    ಸದ್ಯ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ಘತ್ತರಗಿ ಗ್ರಾಮದ ಹಾಲಿ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಬೇರೆ ಕಟ್ಟಡಕ್ಕೆ ಹೋಗಬೇಕೆನ್ನುವ ಒತ್ತಡವಿತ್ತು. ಶಾಲೆ ಏನೋ ಸರಕಾರ ಕಟ್ಟಿಕೊಡುತ್ತೆ, ಆದ್ರೆ ಜಮೀನು ಬೇಕಲ್ವೇ? ಇಂತಹ ಪ್ರಶ್ನೆ ಬಂದಾಗ ಗ್ರಾಮಸ್ಥರೆಲ್ಲ ಸೇರಿ, 5 ಎಕ್ರೆ ಜಮೀನು ಖರೀದಿಗೆ ಮುಂದಾದ್ರು.


    ಸಂಗ್ರಹವಾಯ್ತು ಬರೋಬ್ಬರಿ 60 ಲಕ್ಷ
    ಸೊನ್ನ ವಿರಕ್ತ ಮಠದ ಶ್ರೀಶಿವಾನಂದ ಸ್ವಾಮೀಜಿಗಳಿಗೆ ಅದರ ನೇತೃತ್ವ ನೀಡಿದರು. ಸ್ವಾಮೀಜಿ ಮನೆಮನೆಗೆ ತೆರಳಿ ಇದಕ್ಕಾಗಿ ಅಕ್ಷರಶಃ ಭಿಕ್ಷೆ ಬೇಡಿದ್ದಾರೆ. ಹೀಗೆ ಅಕ್ಷರ ಜೋಳಿಗೆ ಹಿಡಿದು ಹೊರಟ ಸಂತನ ಜೋಳಿಗೆಯಲ್ಲಿ ಸಂಗ್ರಹವಾದದ್ದು ಬರೋಬ್ಬರಿ 60 ಲಕ್ಷ. 21 ದಿನಗಳಲ್ಲಿ ಸಂಗ್ರಹಿಸಿದ ಈ ಹಣದಲ್ಲಿ ಜಮೀನು ಖರೀದಿಸಿದ್ದೂ ಆಯ್ತು, ಇದೀಗ ಅದರ ಹಸ್ತಾಂತರ ಪ್ರಕ್ರಿಯೆಯೂ ನಡೆದಿದೆ.


    ಇದನ್ನೂ ಓದಿ: Success Story: ಕಾಲಿಲ್ಲದಿದ್ರೂ ಕೃಷಿ ಮಾಡ್ತಾರೆ! ಸಮಸ್ಯೆಗಳಿಗೆ ಸವಾಲ್ ಹಾಕಿರೋ ಸ್ವಾಭಿಮಾನಿ


    ಇನ್ನೂ ಹಲವು ಸರ್ಕಾರಿ ಕಟ್ಟಡಕ್ಕೂ ಭೂಮಿ
    5 ಎಕ್ರೆ ಜಮೀನಿನಲ್ಲಿ ಎರಡೂವರೆ ಎಕರೆ ಶಿಕ್ಷಣ ಇಲಾಖೆಗೆ ಹಾಗೂ ಇನ್ನೆರಡೂವರೆ ಎಕರೆ ಜಮೀನು ಇತರೆ ಸರ್ಕಾರಿ ಕಚೇರಿಗಳ ಕಟ್ಟಡಕ್ಕಾಗಿ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಕೊಪ್ಪಳದ ಗವಿ ಮಠದ ಸ್ವಾಮೀಜಿ, ಸೊನ್ನ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಗ್ರಾಮಸ್ಥರು ಡಿಡಿಪಿಐ ಸಕ್ರಪ್ಪಗೌಡ ಅವರಿಗೆ ಶಾಲೆ ಕಟ್ಟಡಕ್ಕಾಗಿ ಜಮೀನು ಹಸ್ತಾಂತರಿಸಿದ್ರು.


    ಜಮೀನನ್ನೂ ಹಸ್ತಾಂತರಿಸಲಾಯ್ತು
    ಅಲ್ಲದೆ ಸುಸಜ್ಜಿತ ನೂತನ ಸರ್ಕಾರಿ ಶಾಲೆ ಕಟ್ಟಡಕ್ಕಾಗಿ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೂಮಿ ಪೂಜೆ ಮಾಡಲಾಯಿತು. ಇದೇ ವೇಳೆ ಜಮೀನು ಹಸ್ತಾಂತರ ಪಡೆದ ಡಿಡಿಪಿಐ, ಮಾದರಿ ರೀತಿಯಲ್ಲಿ ಸುಸಜ್ಜಿತ ಶಾಲೆ ಕಟ್ಟೋದಾಗಿ ಭರವಸೆ ನೀಡಿದ್ರು.


    ಇದನ್ನೂ ಓದಿ: Kalaburagi: ಸರ್ಕಾರಿ ಶಾಲೆ ಕಟ್ಟಲು ಜೋಳಿಗೆ ಹಿಡಿದ ಸ್ವಾಮೀಜಿ; ಸಂಗ್ರಹವಾಯ್ತು 40 ಲಕ್ಷ!


    ಒಟ್ಟಿನಲ್ಲಿ ಸ್ವಾಮೀಜಿ ಅವರ ನೇತೃತ್ವ, ಗ್ರಾಮಸ್ಥರ ಒಗ್ಗಟ್ಟು ಮಕ್ಕಳ ಭವಿಷ್ಯಕ್ಕೊಂದು ಭದ್ರ ಬುನಾದಿ ಕಲ್ಪಿಸಲಿದೆ. ಸಂತರಾದವ್ರು ಧಾರ್ಮಿಕ ಚಟುವಟಿಕೆಗಷ್ಟೇ ಸೀಮಿತವಾಗದೇ ತೋರಿದ ಈ ನಿಸ್ವಾರ್ಥ ಸೇವೆ ಇತರರಿಗೂ ಮಾದರಿ ಎನಿಸಿದೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: