ಕಲಬುರಗಿ: ನೀಟಾಗಿ ಪಾರ್ಕ್ ಮಾಡಿರೋ ಬೈಕ್ಗಳು. ಅಷ್ಟೇ ನೀಟಾಗಿ ಪಾರ್ಕಿಂಗ್ ಮಾಡಿಸ್ತಿರೋ ವ್ಯಕ್ತಿ. ಹೌದು, ಈ ವ್ಯಕ್ತಿ ನಮ್ಮಂತೆ ಸಾಮಾನ್ಯನಲ್ಲ. ಆದ್ರೆ ಸ್ವಾಭಿಮಾನದ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ! ಹಾಗಿದ್ರೆ ಸಮಸ್ಯೆಯ ನಡುವೆಯೂ ಬದುಕು ಕಟ್ಟಿಕೊಂಡಿರೋ (Positive Story) ಈ ಛಲಗಾರ ಯಾರು ಅಂತೀರಾ? ಹೇಳ್ತೀವಿ ನೋಡಿ.
ಯೆಸ್, ಹೇಳೋದಕ್ಕೆ ಇವ್ರಿಗೆ ಸರಿಯಾಗಿ ಮಾತೂ ಬರಲ್ಲ, ಇನ್ನೇನಾದ್ರೂ ಎತ್ತಿ ಇಡ್ಬೇಕೆಂದ್ರೆ ಇವರ ಕೈಗಳಿಗೆ ಸ್ವಾಧೀನವಿಲ್ಲ. ಆದ್ರೆ ಸ್ವಾಭಿಮಾನದ ಬದುಕಿಗೆ ಅದ್ಯಾವ ಸ್ವಾಧೀನ? ಅದ್ಯಾವ ಅಂಗವೈಕಲ್ಯ? ಅಂತ ತನಗೆ ಬಾಧಿಸಿದ ಸಮಸ್ಯೆಯನ್ನ ಕಲಬುರಗಿಯ ನಾಗೇಂದ್ರ ಸಿನ್ನೂರ ಅವರು ಶಾಪ ಅಂದ್ಕೊಂಡಿಲ್ಲ. ಬದುಕುವ ಛಲದಿಂದ ಮುನ್ನುಗ್ಗಿ ಕಲಬುರಗಿ ಡಿಸಿ ಕಚೇರಿಯ ಪಾರ್ಕಿಂಗ್ ನಿರ್ವಹಣೆ ಕೆಲಸ ಪಡೆದುಕೊಂಡಿದ್ದಾರೆ. ವಿವಾಹಿತರಾಗಿರುವ ನಾಗೇಂದ್ರ ಅವರು ಯಾರ ಮುಂದೆನೂ ಕೈ ಚಾಚದೇ ತಂದೆ, ತಾಯಿ, ಪತ್ನಿ, ಮಕ್ಕಳ ಜೊತೆ ಖುಷಿಯ ಜೀವನ ಸಾಗಿಸ್ತಿದ್ದಾರೆ.
ಜಿಲ್ಲಾಧಿಕಾರಿಯೇ ನೀಡಿದ ಜವಾಬ್ದಾರಿ
1997ರಲ್ಲಿ ನಾರಾಯಣಸ್ವಾಮಿ ಎಂಬುವವರು ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದರು. ಆಗ ಜಿಲ್ಲಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ವಿಶೇಷಚೇತನ ಮೀರಿಯೂ ನಾಗೇಂದ್ರ ಶ್ರಮಪಡುತ್ತಿರೋದನ್ನ ನೋಡಿದ ಜಿಲ್ಲಾಧಿಕಾರಿ ನಾರಾಯಣಸ್ವಾಮಿಯವರು ಇವರಿಗೆ ಪಾರ್ಕಿಂಗ್ ನಿರ್ವಹಣೆ ಜವಾಬ್ದಾರಿ ವಹಿಸಿದ್ದರು. ಹೀಗೆ ಕಳೆದ 25 ವರ್ಷಗಳಿಂದ ನಾಗೇಂದ್ರ ಅವರು ಆ ಜವಾಬ್ದಾರಿಯನ್ನ ಅಷ್ಟೇ ಅಚ್ಚುಕಟ್ಟಾಗಿ ನೋಡಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: Kalaburagi: ಮೂರನೇ ಕ್ಲಾಸ್ ಕಲಿತ ಇವರೇ ಕಲಬುರಗಿಯ ವಿಶ್ವೇಶ್ವರಯ್ಯ!
ಎಷ್ಟು ಹಣ ಕೊಟ್ರೂ ಓಕೆ!
ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸಿದವರಿಗೆ ಇಷ್ಟೇ ಕೊಡಿ ಅಂತ ನಾಗೇಂದ್ರ ಅವರು ಕೇಳೋದಿಲ್ಲ. ಅವರು ಎಷ್ಟು ಕೊಡ್ತಾರೆಯೋ ಅಷ್ಟನ್ನೇ ಪಡೆಯುತ್ತಾರೆ. ಕೆಲವರು ಇವರ ಸ್ವಾವಲಂಬಿ ಕಾರ್ಯಕ್ಕೆ ಮೆಚ್ಚಿ ಹೆಚ್ಚಿನ ಹಣವೂ ಕೊಟ್ಟು ಹೋಗುತ್ತಾರೆ.
ಇದನ್ನೂ ಓದಿ: Kalaburagi: ಕೆರೆ ಹೂಳೆತ್ತಲು ರೈತರಿಂದ ಲಕ್ಷ ಲಕ್ಷ ಹಣ ಸಂಗ್ರಹ!
ಪಾರ್ಕಿಂಗ್ ನಿರ್ವಹಿಸಿದ ಹಣದಲ್ಲಿಯೇ ತನ್ನ ಕುಟುಂಬ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಒಟ್ಟಿನಲ್ಲಿ ನಾಗೇಂದ್ರ ಅವರ ಸ್ವಾಭಿಮಾನಿ ಬದುಕು ನಿಜಕ್ಕೂ ಖುಷಿ ಕೊಡುವಂತಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ