• Home
  • »
  • News
  • »
  • kalburgi
  • »
  • Positive Story: ಕಾಂಪೌಂಡ್ ಮುಂದೆ ಮೂತ್ರ ವಿಸರ್ಜನೆ ತಪ್ಪಿಸೋಕೆ ಮಾಸ್ಟರ್​ಪ್ಲಾನ್!

Positive Story: ಕಾಂಪೌಂಡ್ ಮುಂದೆ ಮೂತ್ರ ವಿಸರ್ಜನೆ ತಪ್ಪಿಸೋಕೆ ಮಾಸ್ಟರ್​ಪ್ಲಾನ್!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಲಬುರಗಿಯ ನಗರದ ಸೌಂದರ್ಯವೂ ಹೆಚ್ಚಾಗಿ ಸೆಲ್ಫಿ ಝೋನ್ ಆಗಿಬಿಟ್ಟಿವೆ ಈ ಕಾಂಪೌಂಡ್​ಗಳು!

  • Share this:

    ಕಲಬುರಗಿ: ಅರೇ! ಇದೇನಿದು? ಕಾಂಪೌಂಡ್ ಮೇಲೆಲ್ಲ ಸೂಪರ್ ಆಗಿರೋ ಚಿತ್ರಗಳು! ರಸ್ತೆ ಬದಿ ಇರುವ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರಗಳು, ಹಾರ್ತಿರೋ ಚಿಟ್ಟೆ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರೋ ಸಾರ್ವಜನಿಕರು, ಇದ್ಯಾವುದೂ ಮ್ಯೂಸಿಯಂ ಅಂದುಕೊಂಡ್ರಾ. ಹಾಗಾದ್ರೆ ನಿಮ್ಮ ಊಹೆ ನಿಜಕ್ಕೂ ತಪ್ಪು! ಕಾಂಪೌಂಡ್ ಕಂಡ್ರೆ ಸಾಕು ಪೋಸ್ಟರ್ ಅಂಟಿಸೋದನ್ನೇ ಕಾಣೋ ಈ ಕಾಲ್ದಲ್ಲಿ ಉದ್ದುದ್ದಾ ಕಂಪೌಂಡ್ ಮೇಲ್ಗಡೆ ಈ ಸುಂದರ ಚಿತ್ರಗಳು ಹೇಗೆ ಬಂದ್ವು ಅಂದ್ಕೊಂಡ್ರಾ? ಕಾಂಪೌಂಡ್ ಗೋಡೆಗೆ ಮೂತ್ರ ವಿರ್ಜನೆ ಮಾಡೋದನ್ನು ತಡೆಯೋಕೆ ಕಲಬುರಗಿ (Kalaburagi) ಪಾಲಿಕೆ ಅಧಿಕಾರಿಗಳು ಕಂಡುಕೊಂಡ ಮಾಸ್ಟರ್ ಪ್ಲಾನ್ ಇದು! ಕಾಂಪೌಂಡ್ ಮೇಲೆ ಸುಂದರ ಚಿತ್ರಗಳನ್ನು ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸೋಕೆ ಕಲಬುರಗಿಲಿ (Kalaburagi Positive News) ಪ್ರಯತ್ನ ನಡೀತಿದೆ.




    ಇದನ್ನೂ ಓದಿ: Nose Flute: ಮೂಗಿನಿಂದ ಕೊಳಲು ನುಡಿಸೋ ಕಲಬುರಗಿ ಕಲಾವಿದ!




    ಇದನ್ನೂ ಓದಿ: Kalaburgi: 8 ಸಾವಿರ ಸಂಬಳ; ಆದ್ರೆ ಇವರೇ ಕಲಬುರಗಿಯ ಅನ್ನದಾಸೋಹಿ!


    ರಸ್ತೆ ಬದಿಯ ಕಾಂಪೌಂಡ್​ಗಳ ಮೇಲೆ ಭಿತ್ತಿಚಿತ್ರ ಅಂಟಿಸೋದು ಮತ್ತು ಮೂತ್ರ ವಿಸರ್ಜನೆ ಮಾಡೋದನ್ನ ತಡೆಯಲು ಕಲಬುರಗಿಯ ಎಲ್ಲೆಡೆ ಹೀಗೆ ಚಿತ್ರ ಬಿಡಿಸಲಾಗ್ತಿದೆ. ಇದರಿಂದ ಯಾರೂ ಕಾಂಪೌಂಡ್ ಮೇಲೆ ಪೋಸ್ಟರ್ ಅಂಟಿಸುತ್ತಿಲ್ಲ. ಕಲಬುರಗಿಯ ನಗರದ ಸೌಂದರ್ಯವೂ ಹೆಚ್ಚಾಗಿ ಸೆಲ್ಫಿ ಝೋನ್ ಆಗಿಬಿಟ್ಟಿವೆ ಈ ಕಾಂಪೌಂಡ್​ಗಳು!


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: