ಕಲಬುರಗಿ: ನವಣೆ, ಬರಗ, ಊದಲು, ಹಾರಕ, ಸಾಮೆ ಹೀಗೆ ಸಿರಿಧಾನ್ಯಗಳ ಸಾಲು. ಅಲ್ಲೇ ತಯಾರಿಕೆ, ಅಲ್ಲಿಂದಲೇ ರಫ್ತು. ಪ್ರಧಾನಿ ಮೋದಿ (PM Narendra Modi) ಕೂಡಾ ಮೆಚ್ಚಿಕೊಂಡ ಸಿರಿಧಾನ್ಯಗಳ ಪ್ರೊಡಕ್ಷನ್ ಸೆಂಟರ್ ಇದು. ಹಾಗಿದ್ರೆ ಏನಿದರ ಸ್ಪೆಷಲ್? ಮನ್ ಕೀ ಬಾತ್ ನಲ್ಲಿ ಸ್ಥಾನ ಪಡೆದಿದ್ದು ಹೇಗೆ? ಎಲ್ಲವನ್ನೂ ಹೇಳ್ತೀವಿ ನೋಡಿ.
ಮನ್ ಕೀ ಬಾತ್ನಲ್ಲಿ ಮೆಚ್ಚುಗೆ
ಇದು ಕಲಬುರಗಿಯ ಆಳಂದ ತಾಲೂಕಿನಲ್ಲಿರುವ ಭೂತಾಯಿ ಮಿಲೆಟ್ಸ್ ಫಾರ್ಮರ್ ಪ್ರೊಡ್ಯೂಸರ್ ಅನ್ನೋ ಪುಟ್ಟದಾದ ಕಂಪೆನಿ. ಅದ್ಯಾವಾಗ ಪ್ರಧಾನಿ ಮೋದಿ ಅವರು ತಮ್ಮ ಮನ್ ಕೀ ಬಾತ್ನಲ್ಲಿ ಈ ಸಿರಿಧಾನ್ಯಗಳ ಸಂಸ್ಥೆ ಬಗ್ಗೆ ಮಾತಾಡಿದ್ರೋ ಅಂದಿನಿಂದ ಭೂತಾಯಿ ಮಿಲೆಟ್ಸ್ ಕಲಬುರಗಿಯ ಕೀರ್ತಿಯನ್ನು ಹೆಚ್ಚಿಸಿದೆ.
ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು!
ಭೂತಾಯಿ ಮಿಲೆಟ್ಸ್ ಫಾರ್ಮರ್ ಪ್ರೊಡ್ಯೂಸರ್ ಬಗ್ಗೆ ಮನ್ ಕಿ ಬಾತ್ನಲ್ಲಿ ಪ್ರಧಾನ ಮಂತ್ರಿಯವರು ಮನತುಂಬಿ ಶ್ಲಾಘಿಸಿದ್ದರು. ನೋಡೋದಕ್ಕೆ ಪುಟ್ಟದಾದ ಕಂಪೆನಿ ಇದಾದರೂ ದೇಶಹ ಹಲವು ಭಾಗಗಳಿಗೆ ಇಲ್ಲಿಂದಲೇ ಸಿರಿಧಾನ್ಯಗಳನ್ನು ಸರಬರಾಜು ಮಾಡುತ್ತಿರುವುದು ಈ ಭೂತಾಯಿ ಮಿಲೆಟ್ಸ್ ಹೆಗ್ಗಳಿಕೆ.
ಸಿರಿಧಾನ್ಯಗಳ ರಫ್ತು
ಒಂದು ವರ್ಷದ ಹಿಂದೆ ಆಳಂದ ತಾಲೂಕಿನ ತಡಕಲ್ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರು ಸೇರಿಕೊಂಡು ಎಫ್ ಪಿಓ ಸ್ಥಾಪನೆ ಮಾಡಿದ್ರು. ಅಂದಿನಿಂದ ಇಂದಿನವರೆಗೂ ವಿವಿಧ ಸಿರಿಧಾನ್ಯಗಳನ್ನು ತಯಾರಿಸಿ ದೇಶದ ನಾನಾ ಭಾಗಗಳಿಗೆ ರಫ್ತು ಮಾಡಲಾಗುತ್ತಿದೆ.
ಉತ್ತಮ ವಹಿವಾಟು
ಭೂತಾಯಿ ಮಿಲೆಟ್ಸ್ ಫಾರ್ಮರ್ ಪ್ರೊಡ್ಯೂಸರ್ನಲ್ಲಿ ಪ್ರಮುಖ ಸಿರಿಧಾನ್ಯಗಳಾದ ನವಣೆ, ಬರಗ, ಊದಲು, ಹಾರಕ, ಸಾಮೆ ಧಾನ್ಯಗಳನ್ನು ಬೆಳೆಯಲಾಗುತ್ತದೆ ಜೊತೆಗೆ ಕಬ್ಬಿನಿಂದ ತಯಾರಿಸಲಾಗುವ ಸಿರಿ ಮಿಲೆಟ್ಸ್ ಫೌಡರ್, ಬೆಲ್ಲ, ಅರಸಿಣ ಪುಡಿ, ಎಳ್ಳಿನ ಉಂಡೆ, ಚಿಕ್ಕಿಗಳನ್ನ ತಯಾರು ಮಾಡಲಾಗುತ್ತದೆ. ಸಂಸ್ಥೆಯು ಕಳೆದ ವರ್ಷ 12ಲಕ್ಷ ರೂಪಾಯಿಯ ವಹಿವಾಟು ನಡೆಸಿದೆಯಂತೆ.
ಸಾವಯವ ಬೆಳೆ
ಭೂತಾಯಿ ಮಿಲೆಟ್ಸ್ ಫಾರ್ಮರ್ ಪ್ರೊಡ್ಯೂಸರ್ ಸಂಸ್ಥೆಗೆ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಕೇಂದ್ರ ಕೃಷಿ ಇಲಾಖೆಯಿಂದ ಆರ್ಥಿಕ ನೆರವು ದೊರೆತಿದೆ. ಹೈದರಾಬಾದ್ ಇನ್ಸ್ಟಿಟ್ಯೂಟ್ ಆಫ್ ಮಿಲ್ಲಡ್ಸ್ ರಿಸರ್ಚ್ ಸಂಸ್ಥೆ ಹಾಗೂ ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ ಹಾಗೂ ಮಾರ್ಗದರ್ಶನ ಪಡೆಯಲಾಗಿದೆ.
ಮಕ್ಕಳು, ಮಹಿಳೆಯರಿಗೆ ಆರೋಗ್ಯದಾಯಕ ರಾಸಾಯನಿಕ ರಹಿತ ಆಹಾರ ಪದಾರ್ಥಗಳನ್ನು ತಯಾರಿಸಿ ಅತಿ ಹೆಚ್ಚು ಸರಬರಾಜು ಮಾಡವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಸಾವಯವದಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಿನಲ್ಲಿ ಭೂತಾಯಿ ಮಿಲೆಟ್ಸ್ ಫಾರ್ಮರ್ ಪ್ರೊಡ್ಯೂಸರ್ ಸಿರಿಧಾನ್ಯ ಸಂಸ್ಥೆ ಮನ್ ಕೀ ಬಾತ್ ಮೂಲಕ ಇಡೀ ದೇಶದ ಗಮನ ಸೆಳೆದಿದ್ದು ವಿಶೇಷ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ