• Home
  • »
  • News
  • »
  • kalburgi
  • »
  • Success Story: ಕೆಲಸ ಸಿಕ್ಕರೂ ಕೃಷಿ! ಲಕ್ಷ ಲಕ್ಷ ಆದಾಯ ಗಳಿಸಿದ ಪಾರ್ಟ್​ ಟೈಮ್ ರೈತ

Success Story: ಕೆಲಸ ಸಿಕ್ಕರೂ ಕೃಷಿ! ಲಕ್ಷ ಲಕ್ಷ ಆದಾಯ ಗಳಿಸಿದ ಪಾರ್ಟ್​ ಟೈಮ್ ರೈತ

X
ಇವರ ಸಕ್ಸಸ್ ಸ್ಟೋರಿ ನೋಡಿ

"ಇವರ ಸಕ್ಸಸ್ ಸ್ಟೋರಿ ನೋಡಿ"

ಪೇರಳೆಯಿಂದ ಜೇಬು ತುಂಬಿಸಿಕೊಳ್ತಿರೋ ಇವರು ವೈಟ್ ಕಾಲರ್ ಉದ್ಯೋಗಕ್ಕಷ್ಟೇ ಸೀಮಿತವಾಗಿರುವವರಿಗೆ ಮಾದರಿಯಾಗಿದ್ದಾರೆ.

  • Share this:

    ಗ್ರೀನ್ ಆ್ಯಪಲ್​ನಂತೆ ಕಂಗೊಳಿಸುತ್ತಿರೋ ಪೇರಲೆ.ಉತ್ತಮ ಫಸಲು ಬಂದ ಖುಷಿಯಲ್ಲಿ ಪಾರ್ಟ್ ಟೈಮ್ ಕೃಷಿಕ. ಇನ್ನೇನು ಮಾರ್ಕೆಟ್ ಸೇರೋಕೆ ಸಿದ್ಧವಾಗಿರೋ ಹಣ್ಣುಗಳು. ಇದು ಕೇವಲ ಇರೋ ಒಂದು ಜಾಬ್​ಗಷ್ಟೇ (Part Time Agriculture) ಸೀಮಿತವಾಗದೇ ಸಕ್ಸಸ್ ಆದ (Success Story) ಬೆಳೆಗಾರರ ಬದುಕಿನ ಕಥೆ. ಯೆಸ್, ಹೊಲದಲ್ಲಿ ಪೇರಳೆ ಹಣ್ಣಗಳ ಕೊಯ್ಲು ಮಾಡುತ್ತಿರೋ ಇವರ ಹೆಸರು ಬಸವರಾಜ ನಡುವಿನಮನಿ ಅಂತ. ಕಲಬುರಗಿ ಸಮೀಪದ  (Kalaburagi News) ನಾಗನಹಳ್ಳಿ ಗ್ರಾಮದ ನಿವಾಸಿ, ಇವರು ಕಲಬುರಗಿ ಗೆಸ್ಟ್ ಹೌಸ್​ನಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸ್ತಾರೆ. ಅಷ್ಟಕ್ಕೇ ಸೀಮಿತವಾಗದ ಬಸವರಾಜ್ ನಡುವಿನಮನಿ, ತೋಟಗಾರಿಕೆ ಮಾಡೋಕೆ ಮುಂದಾಗ್ತಾರೆ. ಆಗ ಅವರಿಗೆ ಹೊಳೆದಿದ್ದೇ ಪೇರಳೆ (Guava Farming) ಕೃಷಿ.


    ಆಂಧ್ರಪ್ರದೇಶದ ವಿಜಯವಾಡದಿಂದ ಒಟ್ಟು 1650 ತೈವಾನ್ ಪಿಂಕ್ ತಳಿಯ ಪೇರಳೆ ಗಿಡಗಳನ್ನು ತಂದು ನಾಟಿ ಮಾಡ್ತಾರೆ. ಅದಕ್ಕಾಗಿ ಒಂದು ಲಕ್ಷ ರೂಪಾಯಿವರೆಗೆ ಖರ್ಚು ಮಾಡ್ತಾರೆ. ಇದೀಗ ಅವರ ಶ್ರಮಕ್ಕೆ ತಕ್ಕ ಹಾಗೆ ಭೂಮಿ ತಾಯಿಯು ಕೈ ಹಿಡಿದಿದ್ದು, ಉತ್ತಮ ಫಸಲು ಬಂದಿದೆ.


    ಇದನ್ನೂ ಓದಿ: Yakshagana: ಯಕ್ಷಪ್ರೇಮಿಗಳೇ ಇಲ್ಲಿ ಕೇಳಿ, ಸುಪ್ರೀಂ ಕೋರ್ಟ್ ಆದೇಶಕ್ಕೂ ಸಿಕ್ತು ವಿನಾಯಿತಿ


    ಒಂದೇ ವರ್ಷದಲ್ಲಿ ಬರೋಬ್ಬರಿ ಎರಡು ಟನ್ ಪೇರಲೆ ಮಾರಾಟ
    ತೋಟಗಾರಿಕೆ ಇಲಾಖೆ ಸಹಾಯದಿಂದ ಬಸವರಾಜ್ ಹನಿ ನೀರಾವರಿ ಮೂಲಕ ಸಸಿಗಳಿಗೆ ನೀರುಣಿಸುತ್ತಿದ್ದಾರೆ. ಎರೆಹುಳು ಗೊಬ್ಬರ ನೀಡಿ ಪೇರಳೆ ಗಿಡಗಳನ್ನು ಆರೈಕೆ ಮಾಡ್ತಿದ್ದಾರೆ. ತೈವಾನ್ ಪಿಂಕ್ ತಳಿಯ ಪೇರಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆ. ಅದೇ ಕಾರಣಕ್ಕೆ ಬಸವರಾಜ್ ಅವ್ರ ಒಂದೇ ವರ್ಷದಲ್ಲಿ ಬರೋಬ್ಬರಿ ಎರಡು ಟನ್ ಪೇರಳೆ ಬೆಳೆದು ಮಾರಾಟ ಮಾಡಿದ್ದಾರೆ. 9 ಲಕ್ಷ ರೂಪಾಯಿವರೆಗೂ ಆದಾಯ ಪಡೆದಿದ್ದಾರೆ.


    ಇದನ್ನೂ ಓದಿ: Emotional Story: 360 ಕಿಮೀ, 36 ದಿನ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರನಾಡು ಯುವಕನ 'ಭೀಷ್ಮ'ಪಯಣ


    ವೈಟ್ ಕಾಲರ್ ಜಾಬ್​ಗಷ್ಟೇ ಸೀಮಿತವಾಗ್ಬೇಡಿ
    ಬಸವರಾಜ್ ನಡುವನಿಮನಿ ಅವ್ರು ಕೇವಲ ತಮ್ಮ ಉದ್ಯೋಗಕ್ಕಷ್ಟೇ ಜೋತು ಬೀಳದೇ ಕೃಷಿಯಲ್ಲೂ ತೊಡಗಿಸಿಕೊಂಡು ಬದುಕನ್ನ ಹಸನಾಗಿಸಿಕೊಂಡಿದ್ದಾರೆ. ಪೇರಳೆಯಿಂದ ಜೇಬು ತುಂಬಿಸಿಕೊಳ್ತಿರೋ ಇವರು ವೈಟ್ ಕಾಲರ್ ಉದ್ಯೋಗಕ್ಕಷ್ಟೇ ಸೀಮಿತವಾಗಿರುವವರಿಗೆ ಮಾದರಿಯಾಗಿದ್ದಾರೆ.


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: