ಕಲಬುರಗಿ: ಹೊಲದಲ್ಲೇ ಮೂಟೆ ಕಟ್ಟಿ ಹಾಕಿರೋ ಈರುಳ್ಳಿ (Onion) ಚೀಲಗಳು. ನಿರೀಕ್ಷಿತ ಬೆಲೆ (Price) ಬಾರದೇ ಕಂಗಾಲಾಗಿರೋ ರೈತ (Farmer). ನಿಜ, ಈ ಬಾರಿ ಈರುಳ್ಳಿ ತನ್ನನ್ನು ಬೆಳೆದ ಮಾಲಕನ ಕಣ್ಣಲ್ಲೇ ನೀರು (Cry) ತರಿಸುತ್ತಿರುವುದು ಖೇದಕರ.
ಬೆಲೆ ಕುಸಿತ
ಯೆಸ್, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ರೈತ ಮಾಣೀಕರಾವ್ ಮಾಲಿಪಾಟೀಲ ಪಾಲಿಗೆ ಈ ಬಾರಿ ಈರುಳ್ಳಿ ಕಣ್ಣೀರ ಸರಕಾಗಿದೆ. ತನ್ನ 4 ಎಕ್ರೆ ಜಾಗದಲ್ಲಿ ಬೆಳೆದ ಈರುಳ್ಳಿಯು ಭರ್ಜರಿಯಾಗಿಯೇ ಫಸಲು ನೀಡಿತ್ತು. ಆದರೆ ಬೆಳೆಗಾರನಿಗೆ ಸಿಕ್ಕ ಬೆಲೆ ಅತ್ಯಲ್ಪವಾಗಿದ್ದು, ರೈತ ಲಕ್ಷಾಂತರ ರೂಪಾಯಿಯ ನಷ್ಟ ಅನುಭವಿಸುವಂತಾಗಿದೆ.
ಕಡಿಮೆ ಲಾಭ
ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದ ಈರುಳ್ಳಿ ಮಾರಾಟವಾಗಿದ್ದು 4 ರೂಪಾಯಿಯಿಂದ ಹಿಡಿದು 8.79 ರೂ. ಗಳಷ್ಟೇ. ಈಗಾಗಲೇ ಬೆಂಗಳೂರಿಗೆ ಈರುಳ್ಳಿ ಮಾರಾಟ ಮಾಡಿದ ರೈತ, 18 ಟನ್ ಈರುಳ್ಳಿ ಮಾರಾಟ ಮಾಡಿದರೂ ಸಿಕ್ಕಿದ್ದು ಬರೇ 1.37 ಲಕ್ಷ ರೂಪಾಯಿ ಅಷ್ಟೇ.
ಖರ್ಚು ಜಾಸ್ತಿ
ಅದರಲ್ಲಿ ಲಾರಿ ಬಾಡಿಗೆ,ಹಮಾಲಿ ಇನ್ನಿತರ ಖರ್ಚು ಸೇರಿದರೆ 50 ಸಾವಿರ ದಾಟಿವೆ. 87 ಸಾವಿರ ರೂಪಾಯಿಯಷ್ಟೇ ಹಣ ಈರುಳ್ಳಿ ಬೆಳೆಗಾರ ಮಾಣೀಕರಾವ್ ಕೈಗೆ ಸಿಕ್ಕಿದ್ದು, ಲಕ್ಷ ರೂಪಾಯಿ ಲಾಭದ ನಿರೀಕ್ಷೆ ಹುಸಿಯಾಗಿದ್ದು ನಿರಾಸೆ ಎದುರಿಸುವಂತಾಗಿದೆ.
ಅಷ್ಟೇ ಅಲ್ದೇ ಇನ್ನು 7 ಟನ್ ಈರುಳ್ಳಿ ಹೊಲದಲ್ಲೇ ಬಾಕಿಯಾಗಿದ್ದು, ಉತ್ತಮ ದರಕ್ಕಾಗಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಈರುಳ್ಳಿ ಪದಾರ್ಥವು ಕಲಬುರಗಿಯ ಶ್ರಮಿಕ ಕೃಷಿಕನ ಪಾಲಿಗೆ ಕಣ್ಣೀರು ತರಿಸಿದ್ದು ಖೇದಕರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ